ವಿಶೇಷ

ಅಚ್ಚರಿಯ ವಿದ್ಯಮಾನ: ಇಂಗ್ಲೆಂಡ್ ಆಗಸದಲ್ಲಿ ಕಂಡುಬಂದ ಬಿಳಿ ಬಣ್ಣದ ಕಾಮನಬಿಲ್ಲು

Harshavardhan M

ಲಂಡನ್: ಅಪರೂಪರ ಘಟನೆಯೊಂದರಲ್ಲಿ ಇಂಗ್ಲೆಂಡಿನ ಪೂರ್ವ ಕರಾವಳಿಯ ಜನರು ಅಚ್ಚರಿ ವಿದ್ಯಮಾನಕ್ಕೆ ಸಾಕ್ಷಿಯಾದರು. ಎಸೆಕ್ಸ್, ನಾರ್ಫಾಕ್ ಮತ್ತು ಸಫಾಕ್ ನಗರಗಳ ಜನರು ಬಿಳಿ ಬಣ್ಣದ ಕಾಮನಬಿಲ್ಲನ್ನು ಕುತೂಹಲದಿಂದ ನೋಡಿದ್ದಾರೆ. 

ಬಿಳಿ ಬಣ್ಣದ ಕಾಮನಬಿಲ್ಲಿಗೆ ವೈಜ್ನಾನಿಕ ವಿವರಣೆಯೂ ಇದೆ. ಮಂಜಿನ ಕಣಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ ಈ ಬಗೆಯ ಕಾಮನಬಿಲ್ಲು ನಿರ್ಮಾಣವಾಗುತ್ತದೆ. 

ಮಂಜಿನ ಕಣಗಳು ಮಸುಕಾದ ಹಬೆಯನ್ನು ಉಂಟುಮಾಡುವುದರಿಂದ ಕಾಮನಬಿಲ್ಲಿನ ಮಿಕ್ಕ ಬಣ್ಣಗಳು ಮರೆಯಾಗಿ ಬರೀ ಬಿಳಿ ಬಣ್ಣ ಮಾತ್ರವೇ ಕಾಣಿಸುತ್ತದೆ ಎಂದು ಪರಿಣತರು ಹೇಳಿದ್ದಾರೆ.

SCROLL FOR NEXT