ನವದೆಹಲಿ: ಸೋನಿ ಮೊಬೈಲ್ ಎಕ್ಸ್ಪೀರಿಯಾ ಎಲ್ 2 ಆವೃತ್ತಿಯ ಮೊಬೈಲ್ ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, 19,990 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
5.5 ಇಂಚ್ ಹೆಚ್ ಡಿ ಡಿಸ್ಪ್ಲೆ 8 ಎಂಪಿ 120 ಡಿಗ್ರಿ ಸೂಪರ್ ವೈಡ್ ಆಂಗಲ್ ಸೆಲ್ಫಿ ಕ್ಯಾಮರಾ, 13 ಎಂಪಿ ಹಿಂಭಾಗದ ಕ್ಯಾಮರಾ ಮೊಬೈಲ್ ನ ವೈಶಿಷ್ಟ್ಯಗಳಾಗಿದ್ದು, ಬೆರಳಚ್ಚು ಸೆನ್ಸಾರ್ ನ್ನು ಹೊಂದಿದೆ. ಕೇವಲ ಒಂದು ಟಚ್ ನಿಂದ ಪೋಟ್ರೇಟ್ ಸೆಲ್ಫಿ ಮೋಡ್ ನಿಂದ ಗ್ರೂಪ್ ಸೆಲ್ಫಿ ಮೋಡ್ ಗೆ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. 3 ಜಿಬಿ ರ್ಯಾಮ್, 32 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದ್ದು 256 ಜಿಬಿ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.