ಪ್ರಭಾಕರ ಕಿಣಿ ನಿರ್ಮಿಸಿರುವ ಕಲಾಕೃತಿಗಳ ಮ್ಯೂಸಿಯಂ 
ವಿಶೇಷ

ಉಡುಪಿ: ಆರಾಧ್ಯ ದೈವ ಗಣೇಶನಿಗಾಗಿ ಕಲಾಕೃತಿಗಳ 'ಮ್ಯೂಸಿಯಂ' ನಿರ್ಮಿಸಿದ ವೃದ್ಧ ಪ್ರಭಾಕರ ಕಿಣಿ!

84 ವರ್ಷದ ವೃದ್ಧ ಪ್ರಭಾಕರ ಕಿಣಿ, ಕಲೆ ಮೂಲಕ ತಮ್ಮ ಕಲ್ಪನೆಗೆ ರಂಗು ತುಂಬಿದ್ದಾರೆ. ಇದು ಅವರು ಸೃಜನಶೀಲತೆಯನ್ನು ವ್ಯಕ್ತಪಡಿಸುವ ಮತ್ತು ಪ್ರದರ್ಶಿಸುವ ಏಕೈಕ ಮಾರ್ಗವಾಗಿದೆ.

ಉಡುಪಿ: 84 ವರ್ಷದ ವೃದ್ಧ ಪ್ರಭಾಕರ ಕಿಣಿ, ಕಲೆ ಮೂಲಕ ತಮ್ಮ ಕಲ್ಪನೆಗೆ ರಂಗು ತುಂಬಿದ್ದಾರೆ. ಇದು ಅವರು ಸೃಜನಶೀಲತೆಯನ್ನು ವ್ಯಕ್ತಪಡಿಸುವ ಮತ್ತು ಪ್ರದರ್ಶಿಸುವ ಏಕೈಕ ಮಾರ್ಗವಾಗಿದೆ.

ಉಡುಪಿಯ ಅಜ್ಜರಕಾಡಿನ ನಿವಾಸಿಯಾದ ಕಿಣಿ, ಗಣೇಶನ ಮಹಾನ್ ಆರಾಧಕರಾಗಿದ್ದು, ಅವರ ಹೆಚ್ಚಿನ ಕಲಾಕೃತಿಗಳು ಪ್ರೀತಿಯ ದೈವ ಗಣೇಶನಿಗೆ ಸಂಬಂಧಿಸಿದ್ದಾಗಿದೆ. 1959ರಲ್ಲಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಬಿಕಾಂ ಮುಗಿಸಿ, ಮುಂದೆ ಓದಲು ಮುಂಬೈಗೆ ತೆರಳಿದ ಕಿಣಿ, ಕಾನೂನು ಸಂಸ್ಥೆಯೊಂದರಲ್ಲಿ ಕಂಪನಿಯೊಂದರಲ್ಲಿ ಕಂಪನಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ನಂತರ 1985ರಲ್ಲಿ ತಮ್ಮದೇ ಆದ ಐಟಿ ಟ್ರೇಡಿಂಗ್ ಕಂಪನಿಯನ್ನು ಪ್ರಾರಂಭಿಸಿದ್ದರು.

