ಭಾರತದ ಗ್ರಾಹಕರಿಗೆ ಫಾರ್ವರ್ಡ್ ಮೆಸೇಜ್ ಗೆ ಮಿತಿ ವಿಧಿಸಿದ ವಾಟ್ಸ್ ಆಪ್ 
ವಿಜ್ಞಾನ-ತಂತ್ರಜ್ಞಾನ

ಭಾರತದ ಗ್ರಾಹಕರಿಗೆ ಫಾರ್ವರ್ಡ್ ಮೆಸೇಜ್ ಗೆ ಮಿತಿ ವಿಧಿಸಿದ ವಾಟ್ಸ್ ಆಪ್

ಸುಳ್ಳು, ಪ್ರಚೋದನಾತ್ಮಕ ಮೆಸೇಜ್ ಗಳಿಗೆ ಕಡಿವಾಣ ಹಾಕುತ್ತಿಲ್ಲ ಎಂದು ಸಮಾಜಿಕ ಜಾಲತಾಣ ಸಂಸ್ಥೆ ವಾಟ್ಸ್ ಆಪ್ ಬಗ್ಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದ ಬೆನ್ನಲ್ಲೇ ವಾಟ್ಸ್ ಆಪ್ ಫಾರ್ವರ್ಡ್ ಮೆಸೇಜ್ ಗಳಿಗೆ

ನವದೆಹಲಿ: ಸುಳ್ಳು, ಪ್ರಚೋದನಾತ್ಮಕ ಮೆಸೇಜ್ ಗಳಿಗೆ ಕಡಿವಾಣ ಹಾಕುತ್ತಿಲ್ಲ ಎಂದು ಸಮಾಜಿಕ ಜಾಲತಾಣ ಸಂಸ್ಥೆ ವಾಟ್ಸ್ ಆಪ್ ಬಗ್ಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದ ಬೆನ್ನಲ್ಲೇ ವಾಟ್ಸ್ ಆಪ್ ಫಾರ್ವರ್ಡ್ ಮೆಸೇಜ್ ಗಳಿಗೆ ಮಿತಿಯನ್ನು ವಿಧಿಸುವುದಾಗಿ ಹೇಳಿದೆ. 
ಭಾರತದ ಸುಮಾರು 200 ಮಿಲಿಯನ್ ಗ್ರಾಹಕರಿಗೆ ಈ ಮಿತಿ ಅನ್ವಯವಾಗಲಿದ್ದು, ಕೇವಲ 5 ಫಾರ್ವರ್ಡ್ ಮೆಸೇಜ್ ಗಳನ್ನಷ್ಟೇ ಕಳಿಸಬಹುದಾಗಿದೆ. ವಾಟ್ಸ್ ಆಪ್ ನ ಇತ್ತೀಚಿವ ಆವೃತ್ತಿಯನ್ನು ಡೌನ್ ಲೋಡ್ ಮಾಡಿಕೊಂಡಿರುವವರಿಗೆ ಈ ಮಿತಿ ಅನ್ವಯವಾಗಲಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 
ಸುಳ್ಳು ಸುದ್ದಿಗಳನ್ನು ಗುರುತಿಸುವುದರ ಕುರಿತಾಗಿ ಬಳಕೆದಾರರಲ್ಲಿ ಜಾಗೃತಿ ಮೂಡಿಸುವುದಕ್ಕೆ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದು, ಗ್ರಾಹಕರಿಗೆ ತಮಗೆ ಬಂದಿರುವ ಮೆಸೇಜ್ ನ್ನುಯಾರು ಸೃಷ್ಟಿಸಿದರು ಎಂಬ ಬಗ್ಗೆ ಮಾಹಿತಿ ಇಲ್ಲದೇ ಇದ್ದರೆ ಎರಡು ಬಾರಿ ಖಚಿತಪಡಿಸಿಕೊಳ್ಳಬೇಕು ಎಂದು ವಾಟ್ಸ್ ಆಪ್ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel