ಶ್ರೀಹರಿಕೋಟಾ: ಭಾರತ ಇಂದು ಅತಿ ದೊಡ್ಡ ಅಂತರಿಕ್ಷ ರಾಜತಾಂತ್ರಿಕತೆಗೆ ಸಾಕ್ಷಿಯಾಯಿತು. ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ ಎಲ್ ವಿ-ಎಫ್ 09) ಜಿಸ್ಯಾಟ್ -9 ಅಥವಾ ದಕ್ಷಿಣ ಏಷ್ಯಾ ಉಪಗ್ರಹವನ್ನು ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಿಂದ ಭಾರತೀಯ ಕಾಲಮಾನ ಸಾಯಂಕಾಲ 4.57ಕ್ಕೆ ಉಡಾಯಿಸಿತು.
ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ಬೆಲೆ ಕಟ್ಟಲು ಸಾಧ್ಯವಾಗದ ಉಡುಗೊರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಣ್ಣಿಸಿರುವ ಜಿಸ್ಯಾಟ್-9 ಉಪಗ್ರಹದ ಉಡಾವಣೆ ಯಾವುದೇ ಅಡೆತಡೆಯಿಲ್ಲದೆ ನಿರಾತಂಕವಾಗಿ ನಡೆಯಿತು.ಉಪಗ್ರಹ ಉಡಾವಣೆಗೆ 28 ಗಂಟೆಗಳ ಕ್ಷಣಗಣನೆ ಇಂದು ಮಧ್ಯಾಹ್ನ 12.57ಕ್ಕೆ ಆರಂಭಗೊಂಡಿತ್ತು.