ವಿಶೇಷ

ಫೈಟರ್ ಪೈಲಟ್ ತಂದೆ-ಮಗಳಿಂದ ಇತಿಹಾಸ ಸೃಷ್ಟಿ: ವಾಯುಪಡೆಯ ಯುದ್ಧ ವಿಮಾನ ಒಟ್ಟಿಗೆ ಹಾರಿಸಿ ಸಾಧನೆ!

Vishwanath S

ಯುದ್ಧ ವಿಮಾನವನ್ನು ಹಾರಿಸುವ ಮೂಲಕ ತಂದೆ-ಮಗಳು ಭಾರತೀಯ ವಾಯುಪಡೆಯ (ಐಎಎಫ್) ಇತಿಹಾಸದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ.

ಏರ್ ಕಮಾಂಡರ್ ಸಂಜಯ್ ಶರ್ಮಾ ಮತ್ತು ಅವರ ಮಗಳು ಫ್ಲೈಯಿಂಗ್ ಆಫೀಸರ್ ಅನನ್ಯಾ ಅವರು ವಾಯುಪಡೆಯ ಯುದ್ಧ ವಿಮಾನವನ್ನು ಒಟ್ಟಿಗೆ ಹಾರಿಸಿದ ಮೊದಲ ತಂದೆ-ಮಗಳ ಜೋಡಿಯಾಗಿದೆ. ಸಂಜಯ್ ಶರ್ಮಾ ತನ್ನ ಮಗಳೊಂದಿಗೆ ಯುದ್ಧ ವಿಮಾನವನ್ನು ಹಾರಿಸಿದ್ದು ತನ್ನ ಜೀವನದ 'ಅತ್ಯಂತ ದೊಡ್ಡ ದಿನ' ಎಂದು ವಿವರಿಸಿದ್ದಾನೆ.

ಏರ್ ಫೋರ್ಸ್ ಫೈಟರ್ ಪೈಲಟ್ ಸಂಜಯ್ ಶರ್ಮಾ ಮತ್ತು ಅವರ ಪುತ್ರಿ ಅನನ್ಯಾ ಮೇ 30ರಂದು ಕರ್ನಾಟಕದ ಬೀದರ್ ವಾಯುನೆಲೆಯಲ್ಲಿ ಈ ಸಾಧನೆ ಮಾಡಿದರು. ಆದರೆ ಈ ಘಟನೆಯು ಇಲ್ಲಿಯವರೆಗೆ ಮಾಧ್ಯಮಗಳಲ್ಲಿ ಬಿತ್ತರಗೊಂಡಿರಲಿಲ್ಲ. ಕಳೆದ ಮಂಗಳವಾರ ಅವರ ಚಿತ್ರಗಳು ಕಾಣಿಸಿಕೊಂಡ ನಂತರ ಈ ವಿದ್ಯಾಮಾನ ಬೆಳಕಿಗೆ ಬಂದಿದೆ.

ವಾಯುಪಡೆಯ ಅಧಿಕಾರಿಯೊಬ್ಬರ ಪ್ರಕಾರ, ವಾಯುಪಡೆಯಲ್ಲಿ ತಂದೆ-ಮಗ ಒಟ್ಟಿಗೆ ಫೈಟರ್ ಜೆಟ್‌ಗಳನ್ನು ಹಾರಿಸಿದ ಅನೇಕ ನಿದರ್ಶನಗಳಿವೆ. ಆದರೆ ಇದು ತಂದೆ-ಮಗಳು ಒಟ್ಟಿಗೆ ಹಾರಿಸಿದ ಮೊದಲ ಪ್ರಕರಣವಾಗಿದೆ. 2021ರಲ್ಲಿ ಅನನ್ಯಾ ಭಾರತೀಯ ವಾಯುಪಡೆಗೆ ಫೈಟರ್ ಪೈಲಟ್ ಆಗಿ ಸೇರ್ಪಡೆಗೊಂಡಿದ್ದರು. ಆಕೆಯ ತಂದೆ ಏರ್ ಕಮೋಡೋರ್ ಶರ್ಮಾ ಅವರು 1989ರಲ್ಲಿ ವಾಯುಪಡೆಗೆ ಸೇರಿದರು.

ತಂದೆ ಮತ್ತು ಮಗಳು ಬ್ರಿಟಿಷ್ ಮೂಲದ ಹಾಕ್-132 ಅತ್ಯಾಧುನಿಕ ಟ್ರೈನಿ ಟ್ರೈನರ್(ಎಜೆಟಿ) ವಿಮಾನವನ್ನು ಹಾರಿಸಿದರು. ವಾಯುಪಡೆಯಲ್ಲಿ ಫೈಟರ್ ಜೆಟ್ ಪೈಲಟ್‌ಗಳಾಗಿ ಮಹಿಳೆಯರನ್ನು ಸೇರ್ಪಡೆಗೊಳಿಸುವ ನಿರ್ಧಾರದ ಏಳು ವರ್ಷಗಳ ನಂತರ ಈ ಘಟನೆ ನಡೆದಿದೆ. 2016ರಲ್ಲಿ ಏರ್ ಫೋರ್ಸ್‌ಗೆ ಟ್ರೈನಿಯಾಗಿ ಸೇರಿದ ನಂತರ, ಅನನ್ಯಾ ತನ್ನ ಜೀವನದ ಕನಸನ್ನು ನನಸಾಗಿಸಿಕೊಳ್ಳುವ ಹಾದಿಯಲ್ಲಿದ್ದರು. ಅನನ್ಯಾ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ನಲ್ಲಿ ಬಿ.ಟೆಕ್ ಮಾಡಿದ್ದು ನಂತರ ಏರ್ ಫೋರ್ಸ್ ನಲ್ಲಿ ಟ್ರೈನಿ ಪೈಲಟ್ ಆಗಿ ಆಯ್ಕೆಯಾಗಿದ್ದರು.

ಏರ್ ಕಮಾಂಡರ್ ಶರ್ಮಾ ಅವರು MiG-21 ಸೇರಿದಂತೆ ಹಲವು ಯುದ್ಧ ವಿಮಾನಗಳನ್ನು ಹಾರಿಸಿದ ಅನುಭವವನ್ನು ಹೊಂದಿದ್ದಾರೆ. ಅನನ್ಯಾ ಪ್ರಸ್ತುತ ಹಾಕ್ ಏಜೆಂಟ್ ವಿಮಾನಕ್ಕಾಗಿ ತರಬೇತಿ ಪಡೆಯುತ್ತಿದ್ದಾರೆ. ಪದವಿ ಮುಗಿದ ಕೂಡಲೇ ಮುಂಚೂಣಿಯ ಫೈಟರ್ ಜೆಟ್‌ಗಳನ್ನು ಹಾರಿಸಲಿದ್ದಾರೆ. ಅನನ್ಯಾ ಅವರು ವಾಯುಪಡೆಯ ಅಧಿಕಾರಿಯ ಕುಟುಂಬದಲ್ಲಿ ಬೆಳೆದರು. ಆದ್ದರಿಂದ ಅವರು ವಾಯುಪಡೆಯ ಅರ್ಹತೆಯ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಇನ್ನು ದೇಶದ ಶತ್ರುಗಳ ವಿರುದ್ಧದ ಹೋರಾಟದಲ್ಲಿ ತಂದೆ-ಮಗಳ ಜೋಡಿ ಎಂದೂ ಹಿಂದೆ ಬೀಳುವುದಿಲ್ಲ.

SCROLL FOR NEXT