ಕ್ರೀಡೆ

ವಿರಾಟ್ ಕೊಹ್ಲಿ ತುರಾಯಿಗೆ ಮತ್ತೊಂದು ಗರಿ

Srinivasamurthy VN

ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಟೀಂ ಇಂಡಿಯಾ ಉಪನಾಯಕ ವಿರಾಟ್ ಕೊಹ್ಲಿ, ಏಕದಿನ ವೃತ್ತಿ ಜೀವನದಲ್ಲಿ ವೇಗವಾಗಿ 24 ಶತಕಗಳನ್ನು  ಸಿಡಿಸಿದ ಹಾಗೂ ವೇಗವಾಗಿ 7 ಸಾವಿರ ರನ್ ಗಡಿ ದಾಟಿದ ಬ್ಯಾಟ್ಮ ಮನ್ ಎಂಬ ಹೆಗ್ಗಳಿಕೆ ಪಡೆದರು.

ಆರಂಭಿಕ  ರೋಹಿತ್ ಶರ್ಮಾ ವಿಕೆಟ್ ಪತನಗೊಂಡ ನಂತರ ಕ್ರೀಸ್‍ಗೆ ಬಂದಿಳಿದಿದ್ದ ಕೊಹ್ಲಿ, ಒಟ್ಟು 117  ಎಸೆತಗಳನ್ನು ಎದುರಿಸಿದ ಅವರು, 7 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ ತಮ್ಮ  24ನೇ ಶತ ಕ  ಪೂರೈಸಿದರು.
 
2008ರಲ್ಲಿ ಶ್ರೀಲಂಕಾ ವಿರುದ್ಧದ  ಸರಣಿಯ ಮೂಲಕ ಏಕದಿನ  ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದ ಅವರು, ಇದೀಗ 161 ಇನಿಂಗ್ಸ್ ಗಳಿಂದ 24 ಶತಕ ದಾಖಲಿಸಿದಂತಾಗಿದೆ. ಈ ಮೂಲಕ, ಈ  ಹಿಂದೆ ಇದೇ ಸಾಧನೆ ಮಾಡಿದ್ದ ಸಚಿನ್ ತೆಂಡೂಲ್ಕರ್ (219) ಸಾಧನೆಗಳನ್ನು ಹಿಂದಿಕ್ಕಿದ್ದಾರೆ ಕೊಹ್ಲಿ. ಇನ್ನು, 161 ಇನಿಂಗ್ಸ್ ನಲ್ಲಿ 7000 ರನ್ ಗಡಿ ದಾಟಿ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ ಎಬಿ ಡಿವಿಲಿ  ಯರ್ಸ್ (166 ಇನಿಂಗ್ಸ್) ಅವರ ನ್ನುಹಿಂದಿಕ್ಕಿ, ನೂ ತನ  ದಾಖಲೆ  ನಿರ್ಮಿಸಿದ್ದಾರೆ.

SCROLL FOR NEXT