ವಿಜ್ಞಾನ-ತಂತ್ರಜ್ಞಾನ

ಫೋನ್ ತಯಾರಕರಿಗೆ ಬಳಕೆದಾರರ ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಿದ ಫೇಸ್‌ಬುಕ್‌!

Raghavendra Adiga
ನ್ಯೂಯಾರ್ಕ್: ಸಾಮಾಜಿಕ ತಾಣ ಫೇಸ್‌ಬುಕ್‌  ತನ್ನ ಗೌಪ್ಯತೆ ಸಂರಕ್ಷಣೆ ನೀತಿಯಲಿ ಮಹತ್ವದ ಬದಲಾವಣೆ ಮಾಡಿದೆ, ಬಳಕೆದಾರರು ಹಾಗು ಅವರ ಸ್ನೇಹಿತರ ವೈಯುಕ್ತಿಕ ಮಾಹಿತಿಯನ್ನು ನೊಡಲು   ಆಪಲ್ ಮತ್ತು  ಸ್ಯಾಮ್ ಸಂಗ್ ಸೇರಿದಂತೆ 60 ಮೊಬೈಲ್, ಮತ್ತು ಇತರೆ ಸಂವಹನಾ ಸಾಧನ ತಯಾರಕರಿಗೆ ಅವಕಾಶ ಕಲ್ಪಿಸಿದೆಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಇದಾಗಲೇ ಸ್ಮಾರ್ಟ್ ಪೋನ್ ಗಳಲ್ಲಿ ಫೇಸ್‌ಬುಕ್‌   ಅಪ್ಲಿಕೇಶನ್ ಗಳು ವ್ಯಾಪಕವಾಗಿ ಬಳಕೆಯಾಗುತ್ತಿದ್ದರೂ  ತಯಾರಕರಿಗೆ ಡೇಟಾ ಹಂಚಿಕೆ ಪಾಲುದಾರಿಕೆಯನ್ನು ಫೇಸ್‌ಬುಕ್‌ ನೀಡಿತ್ತು. ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಫೇಸ್‌ಬುಕ್‌   ಈ ಪಾಲುದಾರಿಕೆಯ ವ್ಯಾಪ್ತಿಯನ್ನು ವಿಸ್ತರಿಸಿದ್ದು ಇದರಿಂದ ಫೇಸ್‌ಬುಕ್‌   ಫೋನ್ ತಯಾರಕರಿಗೆ ಇನ್ನಷ್ಟು ಆಯ್ಕೆಗಳು ಲಭ್ಯಬಾಗಲಿದೆ. ಉದಾಹರಣೆಗೆ ಮೆಸೇಜಿಂಗ್, ಲೈಕ್ ಬಟನ್ ನಂತಹಾ ಆಯ್ಕೆಗಳು, ವಿಳಾಸ  ಪುಸ್ತಕಗಳು ಇತ್ಯಾದಿ.
ಆದರೆ ಈ ಒಪ್ಪಂದಗಳು ಸಂಸ್ಥೆಯ ಗೌಪ್ಯತೆ ರಕ್ಷಣೆ ಅಬ್ಗ್ಗೆ ಅನುಮಾನ ಹುಟ್ಟಿಸುವಂತಿದೆ. ಕೇಂಬ್ರಿಜ್ ಅನಲಿಟಿಕಾ ಮಾಹಿತಿ ಸೋರಿಕೆ ಸಂಬಂಧ ಇದಾಗಲೇ ಕಳಂಕ ಹೊತ್ತಿರುವ ಫೇಸ್‌ಬುಕ್‌ ಬಳಕೆದಾರರ ಅನುಮತಿ ಇಲ್ಲದೆ ಅವರ ಗೌಪ್ಯ ಮಾಹಿತಿಯನ್ನು ಪ್ರವೇಶಿಸಲು ಅವಕಾಶ ಕಲ್ಪಿಸಿಕೊಟ್ಟಿರುವುದು ಮುಂದೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಕಾದು ನೊಡಬೇಕು.
ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯು ಸೇರಿ ರಾಜಕೀಯ ವಿಶ್ಲೇಷಣಾ ಸಂಸ್ಥೆಗಳು ಫೇಸ್‌ಬುಕ್‌  ಡೇಟಾವನ್ನು ದುರ್ಬಳಕೆ ಮಾಡಿಕೊಳ್ಳುವುದರ ವಿರುದ್ಧ ಕ್ರಮ ಕೈಗೊಳ್ಳುತ್ತಿರುವುದಾಗಿ ಸಂಸ್ಥೆಯ ಮುಖ್ಯಸ್ಥರು ಹೇಳುತ್ತಿದ್ದಾರೆ. ಆದರೆ ಈ ನಿಯಮವು ಸೆಲ್ ಫೋನ್, ಟ್ಯಾಬ್ಲೆಟ್ ಬಳಕೆದಾರರಿಗೆ ಅನ್ವಯವಾಗುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಇಷ್ಟಾಗಿಯೂ ಈ ಪಾಲುದಾರಿಕೆ ಒಪ್ಪಂದವು ಫೇಸ್‌ಬುಕ್‌  ನ ಗೌಪ್ಯತೆ ನೀತಿ, ಎಫ್ ಟಿಸಿ ಒಪ್ಪಂದ, ಬಳಕೆದಾರರಿಗೆ ನೀಡಿದ್ದ ಪ್ರಮಾಣವನ್ನು ಉಲ್ಲಂಘಿಸಿದಂತಾಗುವುದಿಲ್ಲ ಎಂದು ಫೇಸ್‌ಬುಕ್‌  ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.
SCROLL FOR NEXT