ಸ್ಯಾಮ್ ಸಂಗ್ ನಿಂದ ಫೋಲ್ಡೆಬಲ್ ಸ್ಮಾರ್ಟ್ ಫೋನ್ ಬಿಡುಗಡೆ, ಇದು ಮೊದಲ 5ಜಿ ಮೊಬೈಲ್
ದಕ್ಷಿಣ ಕೊರಿಯಾದ ಪ್ರತಿಷ್ಠಿತ ಸ್ಯಾಮ್ ಸಂಗ್ ಕಂಪನಿ ಫೋಲ್ಡೆಬಲ್ ಸ್ಮಾರ್ಟ್ ಫೋನ್(ಮಡಚುವ ಫೋನ್) ಅನ್ನು ಗುರುವಾರ ಮಾರುಕಟ್ಟೆಗೆ...
ಸ್ಯಾನ್ ಫ್ರಾನ್ಸಿಸ್ಕೊ: ದಕ್ಷಿಣ ಕೊರಿಯಾದ ಪ್ರತಿಷ್ಠಿತ ಸ್ಯಾಮ್ ಸಂಗ್ ಕಂಪನಿ ಫೋಲ್ಡೆಬಲ್ ಸ್ಮಾರ್ಟ್ ಫೋನ್(ಮಡಚುವ ಫೋನ್) ಅನ್ನು ಗುರುವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಸ್ಯಾಮ್ ಸಂಗ್ ಕಂಪನಿ ಇಂದು 4.6 ಇಂಚಿನ 'ಗ್ಯಾಲಕ್ಷಿ ಪೋಲ್ಡ್ ' ಎಂಬ 5 ಜಿ ಮೊಬೈಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ಮೊದಲ 5ಜಿ ನೆಟ್ ವರ್ಕ್ ಮೊಬೈಲ್ ಎಂಬ ಗೌರವಕ್ಕೆ ಪಾತ್ರವಾಗಿದೆ.
ಸ್ಯಾಮ್ಸಂಗ್ ಕಂಪೆನಿಯ ‘ಗ್ಯಾಲಕ್ಷಿ ಪೋಲ್ಡೆಬಲ್ ಸ್ಮಾರ್ಟ್ ಫೋನ್‘ ಎರಡು ಡಿಸ್ಪ್ಲೇ ಹೊಂದಿದ್ದು, ಮೊದಲನೆಯ ಡಿಸ್ಪ್ಲೇ4.6 ಇಂಚು, ಎರಡನೇ ಡಿಸ್ಪ್ಲೇ 7.3 ಇಂಚನ್ನು ಹೊಂದಿದ್ದು, ಇದನ್ನು ಪುಸ್ತಕ ರೀತಿ ಮಡಚಬಹುದಾಗಿದೆ.
ಗ್ಯಾಲಕ್ಷಿ ಪೊಲ್ಡೇಬಲ್ ಸ್ಮಾರ್ಟ್ ಫೋನ್ ಸ್ನ್ಯಾಪ್ ಡ್ರಾಗನ್ 855 SoC ಯಿಂದ ಕಾರ್ಯ ನಿರ್ವಹಿಸುತ್ತಿದೆ. 8 ಜಿಬಿ ರ್ಯಾಮ್ ಹೊಂದಿದ್ದು, ಇದಕ್ಕೆ ಎರಡು ಬ್ಯಾಟರಿಯನ್ನು ಜೋಡಿಸಲಾಗಿದೆ.
ಏಪ್ರಿಲ್ 26 ರಿಂದ ಈ 'ಗ್ಯಾಲಕ್ಷಿ ಪೋಲ್ಡ್ ' ಮಾರುಕಟ್ಯೆಯಲ್ಲಿ ಲಭ್ಯವಿರಲಿದೆ. ಇದರ ಬೆಲೆ 1,980 ಅಮೆರಿಕನ್ ಡಾಲರ್ ಎಂದು ಕಂಪನಿ ತಿಳಿಸಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.