ವಿಶೇಷ

ಇದೇ ಮೊದಲು: ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್‌ ರ್ಯಾಂಕ್ ಗೆ ಬಡ್ತಿ!

Lingaraj Badiger

ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಸೇನೆಯ ಆಯ್ಕೆ ಮಂಡಳಿಯು 26 ವರ್ಷಗಳ ಗಣನೀಯ ಸೇವೆಯನ್ನು ಪೂರ್ಣಗೊಳಿಸಿದ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್(ಟೈಮ್‌ ಸ್ಕೇಲ್‌) ಶ್ರೇಣಿಗೆ ಬಡ್ತಿ ನೀಡಿದೆ.

ಇದೇ ಮೊದಲ ಬಾರಿಗೆ ಸಂಕೇತ ದಳ, ಎಲೆಕ್ಟ್ರಾನಿಕ್ಸ್‌ ಮತ್ತು ಮೆಕಾನಿಕಲ್‌ ಇಂಜಿನಿಯರ್‌ ವಿಭಾಗ ಹಾಗೂ ಇಂಜಿನಿಯರ್‌ಗಳ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಐವರು ಮಹಿಳಾ ಅಧಿಕಾರಿಗಳನ್ನು ಕರ್ನಲ್ ಹುದ್ದೆಗೆ ಅನುಮೋದಿಸಲಾಗಿದೆ ಎಂದು ಭಾರತೀಯ ಸೇನೆ ಸೋಮವಾರ ತಿಳಿಸಿದೆ.

ಈ ಹಿಂದೆ ಮಹಿಳಾ ಅಧಿಕಾರಿಗಳಿಗೆ ಕರ್ನಲ್‌ ಹುದ್ದೆಗೆ ಬಡ್ತಿ ನೀಡಲು ಕೇವಲ ಸೇನಾ ವೈದ್ಯಕೀಯ ದಳ, ಜಡ್ಜ್‌ ಅಡ್ವೋಕೇಟ್ ಜನರಲ್ ಮತ್ತು ಸೇನಾ ಶಿಕ್ಷಣ ದಳದವರನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಈಗ ಐವರು ಮಹಿಳಾ ಅಧಿಕಾರಿಗಳಿಗೆ ಕರ್ನಲ್‌ ಹುದ್ದೆಗೆ ಬಡ್ತಿ ನೀಡುವುದರೊಂದಿಗೆ ಸೇನೆಯಲ್ಲಿ ಮಹಿಳೆಯರಿಗೆ ವೃತ್ತಿ ಅವಕಾಶಗಳನ್ನು ವಿಸ್ತರಿಸಿದೆ.

ಸಂಕೇತ ದಳದ ಲೆಫ್ಟಿನೆಂಟ್ ಕರ್ನಲ್ ಸಂಗೀತಾ ಸರ್ದಾನಾ, ಇಎಂಇ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಸೋನಿಯಾ ಆನಂದ್ ಹಾಗೂ ಲೆಫ್ಟಿನೆಂಟ್ ಕರ್ನಲ್ ನವನೀತ್ ದುಗ್ಗಲ್, ಇಂಜಿನಿಯರ್ಸ್‌ ವಿಭಾಗದ ಲೆಫ್ಟಿನೆಂಟ್ ಕರ್ನಲ್ ರೀನು ಖನ್ನಾ ಮತ್ತು ಲೆಫ್ಟಿನೆಂಟ್ ಕರ್ನಲ್ ರಿಚ್ಚಾ ಸಾಗರ್ ಅವರಿಗೆ ಬಡ್ತಿ ನೀಡಲಾಗಿದೆ.

SCROLL FOR NEXT