ಬ್ರಿಟನ್ ನ ಹೊಸ 50 ಪೌಂಡ್ ನೋಟಿನಲ್ಲಿ ಭಾರತೀಯ ವಿಜ್ಞಾನಿ ಜಗದೀಶ್ ಚಂದ್ರ ಬೋಸರ ಭಾವಚಿತ್ರ?
2020 ಕ್ಕೆ ಪ್ರಕಟವಾಗಲಿರುವ ಬ್ರಿಟನ್ ನ 50 ಪೌಂಡ್ ಮುಖಬೆಲೆಯ ಹೊಸ ನೋಟಿನ ಮೇಲೆ ಮುದ್ರಣವಾಗಲಿರುವ ಭಾವಚಿತ್ರಕ್ಕಾಗಿ 100 ವಿಜ್ಞಾನಿಗಳ ಭಾವಚಿತ್ರವನ್ನು ಅಂತಿಮಗೊಳಿಸಲಾಗಿದ್ದು ....
2020 ಕ್ಕೆ ಪ್ರಕಟವಾಗಲಿರುವ ಬ್ರಿಟನ್ ನ 50 ಪೌಂಡ್ ಮುಖಬೆಲೆಯ ಹೊಸ ನೋಟಿನ ಮೇಲೆ ಮುದ್ರಣವಾಗಲಿರುವ ಭಾವಚಿತ್ರಕ್ಕಾಗಿ 100 ವಿಜ್ಞಾನಿಗಳ ಭಾವಚಿತ್ರವನ್ನು ಅಂತಿಮಗೊಳಿಸಲಾಗಿದ್ದು ಪಟ್ಟಿಯಲ್ಲಿ ಭಾರತದ ಭೌತವಿಜ್ಞಾನಿ ಮತ್ತು ಶರೀರವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್ ರ ಭಾವಚಿತ್ರವೂ ಆಯ್ಕೆಯಾಗಿದೆ.
ಬ್ಯಾಂಕ್ ಆಫ್ ಇಂಗ್ಲೆಂಡ್ ಮುಂಬರುವ 50 ಪೌಂಡ್ ಮುಖಬೆಲೆಯ ಹೊಸ ನೋಟಿನ ಮೇಲೆ ಬ್ರಿಟೀಶ್ ಸೈನ್ಸ್ ಗೆ ಕೊಡುಗೆ ನೀಡಿದ ಖ್ಯಾತ ವಿಜ್ಞಾನಿಗಳ ಭಾವಚಿತ್ರವನ್ನು ಮುದ್ರಿಸಲು ಮುಂದಾಗಿದ್ದು, ಸ್ಟೀಫನ್ ಹಾಕಿಂಗ್ ಸೇರಿದಂತೆ ಹಲವರ ಭಾವಚಿತ್ರವನ್ನು ಪರಿಗಣಿಸಿದೆ. ಈ ವರೆಗೂ ಒಟ್ಟಾರೆ 174,112 ನಾಮನಿರ್ದೇಶನಗಳು ಬಂದಿದ್ದು, ಮೊದಲ ಹಂತದಲ್ಲಿ ಅರ್ಹ ವಿಜ್ಞಾನಿಗಳ ಪಟ್ಟಿಯನ್ನು ತಯಾರಿಸುತ್ತಿದೆ. ಈ ಪೈಕಿ ಭಾರತದ ಬಂಗಾಳದಲ್ಲಿ 1858 ರಲ್ಲಿ ಜನಿಸಿದ್ದ ವಿಜ್ಞಾನಿ ಜಗದೀಶ್ ಚಂದ್ರ ಬೋಸರ ಭಾವಚಿತ್ರವೂ ಆಯ್ಕೆಯಾಗಿದೆ ಎಂದು ತಿಳಿದುಬಂದಿದೆ.
ಯುನಿವರ್ಸಿಟಿ ಆಫ್ ಕೇಂಬ್ರಿಡ್ಜ್ ಗೂ ಜಗದೀಶ್ ಚಂದ್ರ ಬೋಸರಿಗೂ ವಿಶೇಷವಾದ ನಂಟು ಇದ್ದು ವಿದೇಶದಲ್ಲಿ ವ್ಯಾಸಂಗ ಮುಗಿಸಿದ್ದ ಬೋಸರು 1884 ರಲ್ಲಿ ಕೇಂಬ್ರಿಡ್ಜ್ ವಿವಿಯಿಂದ ಪದವಿ ಪಡೆದು ಭಾರತಕ್ಕೆ ಬಂದಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.