ಸಂಗ್ರಹ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಎಚ್ಚರ! ನಿಮ್ಮನ್ನು ವಂಚಿಸುವ 'ವಾಟ್ಸಪ್ ಗೋಲ್ಡ್ 'ಅಪ್ಲಿಕೇಷನ್ ಮತ್ತೆ ಬಂದಿದೆ

ಈಗೀಗ ಆನ್ ಲೈನ್ ವಂಚಕರು ವಿವಿಧ ತಂತ್ರಗಳನ್ನು ಬಳಸಿ ಜನರನ್ನು ವಂಚಿಸುತ್ತಿದ್ದಾರೆ. ಹಲವು ಬಾರಿ ನಕಲಿ ಸುದ್ದಿಗಳಾವುದು, ಅಸಲಿ ಸುದ್ದಿಗಳಾವುದು ಎಂದು ಗುರುತಿಸುವುದು ಕಠಿಣವಾಗುತ್ತದೆ.

ಈಗೀಗ ಆನ್ ಲೈನ್ ವಂಚಕರು ವಿವಿಧ ತಂತ್ರಗಳನ್ನು ಬಳಸಿ ಜನರನ್ನು ವಂಚಿಸುತ್ತಿದ್ದಾರೆ. ಹಲವು ಬಾರಿ ನಕಲಿ ಸುದ್ದಿಗಳಾವುದು, ಅಸಲಿ ಸುದ್ದಿಗಳಾವುದು ಎಂದು ಗುರುತಿಸುವುದು ಕಠಿಣವಾಗುತ್ತದೆ.ಕೆಲವೊಬ್ಬರು ತಮ್ಮ ಹಳೆ ತಂತ್ರಗಳನ್ನೇ ಕೆಲಮಟ್ಟಿಗೆ ಮಾರ್ಪಡಿಸಿ ಹೊಸ ಮಿಕಗಳನ್ನು ಬಲೆಗೆ ಕೆಡವಿಕೊಳ್ಳಲೂ ಪ್ರಯತ್ನಿಸುತ್ತಾರೆ. ಇದೀಗ ಇಂತಹುದೇ ಒಂದು ಸುದ್ದಿ ಮತ್ತೆ ಸಿಕ್ಕಿದೆ.
ಈ ಹಿಂದೆ 2016ರಲ್ಲಿ ಸುದ್ದಿಯಾಗಿದ್ದ "ವಾಟ್ಸಪ್ ಪ್ಲಸ್" ಅಥವಾ ವಾಟ್ಸಪ್ ಗೋಲ್ಡ್ ಸಂದೇಶಗಳು ಬಂದಿದ್ದು ನೆನಪಿದೆಯಷ್ಟೇ, ಇದೇ ವಾಟ್ಸಪ್ ಗೋಲ್ಡ್ ಕುರಿತಂತೆ ಹೊಸ ಸಂದೇಶವೊಂದು ಈಗ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.
ಕೆಲವೊಂದು ವಾಟ್ಸಪ್ ಬಳಕೆದಾರರಿಗೆ ನಿಮ್ಮ ಮೊಬೈಲ್ ನಲ್ಲಿ ವಾಟ್ಸಪ್ ಗೋಲ್ಡ್, ವಾಟ್ಸಪ್ ಪ್ಲಸ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಈ ಲಿಂಕ್ ಅನ್ನು ಒತ್ತಿರಿ ಎಂಬ ಸಂದೇಶ ಬಂದಿದೆ. ವಂಚಕರು ಇದರೊಡನೆ ನೀವು ರಹಸ್ಯ ಪ್ರೀಮಿಯಂ ವೈಶಿಷ್ಟ್ಯಗಳನ್ನು ಪಡೆಯಲಿದ್ದೀರಿ ಎಂದೂ ಹೇಳುತ್ತಾರೆ. ಆದರೆ ಇದು ಕೇವಲ ಸುಳ್ಳು ಸಂದೇಶವಾಗಿರಲಿದೆ.
ನಕಲಿ ಸಂದೇಅದಲ್ಲಿ "ಮಾರ್ಟಿನೆಲ್" ಎಂದು ಪದ ಬಳಕೆ ಮಾಡಲಾಗಿದೆ.ಸಂದೇಶವನ್ನು ಹಾಗೂ ಸಂದೇಶದ ಜತೆ ಕಳೀಸಿದ ಯಾವುದೇ ವೀಡಿಯೋ,  ಅಥವಾ ಅಪ್ಲಿಕೇಶನ್ ಅನ್ನು ನವೀಕರಿಸುವ ಲಿಂಕ್ ಅನ್ನು ಸ್ವೀಕರಿಸಬಾರದು ಎಂದು ಬಳಕೆದಾರರಿಗೆ ಸಲಹೆ ನೀಡಲಾಗುತ್ತಿದೆ. ಈ ಹೊಸ ವಂಚನೆ ಕುರಿತು ಬಳಕೆದಾರರನ್ನು ಎಚ್ಚರಿಸಲು ಟ್ವಿಟ್ಟರಟಿ ಎಂಬ  ಸಾಮಾಜಿಕ ಮಾಧ್ಯಮದ ವೇದಿಕೆ ಮುಂದಾಗಿದೆ. ಮಾಲ್ವೇರ್ ಸೈಟ್ ಗೆ ಕಾರಣವಾಗುವ 'ಮಾರ್ಟಿನೆಲ್' ಲಿಂಕ್ ತೆರೆಯದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ.. ಈ ಅಪ್ಡೇಟ್ ಅನ್ನು ಡೌನ್ಲೋಡ್ ಮಾಡುವುದರಿಂದ ನಿಮ್ಮ ಮೊಬೈ ಹಾಗೂ ಖಾಸಗಿ ಡೇಟಾಗಳಿಗೆ ದಕ್ಕೆಯಾಗುವ ಸಂಭವವಿದೆ.
ಒಂದು ವೇಳೆ ನಿಮಗೆ ತಿಳಿದಿಲ್ಲವಾದರೆ ಎಂದಿಗೂ ಇಂತಹಾ ಅಪ್ಲಿಕೇಷನ್ ಡೌನ್ಲೋಡ್ ಲಿಂಕ್ ಪ್ರೆಸ್ ಮಾಡಬೇಡಿ. ನಿಮಗೆ ವಾಟ್ಸಪ್ ಅಪ್ಡೇಟ್ ಆಗಬೇಕಾದಲ್ಲಿ ನೇರವಾಗಿ ಗೂಗಲ್ ಪ್ಲೆ ಸ್ಟೋರ್ ಗೆ ಹೋಗಿ ಅಲ್ಲಿನ ಅಪ್ಡೇಷನ್ ಲಿಂಕ್ ಮಾತ್ರ ಬಳಕೆ ಮಾಡಿಕೊಳ್ಳಿ. ಆಗ ಸ್ವಯಂಚಾಲಿತ್ತವಾಗಿ ಎಲ್ಲಾ ಅಪ್ಡೇಟ್ ಗಳೂ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಆಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