ಕ್ರಿಸ್ಟಿಯಾನೋ ರೊನಾಲ್ಡೋ MARIA LYSAKER
ಕ್ರೀಡೆ

ಜಾಗತಿಕ ಫುಟ್ಬಾಲ್ ಪ್ರೇಮಿಗಳಿಗೆ ಆಘಾತ; 23 ವರ್ಷಗಳ ಪಯಣಕ್ಕೆ Cristiano Ronaldo ವಿದಾಯ; ಕಣ್ಣೀರ Video ಬಿಡುಗಡೆ!

41 ವರ್ಷದ ರೊನಾಲ್ಡೊ, ಪೋರ್ಚುಗಲ್ ರಾಷ್ಟ್ರೀಯ ತಂಡದ ಪರ ತಾವು ಧರಿಸುತ್ತಿದ್ದ ಐತಿಹಾಸಿಕ 7ನೇ ಸಂಖ್ಯೆಯ ಜೆರ್ಸಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ ಎಂದು ಭಾವುಕ ಸಂದೇಶ ನೀಡಿದ್ದಾರೆ.

ಲಿಸ್ಬನ್: ಫುಟ್‌ಬಾಲ್ ಜಗತ್ತಿನ ದಿಗ್ಗಜ ಆಟಗಾರ, ಪೋರ್ಚುಗಲ್ ತಂಡದ ಮಾಜಿ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ್ದಾರೆ.

23 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆಯುವ ನಿರ್ಧಾರವನ್ನು ಅವರು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಬಿಡುಗಡೆ ಮಾಡುವ ಮೂಲಕ ಪ್ರಕಟಿಸಿದ್ದಾರೆ.

41 ವರ್ಷದ ರೊನಾಲ್ಡೊ, ಪೋರ್ಚುಗಲ್ ರಾಷ್ಟ್ರೀಯ ತಂಡದ ಪರ ತಾವು ಧರಿಸುತ್ತಿದ್ದ ಐತಿಹಾಸಿಕ 7ನೇ ಸಂಖ್ಯೆಯ ಜೆರ್ಸಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ ಎಂದು ಭಾವುಕ ಸಂದೇಶ ನೀಡಿದ್ದಾರೆ.

ರೊನಾಲ್ಡೋ ಹೇಳಿದ್ದೇನು?

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ರೊನಾಲ್ಡೋ, "ಪೋರ್ಚುಗಲ್ ಜನರೇ, ನಮ್ಮ ರಾಷ್ಟ್ರೀಯ ತಂಡದ 7ನೇ ಸಂಖ್ಯೆಯ ಜೆರ್ಸಿಯನ್ನು ಹಿಂತಿರುಗಿಸುವ ಸಮಯ ಬಂದಿದೆ. ಕಳೆದ 23 ವರ್ಷಗಳಿಂದ ಈ ಜೆರ್ಸಿ ಧರಿಸುವ, ಅದನ್ನು ರಕ್ಷಿಸುವ ಮತ್ತು ವಿಶ್ವದ ವಿವಿಧ ಕ್ರೀಡಾಂಗಣಗಳಲ್ಲಿ ಪೋರ್ಚುಗಲ್ ತಂಡವನ್ನು ಪ್ರತಿನಿಧಿಸುವ ಗೌರವ ನನಗೆ ಸಿಕ್ಕಿತ್ತು. ಈಗ ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಸಮಯ ಬಂದಿದೆ" ಎಂದು ರೊನಾಲ್ಡೊ ಹೇಳಿದ್ದಾರೆ.

234 ಪಂದ್ಯ, 146 ಗೋಲು: ದಾಖಲೆಗಳ ಸರದಾರ

2003ರ ಆಗಸ್ಟ್‌ನಲ್ಲಿ ಪೋರ್ಚುಗಲ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ರೊನಾಲ್ಡೊ, ಕಳೆದ 23 ವರ್ಷಗಳಲ್ಲಿ ಹಲವು ಐತಿಹಾಸಿಕ ಸಾಧನೆಗಳನ್ನು ಮಾಡಿದ್ದಾರೆ. ರೊನಾಲ್ಡೋ ಪೋರ್ಚುಗಲ್ ಪರ 234 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಅಂತೆಯೇ 146 ಅಂತಾರಾಷ್ಟ್ರೀಯ ಗೋಲುಗಳನ್ನು ಗಳಿಸಿದ್ದಾರೆ.

