ಮಕರಂದ/ದೋಣಿ

ನಗಬೇಕು...

ಸ್ಟೂಡೆಂಟ್ : ನಾನು ವಿಶ್ವಸುಂದರಿಯ ಮಗ...
ಟೀಚರ್ : ಸುಳ್ಳು ಹೇಳ ಬೇಡ..
ಸ್ಟೂಡೆಂಟ್ : ಸತ್ಯವಾಗಿ ಹೇಳ್ತೀನಿ.. ನನ್ನ ತಂದೆಯ ಹೆಸರು ವಿಶ್ವ, ತಾಯಿಯ ಹೆಸರು ಸುಂದರಿ.

ಟೀಚರ್ : ಸ್ಕೂಲಿಗೆ ದಿನಾಲೂ ನಡ್ಕೊಂಡು ಬರ್ತಾ ಇದ್ದೀಯಂತೆ?
ಮರಿಗುಂಡ : ಹೌದು ಟೀಚರ್
ಟೀಚರ್ : ಗೌರ್ಮೆಂಟ್ ಕೊಟ್ಟಿರುವ ಫ್ರೀ ಸೈಕಲ್ ಏನೋ ಆಯ್ತು ?
ಮರಿಗುಂಡ : ಎಲ್ಲರಿಗೂ ಉಪಯೋಗವಾಗಲಿ ಎಂದು ಬಾಡಿಗೆಗೆ ಬಿಟ್ಟಿದ್ದೀನಿ ಟೀಚರ್.

ಮೇಷ್ಟ್ರು ಮಕ್ಕಳಿಗೆ ಸತಿಸಾವಿತ್ರಿಯ ಕಥೆ ಹೇಳುತ್ತಿದ್ದರು...

ಮೇಷ್ಟ್ರು : ಮಕ್ಕಳೇ, ಸಾವಿತ್ರಿ ತನ್ನ ಪತಿಗಾಗಿ ಸಾವಿನ ದೇವರು ಯಮನ ಬಳಿ ಹೋರಾಡಿ ಪತಿಯನ್ನು ಉಳಿಸಿಕೊಂಡಳು, ಈ ಕಥೆಯ ನೀತಿ ಪಾಠವೇನು ?
ಮರಿಗುಂಡ : ಹೆಂಡತಿಯಿಂದ ಪತಿಯನ್ನು ಬಚಾವ್ ಮಾಡಲು ಯಮನಿಂದಲೂ ಸಾಧ್ಯವಿಲ್ಲ...!!

ವನಜಮ್ಮ : ಏನು ಅನ್ಯಾಯರೀ ಇದೂ ಸರಸ್ವತಮ್ಮನೋರೇ, ಇವತ್ತು 17 ಸಲ ಕರೆಂಟು ಹೋಗಿತ್ತು ರೀ.
ಸರಸ್ವತಮ್ಮ : ಯಾಕ್ರೀ ಅನ್ಯಾಯ ವನಜಮ್ಮಾ, 16 ಸಲ ಕರೆಂಟು ವಾಪಸ್ಸು ಬಂತಲ್ಲಾ, ಅದು ನ್ಯಾಯ ಅಲ್ವಾ ?

ಬಡಪಾಯಿ ಗಂಡನ ಬೊಂಬಾಟ್ ಹೆಂಡ್ತಿ ರಾಗವಾಗಿ ಕೇಳಿದಳು. ರೀ... ಇವತ್ತಿಗೆ ನಮ್ಮ ಮದುವೆ ಆಗಿ 4 ವರ್ಷ ಆಯ್ತು, ಇವತ್ತಾದ್ರೂ ನಾನು ಈವರೆಗೆ ನೋಡ್ದೇ ಇರೋ ಸ್ಥಳಕ್ಕೆ ಕರೆದುಕೊಂಡು ಹೋಗಿ ಊಟ ಹಾಕಿಸ್ತೀರಾ ?
ಬಡಪಾಯಿ ಗಂಡ ಕೂಲಾಗಿ ಹೇಳ್ದ; ಸರಿ, ನಡಿ ಅಡಿಗೇಮನೆಗೆ... ನಾಲ್ಕು ವರ್ಷದಿಂದ ನೀನಿದನ್ನ ನೋಡೇ ಇಲ್ಲ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು