ವಿಜ್ಞಾನ-ತಂತ್ರಜ್ಞಾನ

ವಿಕ್ರಮ್ ಲ್ಯಾಂಡರ್ ಕುರಿತು ನಾಸಾಗೆ ಮಾಹಿತಿ ನೀಡಿದ್ದೇ ಓರ್ವ ಭಾರತೀಯ!

Srinivasamurthy VN

ಚೆನ್ನೈ ಮೂಲದ ಎಂಜಿನಿಯರ್ ಷಣ್ಮುಗ ಸುಬ್ರಮಣಿಯನ್ ರಿಂದ ಮಾಹಿತಿ ಪಡೆದು ಬಳಿಕ ಖಚಿತ ಪಡಿಸಿಕೊಂಡ ನಾಸಾ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-2ನ ಪ್ರಮುಖ ಭಾಗವಾಗಿದ್ದ ವಿಕ್ರಮ್ ಲ್ಯಾಂಡರ್ ಅನ್ನು ನಾಸಾ ಪತ್ತೆ ಮಾಡಿತ್ತು. ಆದರೆ ನಾಸಾದ ಈ ಕಾರ್ಯದ ಹಿಂದೆ ಓರ್ವ ಭಾರತೀಯ ಯುವ ವಿಜ್ಞಾನಿಯ ಕೊಡುಗೆ ಕೂಡ ಇದೆ ಎಂದು ತಿಳಿದುಬಂದಿದೆ.

ಹೌದು..ಚೆನ್ನೈ ಮೂಲದ ಎಂಜಿನಿಯರ್ ಷಣ್ಮುಗ ಸುಬ್ರಮಣಿಯನ್ ನೀಡಿದ್ದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ್ದ ನಾಸಾ ವಿಕ್ರಮ್ ಲ್ಯಾಂಡರ್ ಪತನವಾಗ ಸ್ಥಳವನ್ನು ಗುರುತಿಸಿತು. ವಿಕ್ರಮ್ ಲ್ಯಾಂಡರ್  ಅವಶೇಷಗಳನ್ನು ಷಣ್ಮುಗ ಸುಬ್ರಮಣಿಯನ್​ ಅವರು ಮೊದಲು ಪತ್ತೆ ಹಚ್ಚಿದರು. ಲ್ಯಾಂಡರ್​ ಪತನಗೊಂಡ ವಾಯುವ್ಯ ಭಾಗದ 750 ಮೀಟರ್​ ಎತ್ತರದಲ್ಲಿ ಇದು ಪತ್ತೆಯಾಗಿತ್ತು. ಇದಕ್ಕೆ ಸಂಬಂಧಪಟ್ಟ ಮೊದಲ ಚಿತ್ರದಲ್ಲಿ ಒಂದೇ ಪ್ರಕಾಶಮಾನವಾದ ಪಿಕ್ಸೆಲ್ ಗುರುತಿಸಲಾಗಿತ್ತು. ಷಣ್ಮುಗ ಅವರು ಎಲ್​ಆರ್​ಒ ಪ್ರಾಜೆಕ್ಟ್​ ಸಂಪರ್ಕಿಸಿ ವಿಕ್ರಮ್​ ಲ್ಯಾಂಡರ್​ ಅವಶೇಷಗಳು ಪತ್ತೆಯಾಗಿರುವುದಾಗಿ ತಿಳಿಸಿದರು. ಇದರ ಸುಳಿವು ಪಡೆದ ಬಳಿಕ ನಾಸಾದ ಎಲ್​ಆರ್​ಒಸಿ ತಂಡ ಮೊದಲಿನ ಹಾಗೂ ನಂತರದ ಫೋಟೋಗಳಿಗೆ ಹೋಲಿಕೆ ಮಾಡಿ ಮಾಹಿತಿಯನ್ನು ಖಚಿತಪಡಿಸಿಕೊಂಡಿತು.

ಈ ಬಗ್ಗೆ ಇ-ಮೇಲ್ ಮೂಲಕ ಪತ್ರ ಬರೆದಿರುವ ಎಲ್ ಆರ್ ಓ ಮಿಷನ್ ಪ್ರಾಜೆಕ್ಟ್ ನ ವಿಜ್ಞಾನಿಜಾನ್ ಕೊಲ್ಲರ್ ಅವರು, ಚೆನ್ನೈ ಮೂಲದ ಯುವ ವಿಜ್ಞಾನಿ ಷಣ್ಮುಗ ಸುಬ್ರಮಣಿಯನ್ ಅವರಿಗೆ ಧನ್ಯವಾದ ಹೇಳಿದ್ದಾರೆ. 

ಮೊದಲ ಚಿತ್ರದಲ್ಲಿ ಲ್ಯಾಂಡರ್​ ಪತನಗೊಂಡ ಸ್ಥಳವನ್ನು ಗುರುತಿಸಬಹುದಾಗಿದೆ. ಆದರೆ, ಅಷ್ಟು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಬಳಿಕ ಅಕ್ಟೋಬರ್​ 14, 15 ಮತ್ತು ನವೆಂಬರ್​ 11ರಂದು ಮತ್ತೆರಡು ಚಿತ್ರಗಳನ್ನು ನಾಸಾ ವಶಕ್ಕೆ ಪಡೆದುಕೊಂಡಿತು. ಬಳಿಕ ಚಿತ್ರಗಳನ್ನು ಎಲ್​ಆರ್​ಒಸಿ ತಂಡ ಪರಿಶೀಲಿಸಿದಾಗ ಲ್ಯಾಂಡರ್​ ಪತನಗೊಂಡ ಸ್ಥಳ ಹಾಗೂ ಅದರ ಸುತ್ತಾ ಅವಶೇಷಗಳು ಬಿದ್ದಿರುವ ಗುರುತು ಪತ್ತೆ ಮಾಡಿತ್ತು ಎಂದು ನಾಸಾ ಹೇಳಿಕೆಯನ್ನು ನೀಡಿದೆ.

ಇಸ್ರೋದೊಂದಿಗಿನ ಸಂಪರ್ಕವನ್ನು ಕಳೆದುಕೊಂಡಾಗ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಗಿಂತ ಕೇವಲ 2.1 ಕಿಲೋಮೀಟರ್ ದೂರದಲ್ಲಿತ್ತು. ಇದು ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಬಹು ನಿರೀಕ್ಷಿತ ಕನಸು ನನಸಾಗುವ ವೇಳೆಗೆ ಸಂಪರ್ಕ ಕಳೆದುಕೊಂಡಿತು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಕಠಿಣವಾಗಿ ಇಳಿದ ನಂತರ, ಇಸ್ರೋ ಅವರು ಅದರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ಕನಿಷ್ಠ 14 ದಿನಗಳ ಶ್ರಮಿಸಿದ್ದರು. ಆದಾಗ್ಯೂ ವಿಕ್ರಮ್ ಲ್ಯಾಂಡರ್ ಸಂಪರ್ಕ ಸಾಧ್ಯವಾಗಿರಲಿಲ್ಲ.

SCROLL FOR NEXT