2016ರಲ್ಲಿ ಪೋರ್ಚುಗಲ್ ತಂಡಕ್ಕೆ ಯುರೋ ಕಪ್ ಗೆಲ್ಲಿಸಿಕೊಟ್ಟಿದ್ದಾರೆ. 2019 ಮತ್ತು 2025ರಲ್ಲಿ UEFA ನೇಷನ್ಸ್ ಲೀಗ್ ಪ್ರಶಸ್ತಿ ಗೆದ್ದಿದ್ದಾರೆ. ಆರು ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ್ದಾರೆ. ಪುರುಷರ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನಾಡಿದ ಹಾಗೂ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ದಾಖಲೆ ರೊನಾಲ್ಡೊ ಹೆಸರಿನಲ್ಲಿದೆ.

ಭಾವುಕ ಸಂದೇಶ ಹಂಚಿಕೊಂಡ ರೊನಾಲ್ಡೊ

ತಮ್ಮ ವಿದಾಯದ ವಿಡಿಯೋದಲ್ಲಿ ರೊನಾಲ್ಡೊ ಕೇವಲ ಗೋಲು, ದಾಖಲೆ ಮತ್ತು ಟ್ರೋಫಿಗಳ ಬಗ್ಗೆ ಮಾತ್ರ ಮಾತನಾಡಿಲ್ಲ. ಪೋರ್ಚುಗಲ್ ಅಭಿಮಾನಿಗಳು, ಸಹ ಆಟಗಾರರು, ತರಬೇತುದಾರರು, ಕುಟುಂಬದವರು ಹಾಗೂ ತಮ್ಮ ವೃತ್ತಿಜೀವನದಲ್ಲಿ ನೆರವಾದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

"ನಾನು ನಿಮ್ಮನ್ನು ಸಂತೋಷಪಡಿಸಿದ್ದರೆ, ನನ್ನ ಗೋಲುಗಳು ನಿಮ್ಮಲ್ಲಿ ಹೆಮ್ಮೆ ಮೂಡಿಸಿದ್ದರೆ, ನನ್ನ ಈ ಪಯಣ ಸಾರ್ಥಕವಾಗಿದೆ. ಪೋರ್ಚುಗಲ್ ಯಾವಾಗಲೂ ನನ್ನ ಹೃದಯದಲ್ಲಿರುತ್ತದೆ" ಎಂಬ ಭಾವನಾತ್ಮಕ ಸಂದೇಶ ನೀಡಿದ್ದಾರೆ.

ರೊನಾಲ್ಡೊ ಅವರ ಈ ನಿರ್ಧಾರದಿಂದ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಒಂದು ಅದ್ಭುತ ಅಧ್ಯಾಯ ಅಂತ್ಯಗೊಂಡಿದೆ. ಆದರೆ ಕ್ಲಬ್ ಫುಟ್‌ಬಾಲ್‌ನಿಂದ ಅವರು ನಿವೃತ್ತಿಯಾಗಿಲ್ಲ. ಸದ್ಯ ಸೌದಿ ಅರೇಬಿಯಾದ ಅಲ್ ನಸ್ರ್ ತಂಡದ ಪರ ಆಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಮಧ್ಯಂತರ ಚುನಾವಣೆ ಎಫೆಕ್ಟ್: ಷೇರುಪೇಟೆ ಭಾರಿ ಏರಿಕೆ, ಒಂದೇ ದಿನದಲ್ಲಿ 8 ಲಕ್ಷ ಕೋಟಿ ರೂ. ಲಾಭ!

'ದಗಾಕೋರ ಸರ್ಕಾರ, ಚಿತ್ತಾಪುರನ ಏನ್ ಚಿಕಾಗೋ ಮಾಡಿದ್ದೀರಾ? PUC ಫೇಲ್ ಆದ ನೀವು ರಾಜ್ಯದ ಗೃಹಮಂತ್ರಿ': ಪ್ರತಾಪ್ ಸಿಂಹ ವಾಗ್ದಾಳಿ

ತಮಿಳುನಾಡಿನ ದೇವಾಲಯವೊಂದಕ್ಕೆ 5 ಕೋಟಿ ರೂ.ಗೂ ಹೆಚ್ಚು ನಗದು, 160 ಗ್ರಾಂ ಚಿನ್ನ, 1,540 ಗ್ರಾಂ ಬೆಳ್ಳಿ ಕಾಣಿಕೆ!

ಮಿಚಿಗನ್‌ನಲ್ಲಿ ಅಬ್ದುಲ್ಲಾ ಗೆದ್ದಾಯ್ತು': ಅಮೆರಿಕ ಚುನಾವಣೆ ನಂತರ ಮುಂದಿನ ಸರದಿ ಉತ್ತರಪ್ರದೇಶ - ಅಸಾದುದ್ದೀನ್ ಓವೈಸಿ

IPL 2027: 4 ಆಟಗಾರರ ವಿನಿಮಯ; CSK ಸೇರಿ ಬರೋಬ್ಬರಿ ₹7 ಕೋಟಿ ಕಳೆದುಕೊಂಡ SRH ಸ್ಟಾರ್ ಆಟಗಾರ!