ಮಕ್ಕಳನ್ನು ಸ್ಕ್ರೀನ್ ಅಡಿಕ್ಷನ್ ನಿಂದ ದೂರವಿರಿಸುವ ’ಆಪಲ್ ಫ್ಯಾಮಿಲೀಸ್’!
ಸ್ಯಾನ್ ಫ್ರಾನ್ಸಿಸ್ಕೊ: ತಂತ್ರಜ್ಞಾನ ಹೆಚ್ಚಾಗುತ್ತಿರುವಂತೆಯೇ ಅದಕ್ಕೆ ದಾಸ್ಯರಾಗಿ ಚಟಗಳಿಗೆ ತುತ್ತಾಗುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮಕ್ಕಳನ್ನು ಸ್ಕ್ರೀನ್ ಅಡಿಕ್ಷನ್ ನಿಂದ ದೂರವಿರಿಸಲು ಆಪಲ್ ಸಂಸ್ಥೆ ತನ್ನ ವೆಬ್ ಪೇಜ್ ನಲ್ಲಿ ಫ್ಯಾಮಿಲೀಸ್ ಎಂಬ ಹೊಸ ಆಯ್ಕೆಯನ್ನು ಪೋಷಕರಿಗಾಗಿಯೇ ನೀಡಿದೆ.
ಫ್ಯಾಮಿಲೀಸ್ ಪೇಜ್ ನಲ್ಲಿರುವ ಆಸ್ಕ್ ಟು ಬೈ( Ask To Buy) ಮೂಲಕ ಪೋಷಕರು ತಮ್ಮ ಮಕ್ಕಳು ಬಳಕೆ ಮಾಡಬಹುದಾದ ಆಪ್ ಗಳಿಗೆ ನಿರ್ಬಂಧ ವಿಧಿಸಿ ಹೊಸ ಆಪ್ ಗಳನ್ನು ಖರೀದಿ ಮಾಡದಂತೆ ತಡೆಯಬಹುದಾಗಿದೆ.
ಇನ್ನು ಇದೇ ಪೇಜ್ ನಲ್ಲಿರುವ ಫೈಂಡ್ ಮೈ ಫ್ರೆಂಡ್ಸ್ ವೈಶಿಷ್ಟ್ಯ ತಮ್ಮ ಮಕ್ಕಳು ಯಾವ ಪ್ರದೇಶಕ್ಕೆ ಹೋಗಿದ್ದಾರೆ, ಎಷ್ಟು ದೂರ ಸಂಚರಿಸಿದ್ದಾರೆ, ಎಷ್ಟು ಸಮಯ ಪ್ರಯಾಣ ಮಾಡಿದ್ದಾರೆ ಎಂಬೆಲ್ಲಾ ಮಾಹಿತಿಯನ್ನು ಪಡೆಯಬುದಾಗಿದೆ. ಇನ್ನು ಮತ್ತೊಂದು ಫೀಚರ್ ಮೂಲಕ ಆಪ್ ಗಳನ್ನು ಖರೀದಿಸುವುದನ್ನು ನಿರ್ಬಂಧಿಸುವುದು, ಅಶ್ಲೀಲ ಅಂಶಗಳನ್ನು ವೀಕ್ಷಿಸದಂತೆ ತಡೆಗಟ್ಟಬಹುದಾಗಿದೆ. ಅಷ್ಟೇ ಅಲ್ಲದೇ ಪೂರ್ವಾನುಮತಿ ನೀಡಿದ ವೆಬ್ ಸೈಟ್ ಗಳನ್ನಷ್ಟೇ ತಮ್ಮ ಮಕ್ಕಳು ಬಳಕೆ ಮಾಡಬಹುದಾದಂತಹ ಆಯ್ಕೆಯನ್ನೂ ಒದಗಿಸಿದೆ.
ಮಕ್ಕಳನ್ನು ಸ್ಕ್ರೀನ್ ಅಡಿಕ್ಷನ್ ನಿಂದ ದೂರವಿರಿಸುವ ನಿಟ್ಟಿನಲ್ಲಿ ಐಫೋನ್ ತಯಾರಕರಿಗೆ ಮತ್ತಷ್ಟು ಸುಧಾರಿತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ಆಪಲ್ ಸಂಸ್ಥೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics