ಇಸ್ರೋ ನೂತನ ಸಾಧನೆ: ಮೂರು ಹೊಸ ಗ್ಯಾಲೆಕ್ಸಿಗಳು ಪತ್ತೆ 
ವಿಜ್ಞಾನ-ತಂತ್ರಜ್ಞಾನ

ಇಸ್ರೋ ನೂತನ ಸಾಧನೆ: ಮೂರು ಹೊಸ ಗ್ಯಾಲೆಕ್ಸಿಗಳು ಪತ್ತೆ

ಆಸ್ಟ್ರೋಸ್ಯಾಟ್‌ - ಇಸ್ರೋ ನಿರ್ಮಿತ ಬಾಹ್ಯಾಕಾಶ ವಿಕ್ಷಣಾ ಉಪಗ್ರಹವು ಭೂಮಿಯಿಂದ 800 ದಶಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರ ಪುಜಗಳ (ಗ್ಯಾಲೆಕ್ಸಿ) ಪತ್ತೆ ಮಾಡಿದೆ.

ಚೆನ್ನೈ: ಆಸ್ಟ್ರೋಸ್ಯಾಟ್‌ - ಇಸ್ರೋ ನಿರ್ಮಿತ ಬಾಹ್ಯಾಕಾಶ ವಿಕ್ಷಣಾ ಉಪಗ್ರಹವು  ಭೂಮಿಯಿಂದ 800 ದಶಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರ ಪುಜಗಳ (ಗ್ಯಾಲೆಕ್ಸಿ)  ಪತ್ತೆ ಮಾಡಿದೆ.
ಈ ನೂತನ ನಕ್ಷತ್ರ ಪುಂಜಗಳಿಗೆ ಅಬೆಲ್‌ 2256 ಎಂದು ನಾಮಕರಣ ಮಾಡಲಾಗಿದ್ದು ಮೂರೂ ಗ್ಯಾಲೆಕ್ಸಿಗಳು ಸಮೀಪದಲ್ಲಿ ಒಂದಕ್ಕೊಂದು ಹೊಂದಿಕೊಳ್ಳುವಂತೆ ಕಂಡುಬಂದಿದೆ. ಹೀಗೆ ಇರುವ ಮೂರೂ ಗ್ಯಾಲೆಕ್ಸಿಗಳು ಭವಿಷ್ಯದಲ್ಲಿ ಒಂದಾಗಿ ಬೃಹತ್ ಗಾತ್ರದ ಒಂದೇ ನಕ್ಷತ್ರ ಪುಂಜವಾಗುವ ಸಾಧ್ಯತೆ ಇದೆ ಎಂದು ಇಸ್ರೋ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಗ್ಯಾಲೆಕ್ಸಿಗಳ ನೇರಳಾತೀತ ಚಿತ್ರಗಳನ್ನು ಬಿಡುಗಡೆಗೊಳಿಸಿರುವ ಇಸ್ರೋ ಸಧ್ಯ ಈ ನೂತನ ಗ್ಯಾಲೆಕ್ಸಿಗಳ ವಿಶೇಷ ಅಧ್ಯಯನದಲ್ಲಿ ತೊಡಗಿದೆ. ಇಸ್ರೋ ವಿಜ್ಞಾನಿಗಳು ಅಲ್ಟ್ರಾ ವೈಲೆಟ್‌ ಇಮೇಜಿಂಗ್‌ ಟೆಲಿಸ್ಕೋಪ್‌ ಮುಖೇನ ನಕ್ಷತ್ರ ಪುಂಜದ ಕುರಿತು ಅದ್ಯಯನ ನಡೆಸುತ್ತಿದ್ದಾರೆ.
ಈ ಮೂರೂ ನಕ್ಷತ್ರಪುಂಜಗಳು ಒಂದು ಭಾಗ ಮಾತ್ರವೇ ಕೂಡಿಕೊಂಡಿರುವಂತೆ ಕಂಡು ಬಂದಿದೆ. ಅಲ್ಲದೆ ಈ ಮೂರು ನಕ್ಷತ್ರ ಪುಂಜಗಳು ತಮ್ಮಲ್ಲಿ ಅನೇಕ ಚಿಕ್ಕ ಚಿಕ್ಕ ನಕ್ಷತ್ರ ಪುಂಜಗಳನ್ನು ಹೊಂದಿದೆ ಎನ್ನುವುದು ಸಹ ತಿಳಿದು ಬಂದಿದ್ದು  ಈ ಕುರಿತಂತೆ ವಿಜ್ಞಾನಿಗಳು  ಇನ್ನೂ ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!