ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಬ್ಯಾಟರಿ ಬೇಗ ಖಾಲಿಯಾಗದೇ ಇರುವುದಕ್ಕೆ ಈ ರೀತಿ ಮಾಡಿ! 
ವಿಜ್ಞಾನ-ತಂತ್ರಜ್ಞಾನ

ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಬ್ಯಾಟರಿ ಬೇಗ ಖಾಲಿಯಾಗುವುದನ್ನು ತಪ್ಪಿಸಲು ಇಲ್ಲಿದೆ ಒಂದು ಮಾರ್ಗ!

ಇತ್ತೀಚಿನ ಸ್ಮಾರ್ಟ್ ಫೋನ್ ಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೂ ಇವೆ. ಆದರೆ ಅದಕ್ಕೆ ತಕ್ಕಂತೆ ಬ್ಯಾಟರಿ ಮಾತ್ರ ಬಾಳಿಕೆ ಬರುವುದೇ ಇಲ್ಲ.

ಸ್ಯಾನ್ ಫ್ರಾನ್ಸಿಸ್ಕೋ: ಇತ್ತೀಚಿನ ಸ್ಮಾರ್ಟ್ ಫೋನ್ ಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೂ ಇವೆ. ಆದರೆ ಅದಕ್ಕೆ ತಕ್ಕಂತೆ ಬ್ಯಾಟರಿ ಮಾತ್ರ ಬಾಳಿಕೆ ಬರುವುದೇ ಇಲ್ಲ. ಸ್ಮಾರ್ಟ್ ಫೋನ್ ಗಳಲ್ಲಿ ಬ್ಯಾಟರಿ ಬೇಗೆ ಖಾಲಿ ಆಗುವುದು ಇಂದಿನ ಮೊಬೈಲ್ ಬಳಕೆದಾರರು ಎದುರಿಸುತ್ತಿರುವ ದೊಡ್ಡ ಸಂಕಟವೇ ಸರಿ. 
ಬ್ಯಾಟರಿ ಏಕೆ ಬೇಗ ಖಾಲಿಯಾಗುತ್ತೆ ಎಂಬ ಬಗ್ಗೆ ಆಂಡ್ರಾಯ್ಡ್ ದೇವ್ ಶೃಂಗಸಭೆಯಲ್ಲಿ ಗೂಗಲ್ ಮಾಹಿತಿ ನೀಡಿದ್ದು, ಯಾವ ಕ್ರಮ ಕೈಗೊಂಡರೆ ಬ್ಯಾಟರಿ ಬೇಗ ಖಾಲಿ ಆಗದೇ ಇರುವಂತೆ ತಡೆಯಬಹುದು ಎಂಬ ಬಗ್ಗೆಯೂ ಮಾಹಿತಿ ನೀಡಿದೆ. 
ಬ್ಯಾಟರಿ ಬಾಳಿಕೆಯ ಕುರಿತು ಆಪ್ ಡೆವಲಪರ್ ಗಳೊಂದಿಗೂ ಮಾತನಾಡಿರುವ ಗೂಗಲ್, ಬ್ಯಾಟರಿ ಹೆಚ್ಚು ಬಳಕೆಯಾಗದಂತೆ ತಮ್ಮ ಆಪ್ ಗಳಲ್ಲಿ ಯಾವ ಕ್ರಮ ಕೈಗೊಳ್ಳಬಹುದೆಂಬ ಬಗ್ಗೆಯೂ ಮಾತನಾಡಿದೆ.  ಆದರೆ ಗೂಗಲ್ ಪ್ರಕಾರ ಕೇವಲ ಆಪ್ ಗಳಷ್ಟೇ ಬ್ಯಾಟರಿ ಬೇಗ ಖಾಲಿ ಆಗುವುದಕ್ಕೆ ಕಾರಣವಲ್ಲವಂತೆ. ಬದಲಾಗಿ ಪರದೆಯ ಬ್ರೈಟ್ನೆಸ್ ಸಹ ಕಾರಣವಾಗಿರಲಿದ್ದು, ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಡಾರ್ಕ್ ಮೋಡ್ ನಲ್ಲಿದ್ದರೆ ಬ್ಯಾಟರಿ ಬೇಗ ಖಾಲಿ ಆಗುವುದಿಲ್ಲ ಎಂದು ತಿಳಿದುಬಂದಿದೆ. 
ಬ್ರೈಟ್ ನೆಸ್ ಜೊತೆಗೆ ಸ್ಕ್ರೀನ್ ಕಲರ್ ಸಹ ಪ್ರಮುಖವಾಗಿರಲಿದೆ, ಡಾರ್ಕ್ ಮೋಡ್ ಇಡೀ ಮೊಬೈಲ್ ನ ಆಪರೇಟಿಂಗ್ ಸಿಸ್ಟಮ್ ಥೀಮ್ ನ್ನು ಬದಲಾವಣೆ ಮಾಡಲಿದೆ. ಡಾರ್ಕ್ ಮೋಡ್ ನಲ್ಲಿ ಬ್ರೈಟ್ ನೆಸ್ ಹೆಚ್ಚಿದ್ದರೂ ಮೊಬೈಲ್ ಬ್ಯಾಟರಿ ಬಳಕೆ ಮಡಿಮೆ ಮಾಡಲಿದೆ ಎಂಬುದು ಗೂಗಲ್ ಸಲಹೆಯಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವೇನ್ ಮುಚ್ಚೋದು ನಾವೇ ಬಂದ್ ಮಾಡ್ತೀವಿ: Hormuz ಜಲಸಂಧಿ ದಾಟುವ ಹಡಗುಗಳಿಗೆ US ನೌಕಾಪಡೆ ತಡೆ- ಇರಾನ್ ಗೆ ಟ್ರಂಪ್ ಶಾಕ್!

ಅತ್ಯಂತ ಸುಂದರ 'ಮದುವೆ ಹೆಣ್ಣು', 1 ಬಿಲಿಯನ್ ಡಾಲರ್ ಹಣ ಕೊಡಿ: Uganda ಸೇನಾ ಮುಖ್ಯಸ್ಥನ ವಿಚಿತ್ರ ಬೇಡಿಕೆ; Turkey ಬೇಸ್ತು!

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಮತ್ತೊಂದು ಶಾಕ್; KPCC ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ DK Shivakumar

ಮಿಸ್ಟರ್ 'ನಂಗ್ ಗೊತ್ತಿಲ್ಲಾ' ಗೃಹ ಸಚಿವರೇ.. ಇಲ್ನೋಡಿ, ಪುಡಿ ರೌಡಿಗಳ ಹಾವಳಿ: ಪರಮೇಶ್ವರ್ ವಿರುದ್ಧ ಜೆಡಿಎಸ್ ಕಿಡಿ

IPL 2026: ಬಟ್ಲರ್ 14,000 ರನ್ ದಾಖಲೆ; ಮಿಂಚಿದ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ; LSG ವಿರುದ್ಧ GT ಗೆಲುವು!

SCROLL FOR NEXT