1998ರಲ್ಲಿ ಬೆಂಗಳೂರಿಗೆ ತೆರಳಿ 500ಕ್ಕೂ ಹೆಚ್ಚು ಗಣೇಶನ ಪ್ರತಿಮೆಗಳ ಪ್ರದರ್ಶನಕ್ಕಾಗಿ 'ಶ್ರೀ ಗಣೇಶ ದುನಿಯಾ' ಎಂಬ ವಿಶೇಷ ಸ್ಥಳವನ್ನು ಸ್ಥಾಪಿಸುತ್ತಾರೆ. ಆರಂಭವಾಗುತ್ತಿದ್ದಂತೆಯೇ ಅದು ನೆರೆಹೊರೆಯವರ ತೀವ್ರ ಕುತೂಹಲ ಮತ್ತು ಗಮನ ಸೆಳೆಯಲು ಆರಂಭಿಸಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗ ಉಲ್ಬಣಿಸಿದಾಗ ಉಡುಪಿಗೆ ಮರಳಲು ನಿರ್ಧರಿಸಿದ ಕಿಣಿ, ಅಜ್ಜರಕಾಡಿನ ಫ್ಲಾಟ್ ನ್ನು ತಮ್ಮ ಕೆಲಸಕ್ಕೆ ಪ್ರೇರೇಪಿಸುವ ಸ್ಥಳವಾಗಿ ಮಾರ್ಪಡಿಸುತ್ತಾರೆ. ಆನ್‌ಲೈನ್‌ನಲ್ಲಿ ನಿಯತಕಾಲಿಕೆಗಳು ಮತ್ತು ಪುಸ್ತಕಗಳನ್ನು ಖರೀದಿಸಿ, ಅವುಗಳನ್ನು ಸಂಪೂರ್ಣವಾಗಿ ಓದಿ ಮುಗಿಸಿದಾಗ, ಆರ್ಟ್ ಥೆರಪಿ'ಯ ಕಲ್ಪನೆಯು ಅವರಿಗೆ ಹೊಳೆಯುತ್ತದೆ. ಆ ಮೂಲಕ ಲಾಕ್ ಡೌನ್ ಸಂದರ್ಭದಲ್ಲಿ ಅನಗತ್ಯ ಅಲೋಚನೆಗಳು ಸುಳಿಯದಂತೆ ನೋಡಿಕೊಳ್ಳುತ್ತಾರೆ. ಗಣೇಶನ ಮೇಲಿನ ಅವರ ಭಕ್ತಿಯಿಂದ ಮ್ಯಾಗಜನ್ ಮೇಲಿರುವ ಪ್ರತಿಯೊಂದು ಗಣೇಶನ ಕಲಾಕೃತಿಯನ್ನು ಗಮನಿಸುತ್ತಿರುತ್ತಾರೆ. ಇದರೊಂದಿಗೆ ಅವರಿಗೆ ಕಲೆಯ ಐಡಿಯಾ ಹೊಳೆಯುತ್ತದೆ. 

ಮ್ಯಾಗಜೀನ್ ಪುಟಗಳನ್ನು ಅಗತ್ಯವಿರುವ ಆಕಾರಗಳಿಗೆ ಕತ್ತರಿಸಲು ಪ್ರಾರಂಭಿಸುತ್ತಾರೆ. ಅವುಗಳನ್ನು ವಿಶಿಷ್ಟ ರೀತಿಯ ಗಣೇಶನ ಚಿತ್ರ ತಯಾರಿಕೆಗಾಗಿ ಇತರ ಕಾಗದದ ಚೂರುಗಳೊಂದಿಗೆ ಅಂಟಿಸುತ್ತಾರೆ. ಪ್ರಸ್ತುತ ನೂರಾರು ಇಂತಹ ಗಣೇಶನ ಕಲಾಕೃತಿಗಳು ಅವರ ಮನೆಯನ್ನು ಆಲಂಕರಿಸಿವೆ. ಸೃಜನಶೀಲತೆ ನನ್ನ ಪ್ಯಾಶನ್, ಸಮಯವನ್ನು ಕಳೆಯುವುದರ ಹೊರತಾಗಿ, ನಾನು ಕಲೆಯಲ್ಲಿಯೇ ಮುಳುಗಿರುವುದನ್ನು ಕಾಣಬಹುದು" ಎಂದು ಅವರು ಹೇಳುತ್ತಾರೆ. ಪ್ರತಿ ಕಲಾಕೃತಿ ರಚಿಸಲು ಕಿಣಿ 3-4 ಗಂಟೆಗಳ ಸಮಯ ತೆಗೆದುಕೊಳ್ಳುತ್ತಾರೆ. 

