ಭಾರತದಲ್ಲಿ ಐಫೋನ್ X ಮಾರಾಟಕ್ಕೆ ಚಾಲನೆ: ವಿಶೇಷತೆಗಳೇನು ಗೊತ್ತೇ?
ಅ.27 ರಿಂದ ಮುಂಗಡ ಬುಕ್ಕಿಂಗ್ ಕಂಡಿದ್ದ ಐಫೋನ್ X ಭಾರತದಲ್ಲಿ ಸಂಜೆ 6 ಗಂಟೆಯಿಂದ ಮಾರಾಟಕ್ಕೆ ಲಭ್ಯವಾಗಿದೆ.
ಅ.27 ರಿಂದ ಮುಂಗಡ ಬುಕ್ಕಿಂಗ್ ಕಂಡಿದ್ದ ಐಫೋನ್ X ಭಾರತದಲ್ಲಿ ಸಂಜೆ 6 ಗಂಟೆಯಿಂದ ಮಾರಾಟಕ್ಕೆ ಲಭ್ಯವಾಗಿದೆ.
ಸಂಜೆ 6 ರಿಂದ ಆಫ್ ಲೈನ್ ಸ್ಟೋರ್ ಗಳಲ್ಲಿಯೂ ಐಫೋನ್ X ನ್ನು ಖರೀದಿಸಬಹುದಾಗಿದೆ. ಹಿಂದೆಂದಿಗಿಂತಲೂ ಈ ಬಾರಿ ಟೆಲಿಕಾಂ ಸಂಸ್ಥೆಗಳು ಐಫೋನ್ X ಗಾಗಿ ಆಕರ್ಷಕ ಆಫರ್ ಗಳನ್ನು ನೀಡಿದ್ದು ಐಫೋನ್ ನ್ನು ಮಾರಾಟ ಮಾಡಲು ಏರ್ ಟೆಲ್ ಹಾಗೂ ಜಿಯೋ ಆಪಲ್ ನೊಂದಿಗೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿವೆ.
ಭಾರತದಲ್ಲಿ ಐಫೋನ್ X ನ ಬೆಲೆ 89,000 (64GB) ತಷ್ಟಿದ್ದು, ಸಿಲ್ವರ್ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿರುವ ಇದೇ ಫೋನ್ ನ 256GB ಸ್ಟೋರೇಜ್ ಆವೃತ್ತಿಗೆ 1,02,000 ಬೆಲೆ ನಿಗದಿಯಾಗಿದೆ. ಪ್ರೀ-ಆರ್ಡರ್ ಪ್ರಾರಂಭವಾದ ಕೇವಲ ಅರ್ಧ ಗಂಟೆಯಲ್ಲಿಯೇ ಐಫೋನ್ X ಔಟ್ ಆಫ್ ಸ್ಟಾಕ್ ಆಗಿತ್ತು.
ಫೇಸ್ ಐಡಿ ಗುರುತಿಸುವ ಮೂಲಕ ಅನ್ ಲಾಕ್ ಆಗುವ, ನಿಸ್ತಂತು ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯವನ್ನು ಐಫೋನ್ ಹೊಂದಿದ್ದು, ಡ್ಯುಯಲ್ ಬ್ಯಾಟರಿಗಳ ಸೌಲಭ್ಯವನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.