ಮಕರಂದ/ದೋಣಿ

ಬರೆಯುವುದು ಜೀವಾವಧಿ ಶಿಕ್ಷೆ

ಕೃತಿಯೊಂದು ಹೇಗೆ ಮೈದಾಳುತ್ತದೆ ಎಂದು ವಿವರಿಸುವುದು ಕಷ್ಟ. ಎಲ್ಲ ಪುಸ್ತಕಗಳೂ ಒಂದೇ ಥರ ಮೂಡುವುದಿಲ್ಲ.

ಕೃತಿಯೊಂದು ಹೇಗೆ ಮೈದಾಳುತ್ತದೆ ಎಂದು ವಿವರಿಸುವುದು ಕಷ್ಟ. ಎಲ್ಲ ಪುಸ್ತಕಗಳೂ ಒಂದೇ ಥರ ಮೂಡುವುದಿಲ್ಲ. ಸಾಮಾನ್ಯವಾಗಿ, ಮೊದಲು ಒಂದು ಐಡಿಯಾ ಮೂಡುತ್ತದೆ, ಮುಖ್ಯ ಪಾತ್ರಗಳು ಅದನ್ನು ಹಿಂಬಾಲಿಸುತ್ತವೆ. ನಾವೀಗ ಐಡಿಯಾಗಳ ಸಮುದ್ರದಲ್ಲೇ ವಾಸಿಸುತ್ತಿದ್ದೇವೆ. ಆದರೆ ಅದು ಅದರಷ್ಟಕ್ಕೇ ಕಾದಂಬರಿ ಆಗಲಾರದು. ಆದರೆ ಪಾತ್ರವೊಂದು ಐಡಿಯಾದ ಜತೆ ತಳುಕು ಹಾಕಿಕೊಂಡರೆ, ಆಲ್ಲಿದೆ ಕಾದಂಬರಿಯ ಚಾಲಕ ಶಕ್ತಿ.
ಒಮ್ಮೆ ಕಾದಂಬರಿ ಹುಟ್ಟಿ ಬೆಳೆಯತೊಡಗಿತೆಂದರೆ, ಆಮೇಲೆ ನಾನು ಕಥಾವಸ್ತುವಿನ ಬಗ್ಗೆ ಯೋಚಿಸುವುದೇ ಇಲ್ಲ. ಈಗ ಪಾತ್ರಗಳೇ ಕಾದಂಬರಿಯನ್ನು ಎಳೆದೊಯ್ಯುತ್ತವಾದ್ದರಿಂದ, ಕಥನ ಸ್ವಯಂಚಾಲಿತವಾಗುತ್ತದೆ. ಈಗ ನೀವಂದುಕೊಂಡಂತೆ, ಕಥೆಯೇ ನಿಮ್ಮ ಹಿಡಿತದಲ್ಲಿಲ್ಲವೋ ಎನ್ನಿಸಲು ಆರಂಭವಾಗುತ್ತದೆ. ಕಥೆಯೊಂದು ಪೂರ್ಣಗೊಳ್ಳಲು ಬೇಕಾದ ಕೆಲವು ಅಂಶಗಳು ಅದರಲ್ಲಿರಬೇಕು, ಇಲ್ಲವಾದರೆ ಕೃತಿ ಅರ್ಧಕ್ಕೆ ನಿಂತುಬಿಡುತ್ತದೆ.
ಬರೆಯುವುದು ಕಷ್ಟ. ಅದೊಂಥರ ಕುಸ್ತಿ ಇದ್ದ ಹಾಗೆ. ಐಡಿಯಾ ಹಾಗೂ ಕತೆಗಳ ಜತೆಗಿನ ಕುಸ್ತಿ. ಅದೇ ಹೊತ್ತಿಗೆ, ಅದು ಉದ್ವೇಗಕರ ಕೂಡ. ನೀವು ಬರೆಯಲು ಹೊರಟರೆ ನಿಮ್ಮ ಬದುಕು ಇದ್ದ ಹಾಗೇ ಇರುವುದಿಲ್ಲ. ಉತ್ಪ್ರೇಕ್ಷಿಸಿ ಹೇಳುವುದಾದರೆ, ಬರವಣಿಗೆಯನ್ನು ಅಂಗೀಕರಿಸುವುದೆಂದರೆ ಜೀವಾವಧಿ ಶಿಕ್ಷೆಯನ್ನು ಸ್ವೀಕರಿಸಿದಂತೆ.
ಕತೆ ಹೇಳುವುದಕ್ಕೂ ಬರೆಯುವುದಕ್ಕೂ ವ್ಯತ್ಯಾಸವಿದೆ. ನಾನು ನನ್ನ ಮಕ್ಕಳು ಸಣ್ಣವರಿದ್ದಾಗ ಅವರಿಗೆ ಮಲಗುವ ಮುನ್ನ ಕತೆ ಹೇಳುತ್ತಿದ್ದೆ. ನಾನು ಕತೆ ಹೇಳುವಾಗ ಮತ್ತು ಕತೆ ಓದಿ ಹೇಳುವಾಗ, ಅವರ ಕಣ್ಣ ಮಿಂಚಿನಲ್ಲಿ ವ್ಯತ್ಯಾಸವಿರುತ್ತಿತ್ತು. ಕತೆ ಹೇಳುವುದನ್ನು ಕೇಳಲು ಮಕ್ಕಳಿಗೆ ಹೆಚ್ಚು ಇಷ್ಟ ಎನ್ನುವುದರಲ್ಲಿ ಅನುಮಾನವಿಲ್ಲ. ನಾವು ಮೌಖಿಕದಿಂದ ಲಿಖಿತಕ್ಕೆ ಎಲ್ಲವೂ ಬದಲಾಗುವ ಕಾಲಘಟ್ಟದಲ್ಲಿದ್ದೇವೆ. ಮೌಖಿಕವು ಲಿಖಿತವಾಗಿ ಬಂದದ್ದು ಸಾಹಿತ್ಯದ ಬಲುದೊಡ್ಡ ಕೊಡುಗೆ.
(ಇತ್ತೀಚೆಗೆ ತೀರಿಕೊಂಡ ನೈಜೀರಿಯನ್ ಲೇಖಕ ಚಿನುವ ಅಚಿಬೆ ಸಂದರ್ಶನವೊಂದರಲ್ಲಿ ಹೇಳಿಕೊಂಡ ಮಾತುಗಳಿವು). 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video