ನೆರವು ನೀಡಿದ ಪೊಲೀಸರ ಜೊತೆ ಯಶ್ವಂತಿ 
ವಿಶೇಷ

ತಡ ರಾತ್ರಿ ಪೊಲೀಸರಿಂದಲೇ ಮಹಿಳೆಯರಿಗೆ ಮನೆ ತನಕ ಡ್ರಾಪ್: ಆಂಧ್ರ ಪೊಲೀಸರ ನೂತನ ಯೋಜನೆಗೆ ಶ್ಲಾಘನೆ

ಕಾಕಿನಾಡ ನಗರದ ನಿವಾಸಿ ಯಶ್ವಂತಿ ವಿಶಾಖಪಟ್ಟಣಂ ನಿಂದ ನಗರಕ್ಕೆ ಬರುವಾಗ ತಡವಾಗಿತ್ತು. ಸಂಜೆ ತಲುಪಬೇಕಿದ್ದ ಬಸ್ಸು, ದಾರಿ ಮಧ್ಯ ಕೆಟ್ಟಿದ್ದರಿಂದ ತಡವಾಗಿತ್ತು. 

ಅಮರಾವತಿ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಪೊಲೀಸ್ ಇಲಾಖೆ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತಡರಾತ್ರಿ ಮನೆಗೆ ಹಿಂದಿರುಗುವ ಮಹಿಳೆಯರನ್ನು ಸುರಕ್ಷಿತವಾಗಿ ಮನೆಗೆ ಡ್ರಾಪ್ ಮಾಡುವುದೇ ಆ ಯೋಜನೆ.

ಮಹಿಳೆಯರ ಸುರಕ್ಷತೆಯ ಕುರಿತು ಎದ್ದಿರುವ ಅಪಸ್ವರದ ಬೆನ್ನಲ್ಲೇ ಪೊಲೀಸರ ಈ ಕ್ರಮಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಕಿನಾಡ ನಗರದ ನಿವಾಸಿ ಯಶ್ವಂತಿ ವಿಶಾಖಪಟ್ಟಣಂ ನಿಂದ ನಗರಕ್ಕೆ ಬರುವಾಗ ತಡವಾಗಿತ್ತು. ಸಂಜೆ ತಲುಪಬೇಕಿದ್ದ ಬಸ್ಸು, ದಾರಿ ಮಧ್ಯ ಕೆಟ್ಟಿದ್ದರಿಂದ ತಡವಾಗಿತ್ತು. 

ಆಗ ಸಮಯ ಮಧ್ಯರಾತ್ರಿ 1ರ ಅಸುಪಾಸು. ಆ ಸಮಯದಲ್ಲಿ ಒಬ್ಬರೇ ರಸ್ತೆಯಲ್ಲಿ ನಡೆದುಹೋಗಲೂ ಅವರಿಗೆ ಭಯವಾಯಿತು. ಇನ್ನು ರಿಕ್ಷಾ ಹಿಡಿಯಲು ಕೂಡಾ ಮನಸ್ಸು ತಡವರಿಸಿತು. ಆ ಸಮಯದಲ್ಲಿ ಅವರಿಗೆ ನೆನಪಾಗಿದ್ದು 'ಮಹಿಳೆಯರನ್ನು ಮನೆಗೆ ಸುರಕ್ಷಿತವಾಗಿ ಡ್ರಾಪ್' ಮಾಡುವ ಪೊಲೀಸರ ವಿನೂತನ ಸಹಾಯವಾಣಿ. ಬೇರೆ ದಾರಿ ಕಾಣದೆ ಯಶ್ವಂತಿ ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡಿದ್ದರು.

ಯಶ್ವಂತಿ ತಮ್ಮ ಪರಿಸ್ಥಿತಿಯನ್ನು ಪೊಲೀಸರಿಗೆ ಮನವರಿಕೆ ಮಾಡಿ, ತಾವು ಮನೆಗೆ ತಲುಪಲು ಸಹಾಯ ಮಾಡುವಂತೆ ಕೇಳಿಕೊಂಡರು. ತಕ್ಷಣವೇ ಮನವಿಗೆ ಪೊಲೀಸರು ಸ್ಪಂದಿಸಿದ್ದರು. ಯಶ್ವಂತಿ ಇದ್ದಲ್ಲಿಗೇ ಇನ್ಸ್ ಪೆಕ್ತರ್ ಮತ್ತು ಆಗ ರೌಂಡ್ಸ್ ನಲ್ಲಿದ್ದ ಪೇದೆಗಳು ಬಂದರು. ಯಶ್ವಂತಿಯನ್ನು ಪೊಲೀಸರು ಸುರಕ್ಷಿತವಾಗಿ ಅವರ ಮನೆಗೆ ಕರೆದೊಯ್ದರು. ಇದೊಂಡು ಉದಾಹರಣೆಯಷ್ಟೇ.

Women Drop at Home ಎಂಬ ಹೆಸರಿನ ಈ ಯೋಜನೆ, ಎಸ್ಪಿ ರವೀಂದ್ರನಾಥ್ ಬಾಬು ಅವರ ಪರಿಕಲ್ಪನೆ. ಈ ಯೋಜನೆ ಶುರುವಾದಾಗಿನಿಂದಲೂಆಸಂಖ್ಯ ಮಹಿಳೆಯರಿಗೆ ರಾತ್ರಿ ವೇಳೆ ಪೊಲೀಸರ ನೆರವು ಒದಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT