ಆಸೆ
ಜೀವಿಸಿರುವಾಗ
ಎಲ್ಲಾ ನನಗೇ ಬೇಕೆಂದು
ಬಯಸುವ ಗುಣ
ಜೀವ ಹೋದ ಮೇಲೆ
ಒಂದು ದಿನವೂ
ಬೇಡವಾದ ಹೆಣ.
ಬಟ್ಟೆ
ಹುಟ್ಟುವಾಗ ಬೆತ್ತಲೆ
ಮರಣದಲ್ಲಿ ಬೆತ್ತಲೆ
ನಡುವಿನಲ್ಲಿ ಬಟ್ಟೆಗೆ ಬೆಲೆ!
ಸಾರ್ಥಕತೆ
ಮಕ್ಕಳಿಗೆ
ಭವಿಷ್ಯ ಕಟ್ಟಿಕೊಟ್ಟ
ಹೆತ್ತವರು ಮುಪ್ಪಿನಲ್ಲಿ
ವೃದ್ದಾಶ್ರಮ ಸೇರಿದರು.
ದ್ವೇಷ
ಮೂರು ಕಡೆ ನೀರು
ಒಂದು ಕಡೆ ಭೂಮಿ
ಭಾರತ ದೇಶ
ಆದರೂ ನೀರಿಗೆ ಕಾದಾಟ
ನೀಗದ ದ್ವೇಷ.
-ಜಿ.ಎನ್. ರಾಘವೇಂದ್ರ,
ತುಮಕೂರು.