52 ವರ್ಷ ಕಿರಿಯ ಯುವತಿಯನ್ನು ಮದುವೆಯಾದ ಮಲೇಷ್ಯಾ ಫುಟ್‌ಬಾಲ್ ದಿಗ್ಗಜ ಅಬ್ದಾ ಅಲಿಫ್! Online Desk
ಕ್ರೀಡೆ

ಪ್ರೀತಿಗಿಲ್ಲ ವಯಸ್ಸಿನ ಹಂಗು! 20ರ ಯುವತಿಯ ಕೈಹಿಡಿದ 72ರ ವಯಸ್ಸಿನ ಖ್ಯಾತ ಫುಟ್‌ಬಾಲ್ ಮಾಂತ್ರಿಕ; ಕುಟುಂಬಸ್ಥರು ಹೇಳಿದ್ದೇನು?

ಖ್ಯಾತ ಫುಟ್‌ಬಾಲ್ ದಿಗ್ಗಜ, 72 ವರ್ಷದ ಡಾತುಕ್ ಅಬ್ದಾ ಅಲಿಫ್ ಅವರು ತನಗಿಂತ 52 ವರ್ಷ ಚಿಕ್ಕ ಪ್ರಾಯದ ಅಂದರೆ 20 ವರ್ಷದ ಯುವತಿಯ ಕೈಹಿಡಿದು ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಮದುವೆ ಫೋಟೋಗಳು ಆಶ್ಚರ್ಯವನ್ನು ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಕೌಲಾಲಂಪುರ್ (ಮಲೇಷ್ಯಾ): ಪ್ರೀತಿ ಮತ್ತು ಸಂಬಂಧಗಳಿಗೆ ಯಾವುದೇ ವಯಸ್ಸಿನ ಮಿತಿಗಳಿಲ್ಲ ಎಂಬುದು ಜಗತ್ತಿನಾದ್ಯಂತ ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಅದಕ್ಕೆ ಸಾಕ್ಷಿ ಫುಟ್‌ಬಾಲ್ ದಿಗ್ಗಜರೊಬ್ಬರ ಮದುವೆ; ಹೌದು, ಮಲೇಷ್ಯಾದ ಖ್ಯಾತ ಫುಟ್‌ಬಾಲ್ ದಿಗ್ಗಜ, 72 ವರ್ಷದ ಡಾತುಕ್ ಅಬ್ದಾ ಅಲಿಫ್ ಅವರು ತನಗಿಂತ 52 ವರ್ಷ ಚಿಕ್ಕ ಪ್ರಾಯದ ಅಂದರೆ 20 ವರ್ಷದ ಯುವತಿಯ ಕೈಹಿಡಿದು ಹೊಸ ಜೀವನಕ್ಕೆ ಕಾಲಿರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಇವರ ಮದುವೆ ಫೋಟೋಗಳು ಆಶ್ಚರ್ಯವನ್ನು ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಯಾರು ಈ ಡಾತುಕ್ ಅಬ್ದಾ ಅಲಿಫ್?

