ವಿಶೇಷ

ಈ ಜಿಲ್ಲೆಯ ಎಲ್ಲಾ 118 ಪಂಚಾಯಿತಿಗಳಲ್ಲಿ ಗ್ರಂಥಾಲಯ: ಜಾರ್ಖಂಡ್ ಜಮ್ತಾರಾ ಜಿಲ್ಲೆಯ ಸಾಧನೆ

Harshavardhan M

ರಾಂಚಿ: ದೇಶದಲ್ಲೇ ಮೊದಲ ಬಾರಿಗೆ ಎಲ್ಲಾ 118 ಪಂಚಾಯಿತಿಗಳಲ್ಲಿ ಗ್ರಂಥಾಲಯ ಹೊಂದಿದ ಜಿಲ್ಲೆ ಎನ್ನುವ ಕೀರ್ತಿಗೆ ಜಾರ್ಖಂಡ್ ರಾಜ್ಯದ ಜಮ್ತಾರ ಜಿಲ್ಲೆ ಪಾತ್ರವಾಗಿದೆ. 

ಜಮ್ತಾರ ಡೆಪ್ಯುಟಿ ಕಮೀಷನರ್ ಫೈಜ್ ಅಹಮದ್ ಮುಮ್ತಾಜ್ ಅವರು ಗ್ರಾಮೀಣ ಭಾಗದಲ್ಲಿ ಗ್ರಂಥಾಲಯ ನಿರ್ಮಾಣ ಯೋಜನೆಯನ್ನು ಜಾರಿಗೆ ತಂದವರು. ನಿರುಪಯುಕ್ತವಾಗಿ ಬಿದ್ದಿದ್ದ ಹಳೆಯ ಸರ್ಕಾರಿ ಕಟ್ಟಡಗಳನ್ನು ನವೀಕರಿಸಿ ಅದಕ್ಕೆ ಗ್ರಂಥಾಲಯದ ಸ್ವರೂಪ ಕೊಡುವ ಮೂಲಕ ಶಿಕ್ಷಣ ಕ್ರಾಂತಿಗೆ ಅವರು ಮುನ್ನುಡಿ ಬರೆದಿದ್ದಾರೆ. 

ಕೆಲ ಪಂಚಾಯಿತಿಗಳಲ್ಲಿ ಗ್ರಂಥಾಲಯ ಕಟ್ಟಡಗಳು ಶಿಥಿಲಗೊಂಡಿದ್ದವು, ಅಲ್ಲದೆ ಪೀಠೋಪಕರಣಗಳು, ಪುಸ್ತಕಗಳು, ವೃತ್ತಪತ್ರಿಕೆಗಳ ವ್ಯವಸ್ಥೆ ಸರಿಯಾಗಿರಲ್ಲಿಲ್ಲ. ಅಂಥಾ ಕಡೆಗಳಲ್ಲಿ ಅಗತ್ಯ ನೆರವನ್ನು ನೀಡಿ ಗ್ರಂಥಾಲಯ ಕಾರ್ಯಚಾಲನೆಗೆ ವ್ಯವಸ್ಥೆ ರೂಪಿಸಲಾಗಿದೆ. 

ಈ ಹಿಂದೆ ಗ್ರಾಮಸ್ಥರೊಬ್ಬರು ಅವರ ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣ ಸಂಬಂಧ ಅಹವಾಲು ಸಲ್ಲಿಸಲು ಬಂದಿದ್ದರು. ಗ್ರಾಮದ ಯುವಕರು ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಪಕ್ಕದ ಊರುಗಳಿಗೆ ಹೋಗಬೇಕಾದ ಪರಿಸ್ಥಿತಿಯಿದೆ. ನಮ್ಮಲ್ಲೇ ಗ್ರಂಥಾಲಯ ನಿರ್ಮಾಣವಾದರೆ ಅನುಕೂಲವಾಗುತ್ತದೆ ಎಂದು ಮನವಿ ಸಲ್ಲಿಸಿದ್ದರು. ಆಗ ಡೆಪ್ಯುಟಿ ಕಮೀಷನರ್ ಅವರಿಗೆ ಎಲ್ಲಾ ಪಂಚಾಯಿತಿಗಳಲ್ಲೂ ಗ್ರಂಥಾಲಯ ನಿರ್ಮಿಸುವ ಉಪಾಯ ಹೊಳೆದಿತ್ತು. 

SCROLL FOR NEXT