ಸರಣಿ ಗೆದ್ದ ಬಾಂಗ್ಲಾ 
ಕ್ರೀಡೆ

ಬಾಂಗ್ಲಾಗೆ ಸರಣಿ

ಆರಂಭಿಕ ಅನುಭವಿ ಬ್ಯಾಟ್ಸ್‍ಮನ್ ತಮೀಮ್ ಇಕ್ಬಾಲ್‍ರ ಆಕರ್ಷಕ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಎರಡನೇ ಏಕದಿನ ಕ್ರಿಕೆಟ್...

ಮೀರ್ಪುರ್: ಆರಂಭಿಕ ಅನುಭವಿ ಬ್ಯಾಟ್ಸ್‍ಮನ್ ತಮೀಮ್ ಇಕ್ಬಾಲ್‍ರ ಆಕರ್ಷಕ ಶತಕದ ನೆರವಿನಿಂದ ಬಾಂಗ್ಲಾದೇಶ ತಂಡ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲೂ ಪಾಕಿಸ್ತಾನ ವಿರುದ್ಧ 7 ವಿಕೆಟ್‍ಗಳ ಜಯ ದಾಖಲಿಸಿದೆ.

ಆ ಮೂಲಕ ಇನ್ನೂ ಒಂದು ಪಂದ್ಯ ಉಳಿದಿರುವಂತೆಯೇ ಆತಿಥೇಯ ಬಾಂಗ್ಲಾದೇಶ ಆಟಗಾರರು ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಮುನ್ನಡೆಯೊಂದಿಗೆ ಗೆದ್ದುಕೊಂಡಿದ್ದಾರೆ. ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 50 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 239
ರನ್‍ಗಳಿಸಿತು.

ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ಇನ್ನೂ 11.5 ಓವರುಗಳು ಉಳಿದಿರುವಂತೆಯೇ ಕೇವಲ 3 ವಿಕೆಟ್ ಕಳೆದುಕೊಂಡು 240 ರನ್‍ಗಳಿಸಿ ಗೆಲವು ಸಂಪಾದಿಸಿತು. ತಮೀಮ್ ಇಕ್ಬಾಲ್ 116 ಎಸೆತಗಳಲ್ಲಿ 17 ಬೌಂಡರಿ, 1 ಸಿಕ್ಸರ್ ಸೇರಿದಂತೆ ಅಜೇಯ 116 ರನ್‍ಗಳಿಸಿ ಬಾಂಗ್ಲಾದ ಸರಣಿಗೆ ಗೆಲವಿಗೆ ನೆರವಾದರು. ತಮೀಮ್ ಪಂದ್ಯಶ್ರೇಷ್ಠ ಗೌರವಕ್ಕೂ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ 50 ಓವರುಗಳಲ್ಲಿ 6 ವಿಕೆಟ್‍ಗೆ 239 (ನಸೀಂ ಅಜೇಯ 77, ವಾಹಬ್ ಅಜೇಯ 51, ಹ್ಯಾರಿಸ್ 44, ಅಜರ್ 36, ಶಕೀಬ್ 51ಕ್ಕೆ2).
ಬಾಂಗ್ಲಾದೇಶ 38.1 ಓವರುಗಳಲ್ಲಿ 3 ವಿಕೆಟ್‍ಗೆ 240 (ಇಕ್ಬಾಲ್ ಅಜೇಯ 116, ಮುಷ್ತೀಕರ್ ರಹೀಂ 65, ಅಜ್ಮಲ್ 49ಕ್ಕೆ1).

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

"ಆಪ್ ಕಾರ್ಯಕರ್ತ ನನ್ನ ಕುಟುಂಬವನ್ನು ನಿಂದಿಸಿದ, ಅವರದ್ದೇ ಭಾಷೆಯಲ್ಲಿ ಉತ್ತರ ಕೊಟ್ಟೆ: ಕಪಾಳಮೋಕ್ಷ ವಿವಾದದ ಬಗ್ಗೆ ದೆಹಲಿ ಸಚಿವ ಪರ್ವೇಶ್ ವರ್ಮಾ

ಏಕದಿನ ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ Virat Kohli: ಸಚಿನ್ ನಂತರ ಈ ದಾಖಲೆ ಬರೆದ ವಿಶ್ವದ 2ನೇ ಆಟಗಾರ!

ಟೈರ್‌ ಬ್ಲಾಸ್ಟ್‌, 100 ಮೀ. ಕಾರು ಸ್ಕಿಡ್; ನಿಯಂತ್ರಣ ತಪ್ಪಿದ ಫಾರ್ಚುನರ್‌, ಭಯಾನಕ ಅಪಘಾತ, BJP ಶಾಸಕ ಪಾರು! Video

ವೈದ್ಯರ ಮೇಲೆ ಬೆಲ್ಟ್‌, ದೊಣ್ಣೆಯಿಂದ ಹಲ್ಲೆ; 5 ಲಕ್ಷ ರೂಗೆ ಬೇಡಿಕೆ, Bigg Boss ಖ್ಯಾತಿಯ ನಟಿ ವಿರುದ್ಧ ಕೇಸ್‌, ಬಂಧನ

ದಸರಾ-ದೀಪಾವಳಿ ಮುನ್ನ ಗ್ರಾಹಕರಿಗೆ ಶಾಕ್; AC, TV, ವಾಷಿಂಗ್‌ ಮಷಿನ್‌ ಸೇರಿ ಹಲವು ವಸ್ತುಗಳ ಬೆಲೆ ಏರಿಕೆ, 'ದುಬಾರಿ' ಪಟ್ಟಿ ಇಲ್ಲಿದೆ!