ಕ್ರೀಡೆ

ವಿಜಯ್ ಹಜಾರೆ ನಾಕೌಟ್ ಇಂದಿನಿಂದ

Vishwanath S

ಬೆಂಗಳೂರು: ಪ್ರತಿಷ್ಠಿತ ವಿಜಯ್ ಹಜಾರೆ ಪಂದ್ಯಾವಳಿಯು ನಿರ್ಣಾಯಕ ಘಟ್ಟಕ್ಕೆ ಬಂದಿದ್ದು, ನಾಲ್ಕು ಕ್ವಾರ್ಟರ್ ಫೈನಲ್ ಪಂದ್ಯಗಳು ಸೇರಿದಂತೆ ಎರಡು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಕ್ಕೆ ಬೆಂಗಳೂರು ಸಜ್ಜಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2ನೇ, 3ನೇ ಕ್ವಾರ್ಟರ್ ಫೈನಲ್ ಪಂದ್ಯಗಳು, 2ನೇ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಡಿ.23 ರಂದು ನಡೆಯಲಿರುವ ಮೊದಲ ಹಾಗೂ ಎರಡನೇ ಕ್ವಾರ್ಟರ್ ಫೈನಲ್ ನಲ್ಲಿ ಕ್ರಮವಾಗಿ ಹಿಮಾಚಲ ಪ್ರದೇಶ-ಪಂಜಾಬ್ ಹಾಗೂ ಜಾರ್ಖಂಡ್-ದೆಹಲಿ ಸೆಣಸಲಿವೆ. ಡಿ.24ರಂದು ನಡೆಯಲಿರುವ 3ನೇ ಹಾಗೂ ನಾಲ್ಕನೇ ಕ್ವಾರ್ಟರ್ ಫೈನಲ್‍ಗಳಲ್ಲಿ ಕ್ರಮವಾಗಿ, ತಮಿಳುನಾಡು- ಉತ್ತರ ಪ್ರದೇಶ, ವಿದರ್ಭ- ಗುಜರಾತ್ ಮುಖಾಮುಖಿಯಾಗಲಿವೆ. ಡಿ. 26ರಂದು ಎರಡೂ ಸೆಮಿಫೈನಲ್‍ಗಳು ನಡೆಯಲಿದ್ದು, ಫೈನಲ್ ಡಿ. 28ರಂದು ನಡೆಯಲಿದೆ.

SCROLL FOR NEXT