ಕ್ರೈಸ್ಟ್‌ಚರ್ಚ್: ಪರಿಣಾಮಕಾರಿ ಆಲ್‌ರೌಂಡ್ ಪ್ರದರ್ಶನ ನೀಡಿದ ನ್ಯೂಜಿಲೆಂಡ್, ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 8 ವಿಕೆಟ್‌ಗಳಿಂದ ಗೆಲವು ದಾಖಲಿಸಿದೆ. ಆ ಮೂಲಕ ಎರಡು ಪಂದ್ಯಗಳ ಟೆಸ್ಚ್ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆಯೊಂದಿಗೆ ಶುಭಾರಂಭ ಮಾಡಿದೆ.
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಪಂದ್ಯದಲ್ಲಿ ಸೋಮವಾರ ನಾಲ್ಕನೇ ಮತ್ತು ಉಪಾಂತ್ಯ ದಿನದಾಟದಲ್ಲಿ ಗೆಲ್ಲಲು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 105 ರನ್‌ಗಳಿಸಬೇಕಿದ್ದ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡು ವಿಜಯೋತ್ಸವ ಆಚರಿಸಿತು.
ಮೊದಲ ಇನ್ನಿಂಗ್ಸ್‌ನಲ್ಲಿ 303 ರನ್‌ಗಳ ಭಾರಿ ಹಿನ್ನಡೆ ಅನುಭವಿಸಿ ನ್ಯೂಜಿಲೆಂಡ್‌ನಿಂದ ಫಾಲೋಆನ್ ಹೇರಿಸಿಕೊಂಡು ತಾನೇ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದ ಶ್ರೀಲಂಕಾ, ಅಂತಿಮವಾಗಿ 407ರನ್ ಗಳಿಗೆ ಆಲೌಟಾಯಿತು.
ಹಾಗಾಗಿ, ಅಲ್ಪ ಮೊತ್ತದ ಗುರಿ ಪಡೆದಿದ್ದ ನ್ಯೂಜಿಲೆಂಡ್ ಸುಲಭವಾಗಿಯೇ ಜಯ ತನ್ನದಾಗಿಸಿಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ 195 ರನ್‌ಗಳಿಸಿದ್ದ ನಾಯಕ ಬ್ರೆಂಡನ್ ಮೆಕಲಂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 441 ಮತ್ತು ಎರಡನೇ ಇನಿಂಗ್ಸ್ 30.4 ಓವರ್‌ಗಳಲ್ಲಿ 2 ವಿಕೆಟ್‌ಗೆ 107(ಟೇಲರ್ ಅಜೇಯ 39, ವಿಲಿಯಂಮ್ಸನ್ ಅಜೇಯ 31, ಎರಂಗ 20ಕ್ಕೆ 1).
ಶ್ರೀಲಂಕಾ ಮೊದಲ ಇನಿಂಗ್ಸ್ 138 ಮತ್ತು ಎರಡನೇ ಇನಿಂಗ್ಸ್ 154 ಓವರ್‌ಗಳಲ್ಲಿ 407(ಆ್ಯಂಜೆಲೋ ಮ್ಯಾಥ್ಯೂಸ್ 66, ಶಮಿಂಡಾ ಎರಂಗ ಅಜೇಯ 45, ಟಿಮ್ ಸೌಥಿ 91ಕ್ಕೆ 4, ಟ್ರೆಂಡ್ ಬೌಲ್ಟ್ 100ಕ್ಕೆ 4).