ನೂರು ಕವಿಗಳ, ನೂರಾರು ಕವಿತೆಗಳ ಸಮಗ್ರಲೋಕದ ಹೊತ್ತಗೆ 'ಶತಮಾನಂಭವತಿ'. ಕನ್ನಡ, ಕವಿತೆ, ಕಥನ (3ಓ) ಇದನ್ನು ಹೊರತರುತ್ತಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಮೇ 12ರಂದು 'ಶತಮಾನಂಭವತಿ' ಬಿಡುಗಡೆಯಾಗಲಿದೆ. ಅಂದು ಸಂಜೆ 5ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ- ಸಂಗೀತ ನಿರ್ದೇಶಕ ಹಂಸಲೇಖ, ಕಥೆಗಾರ ವಸುಧೇಂದ್ರ ಮತ್ತು ಲೇಖಕ ಮಂಜುನಾಥ ಕೊಳ್ಳೇಗಾಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.