ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ರೋಬೋಟ್ ಬರೆದ ವರದಿಯನ್ನು ಪ್ರಕಟ ಮಾಡಿದ ಚೀನಾ ದಿನಪತ್ರಿಕೆ

ಎಲ್ಲ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆಯ ಯಂತ್ರಗಳು ಮನುಷ್ಯರನ್ನು ಬದಲಿಸುತ್ತಿರುವ ಕಾಲದಲ್ಲಿ ಚೀನಾ ದೇಶದಲ್ಲಿ ಪತ್ರಿಕಾ ವರದಿಗಾರರನ ಸ್ಥಾನವನ್ನು ರೋಬೋಟ್ ತುಂಬಿದೆ. ಮೊದಲ ಬಾರಿಗೆ,

ಗುಅನ್ಜಜೌ: ಎಲ್ಲ ಕ್ಷೇತ್ರಗಳಲ್ಲೂ ಕೃತಕ ಬುದ್ಧಿಮತ್ತೆಯ ಯಂತ್ರಗಳು ಮನುಷ್ಯರನ್ನು ಬದಲಿಸುತ್ತಿರುವ ಕಾಲದಲ್ಲಿ ಚೀನಾ ದೇಶದಲ್ಲಿ ಪತ್ರಿಕಾ ವರದಿಗಾರರನ ಸ್ಥಾನವನ್ನು ರೋಬೋಟ್ ತುಂಬಿದೆ. ಮೊದಲ ಬಾರಿಗೆ, ಚೀನಾ ದಿನಪತ್ರಿಕೆಯೊಂದು ಬುಧವಾರ ರೋಬೋಟ್ ಬರೆದ ವರದಿಯನ್ನು ಪ್ರಕಟಿಸಿದೆ. 
ಗುಅನ್ಜಜೌ ಮೂಲದ ಸದರನ್ ಮೆಟ್ರೊಪಾಲಿಸ್ ಡೈಲಿ, ವಸಂತ ಋತುವಿನ ಹಬ್ಬದ ಪ್ರವಾಸ ದಟ್ಟಣೆಯ ಬಗ್ಗೆ ರೋಬೋಟ್ ಬರೆದ ೩೦೦ ಅಕ್ಷರಗಳ ಲೇಖನವನ್ನು ಪ್ರಕಟ ಮಾಡಿದೆ ಎಂದು ಚೈನಾ ಡೈಲಿ ವರದಿ ಮಾಡಿದೆ. 
ಕ್ಸಿಯೋ ನ್ಯಾನ್ ಈ ಲೇಖನ ಬರೆಯಲು ತೆಗೆದುಕೊಂಡ ಸಮಯ ಕೇವಲ ೧ ಸೆಕಂಡ್. ಇದು ಸಣ್ಣ ಮತ್ತು ದೊಡ್ಡ ವರದಿಗಳನ್ನು ಬರೆಯಲು ಸುಸಜ್ಜಿತವಾಗಿದೆ ಎಂದು ಪೀಕಿಂಗ್ ವಿಶ್ವವಿದ್ಯಾಲಯದ ಪ್ರೊಫೆಸರ್ ವಾನ್ ಕ್ಸಿಯೋಜನ್ ಹೇಳಿದ್ದಾರೆ. ಇವರು ರೋಬೋಟ್ ತಂತ್ರಜ್ಞಾನ ಅಭಿವೃದ್ಧಿಯ ತಂಡದ ಮುಖ್ಯಸ್ಥರು 
"ಇತರ ಮನುಷ್ಯ ವರದಿಗಾರರಿಗೆ ಹೋಲಿಸಿದಾಗ, ಕ್ಸಿಯೋ ನ್ಯಾನ್ ಗೆ ಮಾಹಿತಿ ಸಂಗ್ರಹ ಮತ್ತು ಪರಿಶೀಲನೆಯಲ್ಲಿ ಹೆಚ್ಚು ಪರಿಶ್ರಮವಿದೆ ಮತ್ತು ವರದಿಗಳನ್ನು ಬೇಗ ಬರೆಯಬಲ್ಲದು" ಎಂದು ಅವರು ಹೇಳಿದ್ದಾರೆ. 
"ಆದರೆ ಎಲ್ಲ ವರದಿಗಾರರನ್ನು ಈ ರೋಬೋಟ್ ಗಳು ಶೀಘ್ರದಲ್ಲೇ ಬದಲಾಯಿಸುತ್ತವೆ ಎಂದೇನಿಲ್ಲ. ಸದ್ಯಕ್ಕೆ ರೋಬೋಟ್ ಗಳು ಮುಖಾಮುಖಿ ಸಂದರ್ಶನಗಳನ್ನು ನಡೆಸಬಲ್ಲವು ಆದರೆ ಮುಂದಿನ ಪ್ರಶ್ನೆಗಳ ಬಗ್ಗೆ ಹೊಸದಾಗಿ ಬೇರೊಂದನ್ನು ಬುದ್ದಿವಂತಿಕೆಯಿಂದ ಸೇರಿಸಲು ಸಾಧ್ಯವಿಲ್ಲ. ಸಂದರ್ಶನ ಮತ್ತು ಮಾತುಕತೆಗಳಲ್ಲಿ ಯಾವುದು ಸುದ್ದಿ ಎಂದು ಸದ್ಯಕ್ಕೆ ಅವಕ್ಕೆ ಗ್ರಹಿಸಲು ಸಾಧ್ಯವಾಗುತ್ತಿಲ್ಲ" ಎಂದು ವಾನ್ ಹೇಳಿದ್ದಾರೆ. 
"ಆದರೆ ದಿನಪತ್ರಿಕೆ ಮತ್ತು ಇತರೆ ಮಾಧ್ಯಮಗಳಲ್ಲಿ ಹೆಚ್ಚುವರಿ ಸಹಾಯಕರಾಗಿ ಕೆಲಸ ಮಾಡಲು ರೋಬೋಟ್ ಗಳಿಗೆ ಸಾಧ್ಯ. ಸಂಪಾದಕ ಮತ್ತು ವರದಿಗಾರರ ಸಹಾಯಕರಾಗಿಯೂ" ಎಂದು ತಿಳಿಸವ ಅವರು, ಮಾಧ್ಯಮ ರೋಬೋಟ್ ಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಸದರ್ನ್ ಮೆಟ್ರೊಪಾಲಿಸ್ ಡೈಲಿ ಜೊತೆಗೂಡಿ ಪ್ರಯೋಗಾಲಯ ಸ್ಥಾಪಿಸುವ ಚಿಂತನೆಯಿದೆ ಎಂದು ಕೂಡ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video