ಹೊಸಿಲು ದಾಟಿದವಳಲ್ಲ ನನ್ನವ್ವ
ಮನೆಯೊಳಗೆ ಬಂದಿ
ನಾಲ್ಕು ಗೋಡೆಗಳಗಡಿ
ಗಂಡ, ಮಕ್ಕಳೆಂಬ ಸದಾ ಗಡಿಬಿಡಿ
ಸೂರ್ಯನೇಳದ ಮುಂಚೆ
ಎಚ್ಚರ ಅವಳಿಗೆ
ಗಡಿಯಾರಕೆ ಸೋಲು
ತಣ್ಣೀರ ಸ್ನಾನ,
ಗಂಡ ಮಕ್ಕಳಿಗೆ
ಉರಿವ ಒಲೆಮೇಲಿನ
ಬಿಸಿನೀರಿನ ಸನ್ಮಾನ,
ಆರುಮೊಳದ ಸೀರೆ
ಹೊದಿಕೆ ಒಳಗೆ
ಉಪವಾಸ ವ್ರತ
ತುಳಸಿ, ಗೌರಿ
ಸತಿಸಾವಿತ್ರಿ ಸಾಕ್ಷಿ,
ನಿತ್ಯ ಸಾಲು ಊಟ
ನನ್ನವ್ವನಿಗೆ ಮುಸುರೆ
ಗಂಜಊಿಟ
ಮಕ್ಕಳು, ಮೊಮ್ಮಕ್ಕಳು
ಅಜ್ಜಿ ಎಂಬ ಹಿರಿಮೆ
ಮೈಮುರಿತ ದುಡಿಮೆ
ಕಾಲಚಕ್ರದ ಮಹಿಮೆ
ಚುಕ್ಕಿಗಳ ಒಡನಾಟ
ಕಡೆಪುಟದ ಪಾಟಿ
- ಬಿ.ಎಸ್. ರಾಜಲಕ್ಷ್ಮಿ