ಪ್ರೋ ಕಬಡ್ಡಿ 
ಕ್ರೀಡೆ

ಉದ್ಯಾನ ನಗರಿಗೆ ಕಾಲಿಟ್ಟ ಕಬಡ್ಡಿ ಜ್ವರ

ಅಭಿಮಾನಿಗಳ ಆಸಕ್ತಿಯ ಕೊರತೆ ಹಾಗೂ ಸರಿಯಾದ ಪ್ರೋತ್ಸಾಹ ಸಿಗದೇ ಮೂಲೆಗುಂಪಾಗಿದ್ದ ಕಬಡ್ಡಿ ಕ್ರೀಡೆ. ಈಗ ಪ್ರೋ ಕಬಡ್ಡಿ ಆಗಿ ಮರುಹುಟ್ಟು ಪಡೆದು...

ಬೆಂಗಳೂರು: ಅಭಿಮಾನಿಗಳ ಆಸಕ್ತಿಯ ಕೊರತೆ ಹಾಗೂ ಸರಿಯಾದ ಪ್ರೋತ್ಸಾಹ ಸಿಗದೇ ಮೂಲೆಗುಂಪಾಗಿದ್ದ ಕಬಡ್ಡಿ  ಕ್ರೀಡೆ. ಈಗ ಪ್ರೋ ಕಬಡ್ಡಿ ಆಗಿ ಮರುಹುಟ್ಟು ಪಡೆದು ವಿಜೃಂಭಿಸುತ್ತಾ ಸಾಗಿದೆ. ದೇಶದಾದ್ಯಂತ ನಡೆದ ಕಬಡ್ಡಿ ಹವಾ ಇದೀಗ ಉದ್ಯಾನನಗರಿಗೆ ಕಾಲಿರಿಸಿದ್ದು, ಬೆಂಗಳೂರಿನ ಕ್ರೀಡಾ ರಸಿಕರು ಕಬಡ್ಡಿ ಹಬ್ಬದ ಗುಂಗಿಗೆ ಒಳಗಾಗಿದ್ದಾರೆ. ಬುಧವಾರದಿಂದ ಶನಿವಾರದವರೆಗೆ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಟೂರ್ನಿಯ ಏಳನೇ ಹಂತದ ಪಂದ್ಯಗಳು ನಡೆಯಲಿವೆ.ಕಳೆದ ವರ್ಷ ಪ್ರಾಯೋಗಿಕವಾಗಿ ನಡೆಸಿದ ಚೊಚ್ಚಲ ಆವೃತ್ತಿಯಲ್ಲಿ ಕಂಡ ಅಭೂತಪೂರ್ವ ಯಶಸ್ಸಿನ ನಂತರ ಈ ಬಾರಿ ಪ್ರೊ  ಕಬಡ್ಡಿ ಲೀಗ್, ತನ್ನ ಗುಣಮಟ್ಟವನ್ನು ಹೇಗೋ ಹಾಗೆಯೇ ರೋಚಕತೆಯನ್ನೂ ಹೆಚ್ಚಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದೆ.
ಆರಂಭದಲ್ಲೇ ಅಗ್ನಿಪರೀಕ್ಷೆ ನಾಲ್ಕುದಿನಗಳ ಕಾಲ ನಡೆಯಲಿರುವ  ಈ ಹಂತದ ಸ್ಪರ್ಧಾವಳಿಯಲ್ಲಿ ಬೆಂಗಳೂರು ಬುಲ್ಸ್ ತಂಡ 4 ಪಂದ್ಯಗಳನ್ನಾಡಲಿದ್ದು, ಉತ್ತಮ ಪ್ರದರ್ಶನ
ನೀಡುವ ವಿಶ್ವಾಸದಲ್ಲಿದೆ. ಬುಧವಾರ ನಡೆಯಲಿರುವ ಮೊದಲ ಪಂದ್ಯದಲ್ಲೇ ಬೆಂಗಳೂರು ಬುಲ್ಸ್ ತಂಡ, ಅತ್ಯುತ್ತಮ ಲಯದಲ್ಲಿರುವ ಬಲಿಷ್ಠ ಯು ಮುಂಬಾ ತಂಡವನ್ನು ಎದುರಿಸಲಿದೆ. ಯು ಮುಂಬಾ ತಂಡ ಕಳೆದ ಬಾರಿ ಪ್ರಶಸ್ತಿ ಸುತ್ತಿನಲ್ಲಿ ಎಡವಿ ನಿರಾಸೆ ಅನುಭವಿಸುತ್ತಾ , ಈ ಬಾರಿ ಮಿಂಚಿನ ಆಟವಾಡಿ ಪ್ರತಿಸ್ಪರ್ಧಿ ತಂಡಗಳಲ್ಲಿ
ನಡುಕ ಹುಟ್ಟಿಸಿದೆ. ಆಡಿರುವ 10 ಪಂದ್ಯಗಳಲ್ಲಿ 9ರಲ್ಲಿ ಜಯ ಸಾಧಿಸಿ ಕೇವಲ 1ರಲ್ಲಿ ಸೋಲುಂಡಿರುವ ಯು ಮುಂಬಾದ ಅತ್ಯದ್ಭುತ ಫಾರ್ಮ್  ಬುಲ್ಸ್ ಪಾಲಿಗೆ ಮಹಾನ್ ಸವಾಲೆನಿಸಿದೆ. ಬೆಂಗಳೂರು ಬುಲ್ಸ್ ಸಹ ಬಲಿಷ್ಠವಾಗಿದ್ದು, ತವರು ಅಭಿಮಾನಿಗಳ ಬೆಂಬಲ ಅದಕ್ಕೆ ವರವಾಗಲಿದೆ.ನಾಯಕ ಮಂಜೀತ್ ಚಿಲ್ಲರ್ ಆಲ್ರೌಂಡರ್ ಆಟ ತಂಡದ ಪ್ರಬಲ ಶಕ್ತಿಯಾಗಿದೆ. ಇತ್ತ ಮುಂಬೈ ನಾಯಕ ಅನುಪ್ ಕುಮಾರ್ ಜತೆಗೆ ಮೋಹಿತ್ ಚಿಲ್ಲರ್, ಶಬ್ಬೀರ್ ಬಾಪು ಸೇರಿದಂತೆ ಇತರೆ ಆಟಗಾರರು ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಒಟ್ಟಾರೆ ಉದ್ಯಾನನಗರಿಯ ಮೊದಲ ಪಂದ್ಯವೇ ರೋಚಕವಾಗಿರುವ ಸಾಧ್ಯತೆ ಇದೆ.


