ನವದೆಹಲಿ: ಆಂಡ್ರಾಯ್ಡ್ ಒಎಸ್ ನಲ್ಲಿ ಫೇಸ್ ಬುಕ್ ಬಳಕೆ ಮಾಡುತ್ತಿರುವವರಿಗೆ ಹೊಸ ಸೌಲಭ್ಯ ದೊರೆತಿದ್ದು, ಫೇಸ್ ಬುಕ್ ಆಪ್ ನಲ್ಲಿ ಮೊಬೈಲ್ ರೀಚಾರ್ಜ್ ಮಾಡಿಸುವ ಆಯ್ಕೆಯನ್ನು ನೀಡಲಾಗಿದೆ.
ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಮಾತ್ರ ಪಾವತಿ ಮಾಡಬಹುದಾಗಿದ್ದು, ಸಧ್ಯಕ್ಕೆ ಯುಪಿಐ ಪೇಮೆಂಟ್ ಅಥವಾ ಇಂಟರ್ ನೆಟ್ ಬ್ಯಾಂಕಿಂಗ್ ಆಯ್ಕೆಗಳನ್ನು ನೀಡಲಾಗಿಲ್ಲ. ಪೇಮೆಂಟ್ ಆಯ್ಕೆಯನ್ನು ಆಯ್ಕೆ ಮಾಡುತ್ತಿದ್ದಂತೆಯೇ ಮುಂದಿನ ಪೇಜ್ ತೆರೆದುಕೊಳ್ಳುತ್ತದೆ. ಈ ಹಂತದಲ್ಲಿ ಮೊಬೈಲ್ ನಂಬರ್ ಹಾಗೂ ಟೆಲಿಕಾಂ ಆಪರೇಟರ್ ಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಅಗತ್ಯವಿರುವ ಎಲ್ಲಾ ಮಾಹಿತಿ ನೀಡಿದ ನಂತರ ಅಂತಿಮ ಹಂತದ ಪೇಮೆಂಟ್ ಗಾಗಿ ಒಪಿಟಿ ಅಥವಾ 3 ಡಿ ಸೆಕ್ಯುರ್ ಪಾಸ್ವರ್ಡ್ ನ್ನು ನೀಡಲಾಗುತ್ತದೆ.
ಪಾವತಿ ಯಶಸ್ವಿಯಾಗುತ್ತಿದ್ದಂತೆಯೇ ದೃಢೀಕರಣ ಮೆಸೇಜ್ ಬರಲಿದೆ. ಈ ಸೌಲಭ್ಯ ಇನ್ನೂ ಟೆಸ್ಟಿಂಗ್ ಹಂತದಲ್ಲಿದ್ದು, ಶೀಘ್ರವೇ ಗ್ರಾಹಕರ ಬಳಕೆಗೆ ಮುಕ್ತವಾಗಲಿದೆ.