ಬಾನಲ್ಲಿ ಚಮತ್ಕಾರ ಮೂಡಿಸಿದ ಭಾಸ್ಕರ! ಕಣ್ತುಂಬಿಕೊಂಡ ಬೆಂಗಳೂರಿಗರು
ನಗರದ ಹಲವೆಡೆ ಸೋಮವಾರ ಸೂರ್ಯ ಚಮತ್ಕಾರ ಮೂಡಿಸಿದ್ದಾನೆ. ಸೂರ್ಯನ ಸುತ್ತ ರಿಂಗ್ ಗೋಚರವಾಗಿದೆ. ಖಗೋಳ ವಿಜ್ಞಾನಿಗಳಿಗೆ ಕುತೂಹಲ ಮೂಡಿಸಿದ್ದು ಹಲವರು ಈ ಸಂದರ್ಭವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದಾರೆ.
ಬೆಂಗಳೂರು: ನಗರದ ಹಲವೆಡೆ ಸೋಮವಾರ ಸೂರ್ಯ ಚಮತ್ಕಾರ ಮೂಡಿಸಿದ್ದಾನೆ. ಸೂರ್ಯನ ಸುತ್ತ ರಿಂಗ್ ಗೋಚರವಾಗಿದೆ. ಖಗೋಳ ವಿಜ್ಞಾನಿಗಳಿಗೆ ಕುತೂಹಲ ಮೂಡಿಸಿದ್ದು ಹಲವರು ಈ ಸಂದರ್ಭವನ್ನು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದಾರೆ.
ಆರಂಭದಲ್ಲಿ ಹಸಿರು ನಂತರ ನೀಲಿ, ನಂತರ ಹಳದಿ ಬಣ್ಣದಲ್ಲಿ ಸೂರ್ಯನ ಸುತ್ತ ಬಳೆ ಸೃಷ್ಟಿಯಾದಂತೆ ಬಾನಂಗಳದಲ್ಲಿ ಕಂಡುಬಂದಿದೆ. ನಾಡಿದ್ದು ಮೇ 26ರಂದು ಚಂದ್ರಗ್ರಹಣವಿದ್ದು ಅದಕ್ಕೂ ಮುನ್ನ ಸೂರ್ಯ ತನ್ನ ವಿಶೇಷ ಪ್ರಭೆಯನ್ನು ಬೀರಿದ್ದಾನೆ. ಇಂದು ಬೆಳಗ್ಗೆ 10.30ರ ಸುಮಾರಿಗೆ ಬರಿಗಣ್ಣಿನಲ್ಲಿ ಇದು ಗೋಚರವಾಗಿದೆ.
ಸೂರ್ಯನ ಈ ವಿಶೇಷ ಪ್ರಭಾವಳಿ ಬಗ್ಗೆ ಖಗೋಳ ವಿಜ್ಞಾನಿಗಳು ವಿಶ್ಲೇಷಣೆ ನಡೆಸಿ ಏನಿದು ಎಂದು ಹೇಳಬೇಕಿದೆ.
ಸೂರ್ಯನ ಪ್ರಭಾವಲಯ?: ಸೂರ್ಯನ ಸುತ್ತ 22 ಡಿಗ್ರಿಯಲ್ಲಿ ಗೋಳಾಕಾರದಲ್ಲಿ ಕಾಮನಬಿಲ್ಲು ರೂಪದಲ್ಲಿ ಪ್ರಭಾವಳಿ ಕಂಡುಬಂದಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.