ರಿಲಾಯನ್ಸ್ ಸಂಸ್ಥೆ ತನ್ನ 41 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಿಸಲಾದ ಜಿಯೋಫೋನ್ 2 ಕಳೆದ ವರ್ಷಕ್ಕಿಂತ ಭಿನ್ನವಾದ ವಿನ್ಯಾಸ, ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, 2,999 ರೂಪಾಯಿಗಳಿಗೆ ಲಭ್ಯವಾಗಲಿದೆ.
ಹೊಸ ಜಿಯೋಫೋನ್ 2 ರಲ್ಲಿ ವಾಟ್ಸ್ ಆಪ್ ಹಾಗೂ ಯೂಟ್ಯೂಬ್ ಆಯ್ಕೆಗಳನ್ನು ಹೊಂದಿದ್ದು, ಬ್ಲ್ಯಾಕ್ ಬೆರಿ ಮಾದರಿಯ ವಿನ್ಯಾಸ, ಕೀ ಪ್ಯಾಡ್ ನ್ನು ಹೊಂದಿದೆ. ಆಗಸ್ಟ್ 15 ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದ್ದು, 2,999 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇದೇ ವೇಳೆ ಘೋಷಿಸಲಾಗಿರುವ ಜಿಯೋಫೋನ್ ಮಾನ್ಸೂನ್ ಹಂಗಾಮ ಆಫರ್ ಮೂಲಕ ಈಗಿರುವ ಜಿಯೋ ಫೋನ್ ಬಳಕೆದಾರರು 501 ರೂಪಾಯಿ ನೀಡಿ ಹ್ಯಾಂಡ್ ಸೆಟ್ ನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ಆಫರ್ ಜುಲೈ.21 ರಿಂದ ಜಾರಿಗೆ ಬರಲಿದೆ.
2.4 ಇಂಚ್ ಕ್ಯುವಿಜಿಎ ಡಿಸ್ಲ್ಪೇ
4 ಜಿಬಿ ಮೆಮೋರಿ (128 ಜಿಬಿ ವರೆಗೂ ವಿಸ್ತರಿಸಲು ಅವಕಾಶ)
2 ಎಂಪಿ ಕ್ಯಾಮರಾ, ವಿಜಿಎ ಫ್ರಂಟ್ ಕ್ಯಾಮರಾ