ಚಂದ್ರಯಾನ-2 ವಿಕ್ರಮ್ ಲ್ಯಾಂಡರ್ ಗೆ ಹಾನಿಯಾಗಿಲ್ಲ: ಇಸ್ರೋ ಮೂಲಗಳು
ಚಂದ್ರಯಾನ-2 ಲ್ಯಾಂಡರ್ ವಿಕ್ರಮ್ ಗೆ ಹಾರ್ಡ್ ಲ್ಯಾಂಡಿಂಗ್ ನ ಹೊರತಾಗಿಯೂ ಯಾವುದೇ ಹಾನಿಯಾಗಿಲ್ಲ ಎಂದು ಇಸ್ರೋ ಮೂಲಗಳು ತಿಳಿಸಿವೆ.
ಬೆಂಗಳೂರು: ಚಂದ್ರಯಾನ-2 ಲ್ಯಾಂಡರ್ ವಿಕ್ರಮ್ ಗೆ ಹಾರ್ಡ್ ಲ್ಯಾಂಡಿಂಗ್ ನ ಹೊರತಾಗಿಯೂ ಯಾವುದೇ ಹಾನಿಯಾಗಿಲ್ಲ ಎಂದು ಇಸ್ರೋ ಮೂಲಗಳು ತಿಳಿಸಿವೆ.
ಲ್ಯಾಂಡರ್ ಯಥಾಸ್ಥಿತಿಯಲ್ಲಿದೆ, ಮುರಿದುಬಿದ್ದಿಲ್ಲ. ಬಾಗಿರುವ ಸ್ಥಿತಿಯಲ್ಲಿ ಲ್ಯಾಂಡರ್ ಪತ್ತೆಯಾಗಿದ್ದು, ಬಾಹ್ಯಾಕಾಶ ಸಂಸ್ಥೆ ಯೋಜಿಸಿದ್ದ ರೀತಿಯಲ್ಲಿ ಲ್ಯಾಂಡ್ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಲ್ಯಾಂಡರ್ ವಿಕ್ರಮ್ ಗೆ ಹಾನಿಯಾಗಿಲ್ಲ ಎಂದು ಹೇಳಲಾಗುತ್ತಿದೆಯಾದರೂ ಸಂಪರ್ಕ ಸಾಧ್ಯವಾಗುವ ವರೆಗೆ ಅದರ ಸ್ಥಿತಿಯ ಬಗ್ಗೆ ಏನನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ. ಇಸ್ರೋ ವಿಜ್ಞಾನಿಗಳು ವಿಕ್ರಮ್ ಜೊತೆ ಸಂಪರ್ಕ ಸಾಧಿಸಲು ನಿರಂತರ ಯತ್ನ ನಡೆಸುತ್ತಿದ್ದು ಇನ್ನೂ 12 ದಿನಗಳ ಕಾಲಾವಕಾಶ ಇದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.