ಈಗ ನೀವು ಮೊಬೈಲ್ ಮೂಲಕವೇ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಬಹುದು! 
ವಿಜ್ಞಾನ-ತಂತ್ರಜ್ಞಾನ

ಈಗ ನೀವು ಮೊಬೈಲ್ ಮೂಲಕವೇ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಬಹುದು!

ಇನ್ನು ಪಾಸ್ ಪೋರ್ಟ್ ಪಡೆಯಲು ಅರ್ಜಿ ಸಲ್ಲಿಕೆಗಾಗಿ ಪಾಸ್ ಪೋರ್ಟ್ ಕಛೇರಿಗೆ ತೆರಳಬೇಕಾಗಿಲ್ಲ.

ನವದೆಹಲಿ: ಇನ್ನು ಪಾಸ್ ಪೋರ್ಟ್ ಪಡೆಯಲು ಅರ್ಜಿ ಸಲ್ಲಿಕೆಗಾಗಿ ಪಾಸ್ ಪೋರ್ಟ್ ಕಛೇರಿಗೆ ತೆರಳಬೇಕಾಗಿಲ್ಲ. ಮನೆಯಲ್ಲಿಯೇ, ಸ್ಮಾರ್ಟ್ ಫೋನ್ ಮೂಲಕ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಲು ಅವಕಾಶವಾಗುವಂತೆ ನೂತನ ಯೋಜನೆಗೆ ಭಾರತ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಮಂಗಳವಾರ ಚಾಲನೆ ನೀಡಿದ್ದಾರೆ.
mPassprtSeva ಅಪ್ಲಿಕೇಷನ್ ಮೂಲಕ ಪಾಸ್ ಪೋರ್ಟ್ ಪಡೆಯಲು ಅರ್ಜಿ ಸಲ್ಲಿಕೆಗೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.
ಈ ಅಪ್ಲಿಕೇಷನ್ ಮುಖೇನ ವ್ಯಕ್ತಿ ದೇಶದ ಯಾವುದೇ ಭಾಗದಲ್ಲಿದ್ದರೂ ತನಗೆ ಬೇಕಾದ ವಿಭಾಗದ ಪಾಸ್ ಪೋರ್ಟ್ ಕಛೇರಿಯಿಂದ ಪಾಸ್ ಪೋರ್ಟ್ ಪಡೆಯಲು ಅರ್ಜಿ ಸಲ್ಲಿಕೆ ಮಾಡಬಹುದು. ಉದಾಹರಣೆಗೆ ಬೆಂಗಳೂರಿನ ಮೂಲದ ವ್ಯಕ್ತಿಯೊಬ್ಬ ದೆಹಲಿಯಲ್ಲಿದ್ದು ಆತ ಬೆಂಗಳೂರು ಪಾಸ್ ಪೋರ್ಟ್ ಕಛೇರಿಯಿಂದ ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಲು ಸಹ ಈ ಅಪ್ಲಿಕೇಷನ್ ಸಹಾಯ ಂಆಡಲಿದೆ.
ನೂತನ ಯೋಜನೆಗಳ ಚಾಲನೆ ಮಾಡಿದ ಕೇಂದ್ರ ಸಚಿವೆ ಪ್ರತಿ ಲೋಕಸಭಾ ಕ್ಷೇತ್ರವೊಂದರಲ್ಲಿ ಒಂದು ಪಾಸ್ ಪೋರ್ಟ್ ಕಛೇರಿ ತೆರೆಯುವ ಉದ್ದೇಶವಿದೆ ಎಂದಿದ್ದಾರೆ.
ಪಾಸ್ ಪೋರ್ಟ್ ಸೇವಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿವರು ಈ ನೂತನ ಸೇವೆಯನ್ನು ಉದ್ಘಾಟಿಸಿದ್ದಾರೆ. ಸಧ್ಯ ಈ ಅಪ್ಲಿಕೇಷನ್ ಆಂಡ್ರಾಯ್ಡ್ ಹಾಗೀ ಐಒಎಸ್ ಗಳಲ್ಲಿ ಲಭ್ಯವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

Mysuru Rain: ಸಿಡಿಲು ಬಡಿದು ಬೆಂಗಳೂರಿನ ಟೆಕ್ಕಿ ಸಾವು

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

SCROLL FOR NEXT