ಯೂಟ್ಯೂಬ್ ನಿಂದ ಕಿಡ್ಸ್ ಟುಲ್ಸ್ ಬಿಡುಗಡೆ: ಮಕ್ಕಳಿಗೆ ಪೋಷಕರು ಪಟ್ಟಿ ಮಾಡಿದ ವಿಷಯ ಮಾತ್ರ ನೋಡಲು ಸಾಧ್ಯ!
ನವದೆಹಲಿ: ಸಾಮಾಜಿಕ ಜಾಲತಾಣಗಳು ಇತ್ತೀಚಿನ ದಿನಗಳಲ್ಲಿ ಪೋಷಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಯೂಟ್ಯೂಬ್ ಸಹ ಕಿಡ್ಸ್ ಟೂಲ್ ನ್ನು ಬಿಡುಗಡೆ ಮಾಡಿದೆ.
ಹೊಸ ಆಯ್ಕೆಯ ಮೂಲಕ ಪೋಷಕರು ತಾವು ಯಾವ ವಿಷಯ, ಚಾನಲ್ ಗಳನ್ನು ಪಟ್ಟಿ ಮಾಡುತ್ತಾರೋ ಆ ವಿಷಯಗಳಿಗೆ ಸಂಬಂಧಿಸಿದ ವಿಡಿಯೋ, ಚಾನಲ್ ಗಳನ್ನು ಮಾತ್ರ ಮಕ್ಕಳು ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದಾಗಿದೆ.
ಪೋಷಕರು ಅನುಮೋದಿಸುವ ಕಂಟೆಂಟ್ ನ್ನು ಮಾತ್ರ ಮಕ್ಕಳು ವೀಕ್ಷಿಸಲು ಸಾಧ್ಯವಿದ್ದು, ಸರ್ಚ್ ಆಫ್ ಕಂಟ್ರೋಲ್ ಆಯ್ಕೆಯನ್ನೂ ನೀಡಲಾಗಿದೆ. ಮಕ್ಕಳ ಆಸಕ್ತಿಗಳಿಗೆ ಅನುಗುಣವಾದ ವಿಡಿಯೋಗಳನ್ನು ಹೆಚ್ಚು ತಲುಪಿಸುವ ಉದ್ದೇಶದಿಂದ ಮೂರು ವರ್ಷಗಳ ಹಿಂದೆ ಯೂಟ್ಯೂಬ್ ನಲ್ಲಿ ಪ್ರಾರಂಭಿಸಲಾಗಿತ್ತು. ಈಗ ಪೋಷಕರಿಗೆ ತಮ್ಮ ಮಕ್ಕಳು ಕಲೆ, ಕರಕುಶಲ, ಕ್ರೀಡೆ, ಕಲಿಕೆ ಮುಂತಾದ ವಿಷಯಗಳ ಕುರಿತ ವಿಡಿಯೋಗಳನ್ನು ನೋಡಬೇಕೆಂಬುದನ್ನೂ ಪಟ್ಟಿ ಮಾಡುವ ಆಯ್ಕೆ ನೀಡಲಾಗಿದೆ ಎಂದು ಯುಟ್ಯೂಬ್ ಹೇಳಿದೆ.
ಮಕ್ಕಳನ್ನು ಅಪಾಯವಾಗುವ, ಹಿಂಸಾತ್ಮಕ ಉಗ್ರಗಾಮಿತ್ವವನ್ನು ಬಿಂಬಿಸುವ ವಿಡಿಯೋಗಳನ್ನು ತಡೆಯಲು 10,000 ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಯೂಟ್ಯೂಬ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics