ವಿಜ್ಞಾನ-ತಂತ್ರಜ್ಞಾನ

ಎಚ್ಚರ! ನಕಲಿ ಬ್ಲೂವೇಲ್ ಆಪ್ ನಿಮ್ಮ ಖಾಸಗಿ ಮಾಹಿತಿಯನ್ನು ಕದ್ದೊಯ್ಯಬಹುದು!

Srinivas Rao BV
ನವದೆಹಲಿ: ಅಪಾಯಕಾರಿ ಆನ್ ಲೈನ್ ಗೇಮ್ ಬ್ಲೂವೇಲ್ ಗೆ ಜನತೆ ಬಲಿಯಾಗದಂತೆ ಸಾಕಷ್ಟು ಎಚ್ಚರ ವಹಿಸಲಾಗಿದೆಯಾದರೂ, ಈಗ ಬ್ಲೂವೇಲ್ ನ ಅಸಲಿ ಆಪ್ ಗಿಂತ ನಕಲಿ ಆಪ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 
ಸೈಬರ್ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಬ್ಲೂವೇಲ್ ಗೇಮ್ ನ ಹೆಸರಿನ ನಕಲಿ ಆಪ್ ಗಳು ಹಾಗೂ ಮಾಲ್ವೇರ್ ಗಳು ಇಂಟರ್ ನೆಟ್ ನಲ್ಲಿ ಇನ್ನೂ ಸಕ್ರಿಯವಾಗಿದ್ದು ಡೌನ್ ಲೋಡ್ ಮಾಡಿದರೆ ಖಾಸಗಿ ಮಾಹಿತಿಯನ್ನು ಕದಿಯುತ್ತವೆ ಎಂದು ಹೇಳಿದ್ದಾರೆ. 
ಬ್ಲೂವೇಲ್ ಗೇಮ್ ಗೆ ಜೀವಗಳು ಬಲಿಯಾಗುತ್ತಿದ್ದರಿಂದ ಸರ್ಕಾರ ಬ್ಲೂವೇಲ್ ಗೇಮ್ ಆಪ್ ನ್ನು ನಿಷೇಧಿಸಿತ್ತು. ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ 70 ನಕಲಿ ಲಿಂಕ್ ಗಳು ಸಿಗುತ್ತಿವೆ.
SCROLL FOR NEXT