ವಿಜ್ಞಾನ-ತಂತ್ರಜ್ಞಾನ

ಯಾರೂ ಸೇಫ್ ಅಲ್ಲ: ಟ್ವಿಟರ್ ಸಿಇಒ ಖಾತೆಯೇ ಹ್ಯಾಕ್ ಆಯ್ತು! 

Srinivas Rao BV

ನವದೆಹಲಿ: ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೆ ಅವರ ಖಾತೆ ಹ್ಯಾಕ್ ಆಗಿದ್ದು, ಸಿಇಒ ಕೂಡಾ ಸುರಕ್ಷಿತವಲ್ಲ ಎಂದು ಟ್ವಿಟರ್ ಪ್ರತಿಕ್ರಿಯೆ ನೀಡಿದೆ. 

ಆ.30 ರಂದು ಮಧ್ಯಾಹ್ನ ಖಾತೆ ಹ್ಯಾಕ್ ಆಗಿದ್ದು, ಜನಾಂಗೀಯ ನಿಂದನೆ ಸೇರಿದಂತೆ ನಕಾರಾತ್ಮಕ ಟ್ವೀಟ್ ಗಳನ್ನು ಸಿಇಒ ಖಾತೆಯಲ್ಲಿ ಹಾಕಲಾಗಿತ್ತು. ತಕ್ಷಣವೇ ಖಾತೆಯನ್ನು ಸರಿಪಡಿಸಲಾಗಿದೆ.

ಟ್ವಿಟರ್ ನ ಹೇಳಿಕೆಯ ಪ್ರಕಾರ ಡಾರ್ಸೆ ಅವರ ಖಾತೆಗೆ ಜೋಡಣೆಯಾಗಿದ್ದ ಮೊಬೈಲ್ ನಂಬರ್ ಭದ್ರತಾ ಲೋಪದಿಂದ ಹ್ಯಾಕ್ ಆಗಿರುವ ಸಾಧ್ಯವಾಗಿದೆ. 

ಹ್ಯಾಕ್ ಆದ ನಂತರ ಡಾರ್ಸೆ ಅವರ ಟ್ವೀಟ್ ಖಾತೆಯಲ್ಲಿ ನಾಜಿ ನಾಯಕ ಅಡಾಲ್ಫ್ ಹಿಟ್ಲರ್ ಅಮಾಯಕನಾಗಿದ್ದ ಎಂದು ಒಂದು ಟ್ವೀಟ್ ಇದ್ದರೆ ಕಪ್ಪು ಬಣ್ಣದ ವ್ಯಕ್ತಿಗಳು ಹಾಗೂ ಜ್ಯೂ ಗಳ ಬಗ್ಗೆ ನಿಂದನೆಗಳಿರುವ ಟ್ವೀಟ್ ಗಳನ್ನು ಸೇರಿಸಲಾಗಿತ್ತು. 

SCROLL FOR NEXT