ರೋಮ್ ಕುಸ್ತಿ: ಭಜರಂಗ್ ಪೂನಿಯಾ-ರವಿಕುಮಾರ್ ದಹಿಯಾಗೆ ಸ್ವರ್ಣ ಪದಕ 
ಕ್ರೀಡೆ

ರೋಮ್  ಕುಸ್ತಿ: ಭಜರಂಗ್ ಪೂನಿಯಾ-ರವಿಕುಮಾರ್ ದಹಿಯಾಗೆ ಸ್ವರ್ಣ ಪದಕ

ಭಾರತದ ಹಿರಿಯ ಕುಸ್ತಿಪಟು ಭಜರಂಗ್ ಪೂನಿಯಾ ಹಾಗೂ ರವಿಕುಮಾರ್ ದಹಿಯಾ ಅವರು ಇಲ್ಲಿ ನಡೆಯುತ್ತಿರುವ ರೋಮ್ ಶ್ರೇಯಾಂಕದ ಸರಣಿಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ರೋಮ್: ಭಾರತದ ಹಿರಿಯ ಕುಸ್ತಿಪಟು ಭಜರಂಗ್ ಪೂನಿಯಾ ಹಾಗೂ ರವಿಕುಮಾರ್ ದಹಿಯಾ ಅವರು ಇಲ್ಲಿ ನಡೆಯುತ್ತಿರುವ ರೋಮ್ ಶ್ರೇಯಾಂಕದ ಸರಣಿಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಫೈನಲ್ ಹಣಾಹಣಿಯಲ್ಲಿ ಭಜರಂಗ್ ಪೂನಿಯಾ ಅವರು ಅಮೆರಿಕದ ಜೋರ್ಡನ್ ಒಲಿವರ್ ವಿರುದ್ಧ 4-3 ಅಂತರದಲ್ಲಿ ಗೆದ್ದು ಸ್ವರ್ಣ ಪದಕ ತನ್ನದಾಗಿಸಿಕೊಂಡರು. 61 ಕೆ.ಜಿ ಮತ್ತೊಂದು ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ರವಿಕುಮಾರ್ ದಹಿಯಾ ಅವರು 6-0 ಅಂತರದಲ್ಲಿ ಕಜಕಸ್ತಾನದ ನುರ್ಬೋಲತ್ ಅಬ್ದುಲಿಯೆವ್ ವಿರುದ್ಧ ಗೆದ್ದು ಬಂಗಾರ ಗೆದ್ದರು.

ಭಾರತದ ಜಿತೇಂದರ್ (74 ಕೆ.ಜಿ) ಹಾಗೂ ದೀಪಕ್ ಪೂನಿಯಾ (86 ಕೆ.ಜಿ) ಅವರು ಇದಕ್ಕೂ ಮುನ್ನ ಸೋಲು ಅನುಭವಿಸಿದ್ದರು. ಕಿರಿಯರ ವಿಶ್ವ ಚಾಂಪಿಯನ್ ಹಾಗೂ ಕಳೆದ ವರ್ಷ ಹಿರಿಯರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ವಿಜೇತ ದೀಪಕ್ ಮೊದಲನೇ ಸುತ್ತಿನ ಪಂದ್ಯದಲ್ಲಿಯೇ 1-11 ಅಂತರದಲ್ಲಿ ಆ್ಯಡ್ರಿಯನ್ ರಾಮೋಸ್ ಎದುರು ಪರಾಭವಗೊಂಡರು.

ಜಿತೇಂದರ್ ಅವರು ಉಕ್ರೈನ್ ಡೆನ್ಯಾಸ್ ಪ್ಯಾವ್ಲೊವ್ ವಿರುದ್ಧ ಮೊದಲನೇ ಸುತ್ತಿನಲ್ಲಿ 10-1 ಅಂತರದಲ್ಲಿ ಜಯ ಸಾಧಿಸಿದ್ದರು. ಆದರೆ, ಎರಡನೇ ಸುತ್ತಿನಲ್ಲಿ ಟರ್ಕಿಯ ಸೊನೆರ್ ಡೆರ್ಮಿಟಸ್ ವಿರುದ್ಧ 0-4 ಅಂತರದಲ್ಲಿ ಸೋಲು ಅನುಭವಿಸಿದ್ದರು.

ಭಜರಂಗ್ ಹಾಗೂ ರವಿಕುಮಾರ್ ದಹಿಯಾ ಅವರು ದೇಶಕ್ಕೆ ಪದಕ ಗೆದ್ದ ವಿನೇಶ್ ಪೊಗಟ್, ಅಶು ಮಲಿಕ್ ಹಾಗೂ ಸಜನ್ ಭನ್ವಾಲ್, ಗುರುಪ್ರೀತ್ ಸಿಂಗ್ ಹಾಗೂ ಸುನೀಲ್ ಕುಮಾರ್ ಅವರ ಪಟ್ಟಿಗೆ ಸೇರ್ಪಡೆಯಾದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Hormuz ಜಲಸಂಧಿಯಲ್ಲಿ ಮಹಾ ಸಂಘರ್ಷ: Iran 3 ತೈಲ ಟ್ಯಾಂಕರ್‌ಗಳ ಮೇಲೆ ಅಮೆರಿಕಾ ದಾಳಿ; 'ಕಠಿಣ ಪ್ರತೀಕಾರ'ದ ಶಪಥ ಮಾಡಿದ ಟೆಹ್ರಾನ್!

100 ದಿನಗಳ ಹೊಸ್ತಿಲಲ್ಲಿ ಡಿಕೆಶಿ ಸರ್ಕಾರ: ಸಾಧನೆಗಳ ಪಟ್ಟಿ ಹಿಡಿದು ಕಾಂಗ್ರೆಸ್ ಅಖಾಡಕ್ಕೆ, ‘ಯು-ಟರ್ನ್’ ಅಸ್ತ್ರದೊಂದಿಗೆ ವಿಪಕ್ಷಗಳ ಕೌಂಟರ್‌..!

ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ SBI Good News : 12,000 ಸಿಬ್ಬಂದಿ ನೇಮಕ, 250 ಶಾಖೆ ತೆರೆಯುವುದಾಗಿ ಘೋಷಣೆ

ಭಾರತದಲ್ಲಿ ಯೂಟ್ಯೂಬರ್, ಕಂಟೆಂಟ್‌ ಕ್ರಿಯೇಟರ್ಸ್‌ ಹಾವಳಿ: ದೊಡ್ಡ ಪ್ರಮಾಣದಲ್ಲಿ ಆದಾಯ ಬರ್ತಿದೆಯಾ? ಹೇಗೆಲ್ಲಾ ದುಡ್ಡು ಮಾಡಬಹುದು ಗೊತ್ತಾ?

ಡಿಕೆಶಿಗೆ ಟಕ್ಕರ್ ಕೊಡಲು ಹೊಸ ತಂತ್ರ: AHINDA ಮುರಿದು ‘HINDA’ ಕಟ್ಟಲು ಸಿದ್ದು ಮಾಸ್ಟರ್ ಪ್ಲ್ಯಾನ್, ಮಗನ ಭವಿಷ್ಯಕ್ಕಾಗಿ ಹಳೆಯ ಮಿತ್ರರಿಗೆ ಗೇಟ್‌ಪಾಸ್?