ಹಳಿಯೇ ಇಲ್ಲದೇ ರೈಲು ಬಿಟ್ಟಿದ್ದಾಯ್ತು: ಈಗ ಶತಾಬ್ದಿಗೆ ಖೋಕ್ ಇಂಜಿನ್ ಇಲ್ಲದ ರೈಲು ಆನ್ ಟ್ರ್ಯಾಕ್!
ಕಳೆದ ತಿಂಗಳಲ್ಲಿ ಹಳಿಯೇ ಇಲ್ಲದೇ ರೈಲು ಚಾಲನೆ ಮಾಡುವ ಪ್ರಯೋಗ ಯಶಸ್ವಿಯಾಗಿತ್ತು. ರೈಲ್ವೆ ಇಲಾಖೆ ಮತ್ತೊಂದು ಇಂಥಹದ್ದೇ ವಿನೂತನ ಪ್ರಯೋಗವನ್ನು ಯಶಸ್ವಿಗೊಳಿಸಿದ್ದು,
ನವದೆಹಲಿ: ಕಳೆದ ತಿಂಗಳಲ್ಲಿ ಹಳಿಯೇ ಇಲ್ಲದೇ ರೈಲು ಚಾಲನೆ ಮಾಡುವ ಪ್ರಯೋಗ ಯಶಸ್ವಿಯಾಗಿತ್ತು. ರೈಲ್ವೆ ಇಲಾಖೆ ಮತ್ತೊಂದು ಇಂಥಹದ್ದೇ ವಿನೂತನ ಪ್ರಯೋಗವನ್ನು ಯಶಸ್ವಿಗೊಳಿಸಿದ್ದು, ಇಂಜಿನ್ ಇಲ್ಲದೇ ಮೆಟ್ರೋ ಮಾದರಿಯಲ್ಲಿ ಉಭಯ ಬದಿಯಿಂದ ಚಾಲನಾ ವ್ಯವಸ್ಥೆ ಹೊಂದಿರುವ ಟ್ರೈನ್-18 ರ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.
ಚೆನ್ನೈ ನಲ್ಲಿರುವ ಐಸಿಎಫ್ ಶೇ.80 ರಷ್ಟು ದೇಶಿ ಕಾಂಪೊನೆಂಟ್ ಗಳನ್ನು ಬಳಕೆ ಮಾಡಿಕೊಂಡು ರೈಲನ್ನು ನಿರ್ಮಿಸಲಾಗಿದ್ದು, ಮೇಕ್ ಇನ್ ಇಂಡಿಯಾದ ಯೋಜನೆಯಡಿಯಲ್ಲಿ ತಯಾರಿಸಲಾಗಿದೆ. ಈ ಯೋಜನೆಗಾಗಿ 2020 ರ ವೇಳೆಗೆ ಸುಮಾರು 905,000 ರೂಪಾಯಿ ಹೂಡಿಕೆ ಮಾಡುವುದಕ್ಕೆ ಯೋಜನೆ ಹೊಂದಿದೆ.
ಹೈ ಸ್ಪೀಡ್ ಟ್ರೇನ್-18 ನ್ನು ಶತಾಬ್ದಿಗಳ ಬದಲಾಗಿ ಬಳಕೆಯಾಗಲಿದ್ದು ಇದರಿಂದಾಗಿ ರೈಲ್ವೆಯು ಅಪಾರ ಪ್ರಮಾಣದ ಸಮಯವನ್ನು ಉಳಿಸಲಿದೆ. ಸುಮಾರು 160 ಕಿ.ಮೀ ಪ್ರತಿ ಗಂಟೆ ವೇಗದಲ್ಲಿ ಚಲಿಸುವ ಈ ರೈಲು 16 ಹವಾನಿಯಂತ್ರಿತ ಬೋಗಿಗಳನ್ನು ಹೊಂದಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.