ಬೆಂಗಳೂರಿನಲ್ಲಿನ ಪಂದ್ಯಗಳ ವೇಳಾಪಟ್ಟಿ

ಬುಲ್ಸ್ ಗೆ  ಭರ್ಜರಿ ಸ್ವಾಗತ
ತವರಿನ ತಂಡ ಬೆಂಗಳೂರು ಬುಲ್ಸ್ ತಂಡವನ್ನು ಪ್ರೋತ್ಸಾಹಿಸಲು ಅಭಿಮಾನಿಗಳು  ತುದಿಗಾಲಲ್ಲಿ ನಿಂತಿದ್ದು, ಭರ್ಜರಿ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ
ಬೆಂಗಳೂರು ಬುಲ್ಸ್ ತಂಡ ಸ್ಥಿರ ಪ್ರದರ್ಶನ ನೀಡುವ ಮೂಲಕ ಉತ್ತಮ ಹಾದಿಯಲ್ಲಿ ಸಾಗುತ್ತಾ ಬಂದಿದೆ. ತವರಿನಾಚೆ ಸತತ 9 ಪಂದ್ಯಗಳನ್ನಾಡಿದೆಯಾದರೂ ಪ್ರತಿ ಪಂದ್ಯದಲ್ಲೂ
ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸಹಜವಾಗಿಯೇ ಬೆಂಗಳೂರು ಬುಲ್ಸ್ ತಂಡ ತವರಿನ ಅಂಗಣದಲ್ಲಿ ಕ್ರೀಡಾಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಬುಲ್ಸ್ ತಂಡ ತವರಿನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯಲ್ಲಿದೆ.

ಬೆಂಗಳೂರಿನಲ್ಲಿ ಪಂದ್ಯಗಳ ವೇಳಾಪಟ್ಟಿ

ಆ 12 ಬೆಂಗಳೂರು -ಮುಂಬೈ ರಾತ್ರಿ 8.00
ಆ 13 ಬಂಗಾಳ -ಪುಣೆ ರಾತ್ರಿ 8.00
ಆ.13 ಬೆಂಗಳೂರು -ಜೈಪುರ ರಾತ್ರಿ 9.00
ಆ 14 ಬಂಗಾಳ- ಪಾಟ್ನಾ ರಾತ್ರಿ 8.00
ಆ 14 ಬೆಂಗಳೂರು - ಡೆಲ್ಲಿ ರಾತ್ರಿ  9.00
ಆ 15 ಪಾಟ್ನಾ  -ಮುಂಬಾ ರಾತ್ರಿ 8.00
ಆ 15 ಬೆಂಗಳೂರು  -ಹೈದರಬಾದ್ ರಾತ್ರಿ 9.00

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್

ಲೂಟಿಕೋರನ ಭಯವೇ? ಖರ್ಗೆಯವರೇ, ಭಿಕ್ಷೆ ಬೇಡುವ 'ದಯನೀಯ ಸ್ಥಿತಿ' ಬರಬಾರದಿತ್ತು! ಜೆಡಿಎಸ್ ಟಾಂಗ್

ಕುರ್ಚಿ ಕದನ: ಡಿಕೆಶಿ ಸಿಎಂ ಆಗುವುದು ಯಾವಾಗ?; ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

SCROLL FOR NEXT