ಅಬ್ದಾ ಅಲಿಫ್ ಅವರು 1970 ಮತ್ತು 1980 ರ ದಶಕದಲ್ಲಿ ಮಲೇಷ್ಯಾ ರಾಷ್ಟ್ರೀಯ ಫುಟ್‌ಬಾಲ್ ತಂಡದ ಅತ್ಯಂತ ಪ್ರಸಿದ್ಧ ಮಿಡ್‌ಫೀಲ್ಡರ್ ಆಟಗಾರರಾಗಿದ್ದು, 1980 ರ ಮಾಸ್ಕೋ ಒಲಿಂಪಿಕ್ಸ್‌ಗೆ ಮಲೇಷ್ಯಾ ತಂಡ ಅರ್ಹತೆ ಪಡೆಯುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಮಲೇಷ್ಯಾದಲ್ಲಿ ಇವರ ಕ್ರೀಡಾ ಸಾಧನೆಗೆ ಅತ್ಯುನ್ನತ ಗೌರವ ಸೂಚಕವಾಗಿ 'ಡಾತುಕ್' ಎಂಬ ಬಿರುದನ್ನು ನೀಡಲಾಗಿದೆ. ಇನ್ನು,  ಅಬ್ದಾ ಅಲಿಫ್ ಅವರಿಗೆ ಸದ್ಯ 72 ವರ್ಷ ವಯಸ್ಸಾಗಿದ್ದು, ಅವರು ವರಿಸಿರುವ ಯುವತಿಗೆ ಕೇವಲ 20 ವರ್ಷ ಎನ್ನಲಾಗಿದೆ. ಅಂದರೆ, ಈ ದಂಪತಿಗಳ ನಡುವೆ ಬರೋಬ್ಬರಿ 52 ವರ್ಷಗಳ ವಯಸ್ಸಿನ ಅಂತರವಿದೆ.

ಮದುವೆ ನಡೆದಿದ್ದು ಎಂದು?

ಈ ಜೋಡಿಯ ವಿವಾಹವು ಕಳೆದ ಆಗಸ್ಟ್ 27 ರಂದು ಮಲೇಷ್ಯಾದ 'ಕೋಲಾ ಟೆರೆಂಗಾನು' ಎಂಬಲ್ಲಿ ಅತ್ಯಂತ ಸರಳವಾಗಿ ನಡೆದಿತ್ತು. ಇತ್ತೀಚೆಗೆ ಇವರ ಮದುವೆಯ ಸಾಂಪ್ರದಾಯಿಕ ಉಡುಪಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆದಾಗ ಈ ವಿಷಯ ಇಡೀ ವಿಶ್ವಕ್ಕೆ ಬೆಳಕಿಗೆ ಬಂದಿದೆ. ಇನ್ನು, ಅಬ್ದಾ ಅಲಿಫ್ ಅವರ ಸಹೋದರ ಹಾಗೂ ಮಲೇಷ್ಯಾ ತಂಡದ ಮಾಜಿ ಆಟಗಾರ ಮತ್ತು ತರಬೇತುದಾರರಾದ 'ಡಾತುಕ್ ಯೂನುಸ್ ಅಲಿಫ್' ಅವರು ಈ ಮದುವೆಯನ್ನು ಅಧಿಕೃತವಾಗಿ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. "ಇಬ್ಬರ ಕುಟುಂಬದವರ ಸಂಪೂರ್ಣ ಒಪ್ಪಿಗೆ ಮತ್ತು ಆಶೀರ್ವಾದದೊಂದಿಗೇ ಈ ಮದುವೆ ನಡೆದಿದೆ, ಸದ್ಯ ಅವರಿಬ್ಬರೂ ಹನಿಮೂನ್‌ನಲ್ಲಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!

ದಿಶಾ ಸಾಲಿಯನ್ ಸಾವು ಪ್ರಕರಣದಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಹೆಸರು; ಎಫ್‌ಐಆರ್ ದಾಖಲಿಸಿದ CBI!

ಬಿಜೆಪಿ ಆಗ್ರಹಿಸಿದಂತೆ ಇನ್ಸ್​ಪೆಕ್ಟರ್​ ಧನಂಜಯ್​ನನ್ನು ಅಮಾನತು ಮಾಡೋಕ್ಕಾಗಲ್ಲ: ಪ್ರಿಯಾಂಕ್ ಖರ್ಗೆ

BBK 13: ನಿನ್ನನ್ನು ಎತ್ತಿ ಕುಕ್ಕಿ ಬಿಡ್ತೀನಿ.. ಸೌಂದರ್ಯಗೆ ಮಂಜು ಆವಾಜ್; 'Biggboss' ಮನೆಯಲ್ಲಿ ಕೈ ಮೀರಿದ ಪರಿಸ್ಥಿತಿ!