ಕಲಾಕೃತಿಗಳ ಕಪಾಟಿನ ಮುಂದೆ ಪ್ರಭಾಕರ ಕಿಣಿ

ಕಲಾ ಪ್ರಪಂಚಕ್ಕೆ ತನ್ನ ತಂದೆಯ ಕೊಡುಗೆ ಬಗ್ಗೆ ಹೆಮ್ಮೆ ಪಡುತ್ತಾರೆ ಆರ್ಕಿಟೆಕ್ಟ್ ಆಗಿರುವ ಅವರ ಮಗಳು ವಿದ್ಯಾ ಶಾನಭಾಗ್. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಕಿಣಿ, ಮ್ಯಾಗಜಿನ್ ಗಳಿಂದ ಸೂಕ್ತವಾದ ವರ್ಣರಂಜಿತ ಪುಟ ಕಂಡುಹಿಡಿದು ನಂತರ ಅದನ್ನು ವಿನ್ಯಾಸಕ್ಕೆ ತಕ್ಕಂತೆ ಕತ್ತರಿಸುತ್ತೇನೆ.ಇದು ನಿಖರತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.

ವೃದ್ದಾಪ್ಯ ವಯಸ್ಸಿನಲ್ಲಿ ಪೇಪರ್ ಕೊಲಾಜ್ ರೂಪದಲ್ಲಿ ಗರಿಷ್ಠ ಸಂಖ್ಯೆಯ ಗಣೇಶನ ಚಿತ್ರಗಳನ್ನು ಹೊಂದಿದ್ದಕ್ಕಾಗಿ  ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಅವರ ಹೆಸರು ದಾಖಲಾಗಿದೆ. ಗಣೇಶನ ಕಲಾಕೃತಿ ಹೊರತಾಗಿ, ಶ್ರೀರಾಮ, ಶ್ರೀಕೃಷ್ಣ ಮತ್ತು ಭಗವಾನ್ ಹನುಮಾನ್ ಮತ್ತಿತರ ಕಲಾಕೃತಿಗಳನ್ನು ಸಹ ಅವರು ರಚಿಸಿದ್ದು, ಇತ್ತೀಚಿಗೆ ತಮ್ಮ ನಿವಾಸದಲ್ಲಿ  ತಮ್ಮ ಕಲಾಕೃತಿಗಳ ಉಚಿತ ಪ್ರದರ್ಶನವನ್ನು ಏರ್ಪಡಿಸಿದ್ದರು, ಹಲವಾರು ಕಲಾ ಆಸಕ್ತರು ಭೇಟಿ ನೀಡಿದ್ದಾರೆ. 

ಕಿಣಿ ಅವರು ಹಳೆಯ ಮನೆಯನ್ನು ಖರೀದಿಸಿ 'ಕಲಾ ಕುಟೀರ' ನಿರ್ಮಿಸಲು ಉದ್ದೇಶಿಸಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಅವರು ಉಡುಪಿಗೆ ಸ್ಥಳಾಂತರಗೊಂಡಿದ್ದರೂ, ಅವರ ಸಂಪೂರ್ಣ ಕಲಾ ಸಂಗ್ರಹವನ್ನು ಅಜ್ಜರಕಾಡಿನ ಬಾಡಿಗೆ ವಸತಿಗೃಹದಲ್ಲಿ ಇಡಲು ಸಾಧ್ಯವಾಗಲಿಲ್ಲ. ಅದರಂತೆ ಅವರು ದಕ್ಷಿಣ ಕನ್ನಡದ ಮೂಲ್ಕಿಯ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಶ್ರೀ ಗಣೇಶ ಮ್ಯೂಸಿಯಂ' ಮಾಡಿದ್ದಾರೆ.

ಇದರಲ್ಲಿ ಇದು ಮರ, ಮಣ್ಣು ಮತ್ತು ನಾರಿನಿಂದ ಮಾಡಿದ 500 ಕಲಾಕೃತಿಗಳಿವೆ. ಇಳಿ ವಯಸ್ಸಿನಲ್ಲಿಯೂ ಕಲಾಕೃತಿ ರಚಿಸಬಹುದು ಎಂಬುದಕ್ಕೆ ನಾನೇ ಉದಾಹರಣೆ ಎಂದು ಅವರು ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT