ಇವರೇ ಚಂದ್ರಯಾನ-3ದ ನಿರ್ದೇಶಕರು: ಇಲ್ಲಿದೆ ವಿವರ
ನವೆಂಬರ್ 2020 ಕ್ಕೆ ಉಡಾವಣೆ ಮಾಡಲು ಯೋಜಿಸಲಾಗಿರುವ ಚಂದ್ರಯಾನ-3 ಯೋಜನೆಗೆ ಇಸ್ರೋ ಹೊಸ ನಿರ್ದೇಶಕರನ್ನು ನೇಮಕ ಮಾಡಿದೆ.
ಬೆಂಗಳೂರು: ನವೆಂಬರ್ 2020 ಕ್ಕೆ ಉಡಾವಣೆ ಮಾಡಲು ಯೋಜಿಸಲಾಗಿರುವ ಚಂದ್ರಯಾನ-3 ಯೋಜನೆಗೆ ಇಸ್ರೋ ಹೊಸ ನಿರ್ದೇಶಕರನ್ನು ನೇಮಕ ಮಾಡಿದೆ.
'ಎಸ್ಎಫ್’ ಪಿ ವೀರಮುತ್ತುವೇಲ್ ಅವರನ್ನು ಚಂದ್ರಯಾನ-3 ಯೋಜನೆಗೆ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದ್ದು, ಚಂದ್ರಯಾನ-3 ಮಿಷನ್ ಗೆ ರಿತು ಕರಿಧಲ್ ಅವರನ್ನು ಮುಂದುವರೆಸಲಾಗಿದೆ.
ಚಂದ್ರಯಾನ-2 ಯೋಜನಾ ನಿರ್ದೇಶಕರಾಗಿದ್ದ ಎಂ ವಿನಿತಾ ಅವರನ್ನು ಪೇ ಲೋಡ್, ಡಾಟಾ ಮ್ಯಾನೇಜ್ಮೆಂಟ್ ಹಾಗೂ ಬಾಹ್ಯಾಕಾಶ ಖಗೋಳವಿಜ್ಞಾನ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಹೊಸ ಲ್ಯಾಂಡರ್ ಹಾಗೂ ರೋವರ್ ಸೇರಿದಂತೆ ಮಿಷನ್ ನ ವಿವಿಧ ಚಟುವಟಿಕೆಗಳ ಉಸ್ತುವಾರಿಗಳನ್ನಾಗಿ 29 ಉಪ ನಿರ್ದೇಶಕರನ್ನು ವೀರಮುತ್ತುವೇಲ್ ಅವರನ್ನು ನೇಮಕ ಮಾಡಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.