ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲಿರುವ ವಾಟ್ಸ್ ಆಪ್
ವಾಟ್ಸ್ ಆಪ್ ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲು ವಾಟ್ಸ್ ಆಪ್ ಸಂಸ್ಥೆ ಮುಂದಾಗಿದ್ದು, ಗ್ರೂಪ್ ನಲ್ಲಿರುವ ಇತರರು ಗ್ರೂಪ್ ನ ವಿಷಯವನ್ನು(Subject), ಐಕಾನ್ ಗಳನ್ನು ಬದಲಾವಣೆ ಮಾಡಿದರೆ ಅದನ್ನು...
ಸ್ಯಾನ್ ಫ್ರಾನ್ಸಿಸ್ಕೋ: ವಾಟ್ಸ್ ಆಪ್ ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡಲು ವಾಟ್ಸ್ ಆಪ್ ಸಂಸ್ಥೆ ಮುಂದಾಗಿದ್ದು, ಗ್ರೂಪ್ ನಲ್ಲಿರುವ ಇತರರು ಗ್ರೂಪ್ ನ ವಿಷಯವನ್ನು(Subject), ಐಕಾನ್ ಗಳನ್ನು ಬದಲಾವಣೆ ಮಾಡಿದರೆ ಅದನ್ನು ಆಯ್ಕೆ ಮಾಡುವ ವೈಶಿಷ್ಟ್ಯ ಲಭ್ಯವಾಗಲಿದೆ.
ಬೀಟಾ ವರ್ಷನ್ ನಲ್ಲಿ ಈ ಆಯ್ಕೆಯನ್ನು ಪರಿಶೀಲನೆಗೊಳಪಡಿಸಲಾಗುತ್ತಿದ್ದು, ಗ್ರೂಪ್ ಮ್ಯಾನೇಜ್ಮೆಂಟ್ ಸುಧಾರಣೆಗೂ ಹೆಚ್ಚು ಒತ್ತು ನೀಡಲಿದೆ, ಗ್ರೂಪ್ ಆಡ್ಮಿನ್ ಗಳು ಗ್ರೂಪ್ ಕ್ರಿಯೇಟರ್ ಗಳನ್ನು ಡಿಲೀಟ್ ಮಾಡುವುದನ್ನು ತಡೆಯುವ ಸೌಲಭ್ಯವೂ ಇರಲಿದೆಯಂತೆ.
ಇನ್ನು ಬಹು ನಿರೀಕ್ಷಿತ ಅನ್ ಸೆಂಡ್ ಆಯ್ಕೆಯೂ ಹೊಸ ಆವೃತ್ತಿಯಲ್ಲಿ ಲಭ್ಯವಾಗಲಿದ್ದು, ಅಂತಿಮ ಹಂತದ ಪರೀಕ್ಷೆ ನಡೆಯುತ್ತಿದೆ .
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.