ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿಜ್ಞಾನ-ತಂತ್ರಜ್ಞಾನ

ಕೋವಿಡ್-19 ಲಸಿಕೆಯ ಬಗ್ಗೆ ಯಾವುದು ನಕಲಿ ಸುದ್ದಿ, ಯಾವುದು ಅಸಲಿ ಎಂಬುದನ್ನು ಹೇಳಲಿದೆ ಟ್ವಿಟರ್!

ನಿಮಗೆಲ್ಲಾ ಡೊನಾಲ್ಡ್ ಟ್ರಂಪ್ ಚುನಾವಣೆ ಸೋತರೂ ಅವರು ಮಾಡುತ್ತಿದ್ದ ಗೆಲುವಿನ ಪ್ರತಿಪಾದನೆಯನ್ನು ತಿರಸ್ಕರಿಸಿ ಇದು ನಕಲಿ ಎಂದು ಟ್ವಿಟರ್ ಲೇಬಲ್ ಹಾಕುತ್ತಿದ್ದದ್ದು ನೆನಪಿದೆಯಲ್ಲವೇ?

ಟ್ವಿಟರ್ ಚಿತ್ರ
Srinivas Rao BV
Updated On : 17 Dec 2020, 4:49 pm

ನವದೆಹಲಿ: ನಿಮಗೆಲ್ಲಾ ಡೊನಾಲ್ಡ್ ಟ್ರಂಪ್ ಚುನಾವಣೆ ಸೋತರೂ ಅವರು ಮಾಡುತ್ತಿದ್ದ ಗೆಲುವಿನ ಪ್ರತಿಪಾದನೆಯನ್ನು ತಿರಸ್ಕರಿಸಿ ಇದು ನಕಲಿ ಎಂದು ಟ್ವಿಟರ್ ಲೇಬಲ್ ಹಾಕುತ್ತಿದ್ದದ್ದು ನೆನಪಿದೆಯಲ್ಲವೇ?

ಅಂತಹದ್ದೇ ಕ್ರಮವನ್ನು ಕೊರೋನಾ ಲಸಿಕೆಗೆ ಸಂಬಂಧಿಸಿದಂತೆ ಮಾಡುವುದಕ್ಕೂ ಟ್ವಿಟರ್ ಮುಂದಾಗಿದೆ. ಕೋವಿಡ್-19 ಲಸಿಕೆ ಬಗ್ಗೆ ನಕಲಿ ಸುದ್ದಿಗಳು, ದಾರಿ ತಪ್ಪಿಸುವ ಸುದ್ದಿಗಳು ಹೇರಳವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಆದರೆ ಮುಂದಿನ ವಾರದಿಂದ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟ್ವಿಟರ್ ಕ್ರಮ ಕೈಗೊಳ್ಳಲಿದ್ದು ಆ ಸುದ್ದಿಯ ಮೇಲೆ ಲೇಬಲ್ ಹಾಕಲಿದೆ.

ತಂತ್ರಜ್ಞಾನ ಹಾಗೂ ಮಾನವ ಸಮೀಕ್ಷೆಯ ಸಹಾಯದಿಂದ ಟ್ವಿಟರ್ ನಕಲಿ ಸುದ್ದಿಗಳಿಗೆ ಕಡಿವಾಣ ಹಾಕಲಿದೆ. 2021 ರ ಪ್ರಾರಂಭದಿಂದ ಟ್ವಿಟರ್ ನಕಲಿ ಸುದ್ದಿಗಳ ಮೇಲೆ ಲೇಬಲ್ ಹಾಕುವ ಕೆಲಸವನ್ನು ಮಾಡಲಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement