ವಿಶೇಷ

ಕೆಂಪೇಗೌಡ ಏರ್ ಪೋರ್ಟ್ ನ ಟರ್ಮಿನಲ್ 2 ಒಳಾಂಗಣ ಬಹುತೇಕ ನಿರ್ಮಾಣವಾಗಿದ್ದು ಬಿದಿರಿನಿಂದ: ಇದರ ವಾಸ್ತುಶಿಲ್ಪಿ ಯಾರು, ಏನಂತಾರೆ?

Sumana Upadhyaya

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಬಹು ನಿರೀಕ್ಷಿತ ಟರ್ಮಿನಲ್ 2ವನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು. ಈ ಟರ್ಮಿನಲ್ ನ ಹೆಚ್ಚಿನ ಭಾಗ ಬಿದಿರಿನಿಂದ ನಿರ್ಮಿಸಲಾಗಿದ್ದು ಅದನ್ನು ಎಂಜಿನಿಯರ್ ಗಳು ವಿನ್ಯಾಸಗೊಳಿಸಿದ್ದಾರೆ. ಬೆಂಗಳೂರು ಮೂಲದ ವಾಸ್ತುಶಿಲ್ಪಿ, ವಿಜ್ಞಾನಿ ಹಾಗೂ ಕಾರ್ಯಕರ್ತೆ ನೀಲಂ ಮಂಜುನಾಥ್, ಅವರು ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್ 2ನ ವಿನ್ಯಾಸ ಮತ್ತು ಕಟ್ಟಡ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪರಿಸರಕ್ಕೆ ಹಾನಿಯಾಗದಂತೆ, ಕಡಿಮೆ ಇಂಧನ ಹೊರಸೂಸುವ ಅಂದರೆ ಹೆಚ್ಚು ಇಂಧನ ದಕ್ಷತೆ ಹೊಂದಿರುವ ವಸ್ತುಗಳು ಮತ್ತು ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಪ್ರಪಂಚದಾದ್ಯಂತ ಹಲವು ಪ್ರಾಜೆಕ್ಟ್ ಗಳನ್ನು ನಿರ್ಮಿಸಿಕೊಟ್ಟು ಹೆಸರುವಾಸಿಯಾಗಿರುವ ಆರ್ಕಿಟೆಕ್ಟ್ ನೀಲಂ ಮಂಜುನಾಥ್, ಕಳೆದೆರಡು ದಶಕಗಳಿಂದ ಬಿದಿರಿನಲ್ಲಿ ಹಲವು ವಿನ್ಯಾಸಗಳನ್ನು ಮಾಡುತ್ತಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಲ್ಯಾಟಿಟ್ಯೂಡ್ ಸದರ್ನ್ ರೀಜನಲ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿರುವ ನೀಲಂ, ನಾನು ವಿವಿಧ ರೀತಿಯ ವಸ್ತುಗಳು, ಕಟ್ಟಡ ವ್ಯವಸ್ಥೆಗಳು, ತಂತ್ರಜ್ಞಾನಗಳನ್ನು ಹುಡುಕುತ್ತಿದ್ದೇನೆ, ಅದು ಕಡಿಮೆ ಇಂಧನ ಹೊರಸೂಸುವ ವಸ್ತುಗಳಿಂದ ಕಟ್ಟಡ ರಚಿಸಲು ಸಹಾಯವಾಗಿವೆ ಎನ್ನುತ್ತಾರೆ.

ನೀಲಂ ಮಂಜುನಾಥ್

ಕಾಲೇಜು ದಿನಗಳಲ್ಲೇ ಸುಸ್ಥಿರ ಸಾಮಗ್ರಿಗಳು ಮತ್ತು ಕಟ್ಟಡದ ರಚನೆ ವಿನ್ಯಾಸಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ನೀಲಂ ಮಂಜುನಾಥ್, 1999 ರಲ್ಲಿ ಆಗಿನ ಕರ್ನಾಟಕ ರಾಜ್ಯಪಾಲೆ ವಿ ಎಸ್ ರಮಾದೇವಿ ಅವರ ಕೋರಿಕೆಯ ಮೇರೆಗೆ ರಾಜಭವನದಲ್ಲಿ ಶಿಥಿಲಗೊಂಡ ಇಟ್ಟಿಗೆ ಕಟ್ಟಡವನ್ನು ಮರುರೂಪಿಸುವಂತೆ ಕೇಳಿದಾಗ ಬಿದಿರಿನಲ್ಲಿ ಕೆಲಸ ಮಾಡಿದ್ದರು.

ಮುಂದಿನ ದಶಕದಲ್ಲಿ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗುವತ್ತ ದಾಪುಗಾಲಿಡುತ್ತಿರುವಾಗ, ದೇಶ ಎದುರಿಸುತ್ತಿರುವ ವಸತಿ ಬಿಕ್ಕಟ್ಟಿಗೆ ಬಿದಿರು ಪ್ರಮುಖವಾಗಿದೆ ಎಂದು ನೀಲಂ ಮಂಜುನಾಥ್ ನಂಬಿದ್ದಾರೆ. ಜನಸಾಮಾನ್ಯರಿಗೆ ಸಿಮೆಂಟ್ ಮತ್ತು ಸ್ಟೀಲ್ ನಿಂದ ಮನೆ ನಿರ್ಮಿಸಿಕೊಡುವುದು ದೀರ್ಘಕಾಲಕ್ಕೆ ಅಸಾಧ್ಯ, ಈ ವಸ್ತುಗಳು ನವೀಕರಿಸಲಾಗದವು, ಅಂತಿಮವಾಗಿ ಖಾಲಿಯಾಗುತ್ತವೆ ಎಂದರು. 

ಭಾರತವು ವಿಶ್ವದಲ್ಲಿ ಬಿದಿರು ಉತ್ಪಾದನೆಯಲ್ಲಿ ಎರಡನೇ ಅತಿ ದೊಡ್ಡ ದೇಶವಾಗಿದೆ. ಬಿದಿರು ಬಹಳ ವೇಗವಾಗಿ ಬೆಳೆಯುತ್ತದೆ. ಇದಕ್ಕೆ ಬಹಳ ಯಂತ್ರೋಪಕರಣಗಳ ಅಗತ್ಯವಿರುವುದಿಲ್ಲ, ಬಿದಿರಿನಿಂದ ಕಟ್ಟಡ ನಿರ್ಮಿಸಲು ಸುಲಭ. ಬಿದಿರಿನ ದೊಡ್ಡ ಅಂಶವೆಂದರೆ ಅದರ ಶಕ್ತಿಯ ಸಮತೋಲನ. ಕಾಂಕ್ರೀಟ್ ಮತ್ತು ಉಕ್ಕಿಗೆ ಇಂಧನ ಅಗತ್ಯವಿರುತ್ತದೆ ಎಂದರು.

SCROLL FOR NEXT