12 ನಗರಗಳಲ್ಲಿ ಸಂಶೋಧನೆಗಾಗಿ ಇಸ್ರೋ ನೆರವು
ಬೆಂಗಳೂರು: ಹೊಸ ಪರಿಕಲ್ಪನೆಗಳಿಗಾಗಿ ಎದುರುನೋಡುತ್ತಿರುವ ಇಸ್ರೋ ವಿವಿಧ ನಗರಗಳಲ್ಲಿ ಸಂಶೋಧನೆಗೆ ಅನುಕೂಲವಾಗುವಂತಹ ಸೌಲಭ್ಯವನ್ನು ಕಲ್ಪಿಸಿಕೊಡಲಿದೆ.
ಒಟ್ಟಾರೆ 12 ಕೇಂದ್ರಗಳಲ್ಲಿ ಹೊಸ ಪರಿಕಲ್ಪನೆಗಳಿಗೆ ಪೂರಕವಾಗುವ ಸೌಲಭ್ಯ ಕಲ್ಪಿಸಲು ಇಸ್ರೋ ನಿರ್ಧರಿಸಲಾಗಿದ್ದು, ದೇಶಾದ್ಯಂತ ಒಟ್ಟಾರೆ 6 ಸ್ಪೇಸ್ ಟೆಕ್ ಇನ್ಕ್ಯುಬೇಷನ್ ಕೇಂದ್ರಗಳು ಮತ್ತು 6 ಪ್ರಾದೇಶಿಕ ಅಕಾಡೆಮಿಕ್ ಸೆಂಟರ್ ಫಾರ್ ಸ್ಪೇಸ್ ಸ್ಥಾಪಿಸಲಿದೆ. ಪ್ರತಿ ಇನ್ಕ್ಯುಬೇಷನ್ ಕೇಂದ್ರಗಳು ಹಾಗೂ ಪ್ರಾದೇಷಿಕ ಅಕಾಡೆಮಿಕ್ ಕೇಂದ್ರಗಳಿಗೆ ಒಟ್ಟಾರೆ 2 ಕೋಟಿ ರೂಪಾಯಿಗಳ ನೆರವನ್ನು ನೀಡಲಿದೆ ಎಂದು ಹೇಳಿದೆ.
ಇವೆಲ್ಲದರ ಹೊರತಾಗಿ ವಿಶ್ವವಿದ್ಯಾನಿಲಯಗಳಲ್ಲಿ 6 ಶೈಕ್ಷಣಿಕ ಪೀಠಗಳನ್ನೂ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇಸ್ರೋದ ಯೋಜನೆಯ ಪ್ರಕಾರ ಮೊದಲ ಇನ್ಕ್ಯುಬೇಷನ್ ಕೇಂದ್ರ ಅಗರ್ತಲಾದಲ್ಲಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾರಂಭವಾಗಲಿದ್ದು, ತ್ರಿಪುರಾ ಮುಖ್ಯಮಂತ್ರಿ ಬ್ಲಿಪ್ಲಬ್ ಕುಮಾರ್ ದೇಬ್ ಉದ್ಘಾಟನೆ ಮಾಡಿದ್ದಾರೆ. ತಿರ್ಚಿ, ಜಲಂಧರ್, ಭುವನೇಶ್ವರ್, ನಾಗ್ಪುರ ಹಾಗೂ ಇಂದೋರ್ ಗಳಲ್ಲಿ ಉಳಿದ ಇನ್ಕ್ಯುಬೇಷನ್ ಕೇಂದ್ರಗಳು ಪ್ರಾರಂಭವಾಗಲಿದ್ದು ಎಲ್ಲಾ ಕೇಂದ್ರಗಳನ್ನೂ ಎನ್ ಐಟಿಯಲ್ಲೇ ಸ್ಥಾಪಿಸಲಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಶಿವನ್ ಹೇಳಿದ್ದಾರೆ.
ಈ ಇನ್ಕ್ಯುಬೇಷನ್ ಕೇಂದ್ರಗಳಲ್ಲಿ ಅಗತ್ಯವಿರುವ ಸೌಲಭ್ಯಗಳಿಗಾಗಿ ಇಸ್ರೋ ನೆರವು ನೀಡಲಿದೆ ಎಂದು ಶಿವನ್ ಹೇಳಿದ್ದಾರೆ. ಇನ್ನು ಶೈಕ್ಷಣಿಕ ಪೀಠಗಳ ಪೈಕಿ ಮೊದಲನೆಯದ್ದಾದ ಸತೀಶ್ ಧವನ್ ಪೀಠ ಜಮ್ಮು-ಕಾಶ್ಮೀರದಲ್ಲಿ ಅಕ್ಟೋಬರ್ 11 ರಂದು ಉದ್ಘಾಟನೆಯಾಗಲಿದೆ ಎಂದು ಶಿವನ್ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics