ದೆಹಲಿ ವಿಮಾನ ನಿಲ್ದಾಣದಲ್ಲಿ ಪಿ ಗೀತಾ ಅವರೊಂದಿಗೆ ಡಾ. ಮೊಹಮ್ಮದ್ ಆಶೀಲ್ 
ವಿಶೇಷ

ವಿಮಾನ ಹಾರಾಟದ ಮಾರ್ಗ ಮಧ್ಯ ಯೋಧನಿಗೆ ಹೃದಯಾಘಾತ: ಪ್ರಾಣ ಉಳಿಸಿದ ಕೇರಳದ 'ಫ್ಲಾರೆನ್ಸ್ ನೈಟಿಂಗೇಲ್' ಪಿ.ಗೀತಾ!

ಕೇರಳದ ಫ್ಲಾರೆನ್ಸ್ ನೈಂಟಿಗೇಲ್ ಪ್ರಶಸ್ತಿ 2022 ಪುರಸ್ಕೃತರಾದ ರಾದ ಪಿ ಗೀತಾ ಅವರು ವಿಮಾನ ಹಾರಾಟದ ಮಾರ್ಗ ಮಧ್ಯದಲ್ಲಿ ನಿಲಂಬುರ್ ನ 32 ವರ್ಷದ ಯೋಧರೊಬ್ಬರ ಪ್ರಾಣ ಕಾಪಾಡಿದ್ದಾರೆ.

ತಿರುವನಂತಪುರಂ: ಕೇರಳದ ಫ್ಲಾರೆನ್ಸ್ ನೈಂಟಿಗೇಲ್ ಪ್ರಶಸ್ತಿ 2022 ಪುರಸ್ಕೃತರಾದ ರಾದ ಪಿ ಗೀತಾ ಅವರು ವಿಮಾನ ಹಾರಾಟದ ಮಾರ್ಗ ಮಧ್ಯದಲ್ಲಿ ನಿಲಂಬುರ್ ನ 32 ವರ್ಷದ ಯೋಧರೊಬ್ಬರ ಪ್ರಾಣ ಕಾಪಾಡಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 32 ವರ್ಷದ ಯೋಧ ಸುಮನ್ ಅವರಿಗೆ ಮಾರ್ಗ ಮಧ್ಯೆದಲ್ಲಿ ಹೃದಯಾಘಾತವಾಗಿದ್ದು, ಉಸಿರಾಟದ ತೊಂದರೆ ಎದುರಾಗಿತ್ತು. ಈ ಸಂದರ್ಭದಲ್ಲಿ ವಿಮಾನದಲ್ಲಿಯೇ ಇದ್ದ ಕೊಝಿಕೋಡ್ ವೈದ್ಯಕೀಯ ಕಾಲೇಜಿನ ಮಾಜಿ ನರ್ಸಿಂಗ್ ಸೂಪರಿಟೆಂಡೆಂಟ್ ಪಿ. ಗೀತಾ, ಚಿಕಿತ್ಸೆ ನೀಡುವ ಮೂಲಕ ತಾನು ಅತ್ಯುನ್ನತ ಪ್ರಶಸ್ತಿಗೆ ಹೇಗೆ ಅರ್ಹಳು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗೀತಾ ಭಾನುವಾರ ಬೆಳಗ್ಗೆ ಕಣ್ಣೂರಿನಿಂದ ಏರ್ ಇಂಡಿಯಾ ವಿಮಾನ (ಎಐ 425)ರಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. 

ವಿಮಾನ ಟೇಕ್ ಆಫ್ ಆದ ಅರ್ಧ ಗಂಟೆಯಲ್ಲೇ ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯಕ್ಕಾಗಿ ನವದೆಹಲಿಗೆ ಹೋಗುತ್ತಿದ್ದ ಸುಮನ್ ಅವರಿಗೆ ಹೃದಯಾಘಾತವಾಗಿದೆ. ಆಗ ವಿಮಾನದಲ್ಲಿ ಯಾರಾದರೂ ನರ್ಸ್, ಪ್ರಯಾಣಿಕರಿದ್ದೀರಾ ಎಂದು ಸ್ಟೆವರ್ಡ್ ಮುಸ್ತಾಪಾ ವಿಚಾರಿಸಿದಾಗ, ಗೀತಾ ಕೂಡಲೇ ಕಾರ್ಯನಿರ್ವಹಿಸಿದ್ದಾರೆ.

ಸುಮನ್ ಆರೋಗ್ಯ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಸುಮನ್ ಅವರ ರಕ್ತದೊತ್ತಡ ಹಾಾಗೂ ಪಲ್ಸ್ ರೇಟ್ ಕಡಿಮೆಯಾಗಿರುವುದನ್ನು ಪತ್ತೆ ಹಚ್ಚಿದ್ದಾರೆ. ನಂತರ ಸಿಪಿಆರ್ ಆರಂಭಿಸಿದ್ದಾರೆ. ಮುಸ್ತಫಾ ಅವರ ಸಹಾಯದಿಂದ ಅಭಿದಮನಿ ದ್ರವವನ್ನು ನಿರ್ವಹಿಸಿದ್ದಾರೆ. ಆ ಹೊತ್ತಿಗೆ ಮಾಜಿ ರಾಜ್ಯ ಸಾಮಾಜಿಕ ಭದ್ರತಾ ಮಿಷನ್ ನಿರ್ದೇಶಕ ಮತ್ತು  ವಿಶ್ವ ಆರೋಗ್ಯ ಸಂಸ್ಥೆ-ನವದೆಹಲಿಯ ರಾಷ್ಟ್ರೀಯ ವೃತ್ತಿಪರ ಅಧಿಕಾರಿ ಮೊಹಮ್ಮದ್ ಆಶೀಲ್ ಸೇರಿದಂತೆ ಹೆಚ್ಚಿನ ವೈದ್ಯರು ಸಹಾಯಕ್ಕೆ ಧಾವಿಸಿದ್ದಾರೆ. ಅವರೆಲ್ಲರ ಪ್ರಯತ್ನದಿಂದ ಸುಮನ್ ಬದುಕುಳಿದಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಗೀತಾ, ಆರಂಭದಲ್ಲಿ ಸುಮನ್ ಅವರಿಗೆ ಚಿಕಿತ್ಸೆ ನೀಡುವುದು ಕಷ್ಟಕರವಾಗಿತ್ತು, ಸಿಪಿಆರ್ ಮೂಲಕ ಪಲ್ಸ್ ರೇಟ್ ಗೊತ್ತಾಯಿತು. ನಂತರ ಅವರ ಜೀವ ಉಳಿಸಲು ಸಾಧ್ಯವಾಯಿತು. ಇದಕ್ಕೆ ಡಾ. ಪ್ರೇಮ್ ಕುಮಾರ್, ಡಾ. ಆಶೀಲ್ ನೆರವಾದರು. ವಿಮಾನದ ಹಿಂಭಾಗಕ್ಕೆ ಆತನನ್ನು ಕರೆತರಲು ಬ್ಲಾಕೆಂಟ್ ಬಳಸಿದೆವು. ಆತ ದೆಹಲಿಗೆ ಬರುವವರೆಗೂ ಆತನ ಜೊತೆಯಲ್ಲಿಯೇ ಇದುದ್ದಾಗಿ ತಿಳಿಸಿದರು. 

ಸಮಯಕ್ಕೆ ಸರಿಯಾದ ಸಿಪಿಆರ್ ಬಹಳ ಮುಖ್ಯ: ಗೀತಾ ಸುಮನ್ ಅವರ ಸಂಬಂಧಿ ಅಂದುಕೊಂಡಿದ್ದೆ. ಆಕೆ ತನ್ನ ಆಸನಕ್ಕೆ ಮರಳಿದ ನಂತರವೇ ಆಕೆ ನರ್ಸ್ ಎಂಬುದು ಗೊತ್ತಾಯಿತು. ಸರಿಯಾದ ಸಮಯಕ್ಕೆ ಸಿಪಿಆರ್ ಮೂಲಕ ಸುಮನ್ ಪ್ರಾಣ ಉಳಿಸಿದ್ದಾರೆ ಎಂದು ಡಾ.ಆಶೀಲ್ ಹೇಳಿದರು. ನವದೆಹಲಿಯಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಸುಮನ್ ಅವರನ್ನು ಆಸ್ಪತ್ರೆಯೊಂದಕ್ಕೆ ಸೇರಿಸಲಾಯಿತು. ಗೀತಾ ಅವರೊಂದಿಗೆ ಅವರ ಪತಿ ಪಿ. ಸತ್ಯ ಪ್ರಕಾಶ್ ಕೂಡಾ ಇದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT