ಮಕರಂದ/ದೋಣಿ

ಪರೋಪಕಾರ

ರಾಮರಾಯರು ಮತ್ತು ಲಕ್ಷ್ಮಮ್ಮನವರು ತಮ್ಮ ಹತ್ತಿರದ ಸಂಬಂಧಿಯೊಬ್ಬರ ಮದುವೆಗೆಂದು ಮಗನ ಜೊತೆ ಕಾರಿನಲ್ಲಿ ಹೊರಟರು. ವಧು- ವರರಿಗೆ ಆಶೀರ್ವದಿಸಿ ಸಾಯಂಕಾಲದ ಹೊತ್ತಿಗೆ ತಿರುಗಿ ಹೊರಡಲಣಿಯಾದರು. ಅಷ್ಟೊತ್ತಿಗಾಗಲೇ ಜಿಟಿಜಿಟಿ ಮಳೆ ಶುರುವಾಗಿತ್ತು. ರಾಯರು, 'ಕಾರಿನಲ್ಲಿ ಹೇಗೂ ಇನ್ನೂ ಇಬ್ಬರಿಗಾಗುವಷ್ಟು ಸ್ಥಳ ಇದೆ. ಈ ಮಳೆಯಲ್ಲಿ ಹೇಗೆ ಬಸ್ ಸ್ಟ್ಯಾಂಡ್ವರೆಗೆ ಹೋಗುತ್ತಾರೆ' ಅಂತ ಹೇಳಿ, ತನ್ನ ಇಬ್ಬರು ಆಪ್ತ ಸ್ನೇಹಿತರನ್ನು ಕರೆದುಕೊಂಡು ಬಂದರು.
ರಾಯರು ಕಾರಿನ ಹತ್ತಿರ ಹೋಗುವಷ್ಟರಲ್ಲಿ ತಮ್ಮ ಹತ್ತಿರದ ಸಂಬಂಧದ ಇಬ್ಬರು ದಂಪತಿಗಳು ನಿಂತಿದ್ದರು. ಲಕ್ಷ್ಮಮ್ಮನವರೂ ಸಹ ಅದೇ ಉದ್ದೇಶದಿಂದ ಅವರನ್ನು ಕರೆದುಕೊಂಡು ಬಂದಿದ್ದರು. ಅಷ್ಟು ಹೊತ್ತಿಗಾಗಲೇ ಅವರು ಬಂದಿದ್ದ ಮದುವೆ ದಿಬ್ಬಣದ ವಾಹನಗಳೆಲ್ಲವೂ ಹೋಗಿಯಾಗಿದ್ದವು. ಸರಿ, ಈಗ ಏನ್ಮಾಡೋದು ಅಂತ ರಾಮರಾಯ ದಂಪತಿಗಳು ಚಿಂತೆಗೀಡಾದರು.
ಅವಾಗ ಅವರ ಮಗ ಹೇಳಿದ "ಯಾರಾದ್ರೂ ಇಬ್ಬರನ್ನ ಒಪ್ಪಿಸಿ. ಅವರನ್ನು ಬಸ್ಸಿಗೆ ಕಳುಹಿಸೋಣ" ಅಂತ.
ಆದ್ರೆ ಅವರನ್ನ ವಾಪಸ್ ಕಳಿಸಿದ್ರೆ ಸರಿಯಾಗಲ್ಲ. ನಮ್ಮ ಬಗ್ಗೆ ಏನು ತಿಳಿದುಕೊಂಡಾರು? ಅನ್ನೋ ಭಾವನೆ ಈ ದಂಪತಿಗಳಿಬ್ಬರದು. ಮಗನಿಗೋ ಇವರಿಬ್ಬರ ಈ ಉದಾರತನ ಕಂಡು ತುಂಬಾ ಕೋಪ ಬಂದಿತ್ತು. ಏನ್ ಮಾಡೋದು ಅಂತ ಅವರು ಯೋಚನೆ ಮಾಡ್ತಾ ಇದ್ರೆ, ಬಂದ ಅತಿಥಿಗಳಾರೂ ತಾವಾಗಿಯೇ ಬಸ್ಸಿಗೆ ಹೋಗಲು ಸಿದ್ಧರಾಗಲಿಲ್ಲ. ಕೊನೆಗೆ ಏನು ಮಾಡೋದು ಅಂತ ತಿಳಿಯದ ರಾಯರು ಮತ್ತು ಲಕ್ಷ್ಮಮ್ಮನವರು ತಾವೇ ಬಸ್ಸಿಗೆ ಹೋಗ್ತೀವಿ ಅಂತ ಸಿದ್ಧರಾದಾಗ, ಲಿಫ್ಟ್ಗಾಗಿ ಬಂದ ಅತಿಥಿಗಳು ಅವರ ಮಗನಿಗೆ ಹೇಳಿದ್ರು; "ತಮ್ಮಾ ಅವರನ್ನ ಸ್ವಲ್ಪ ಬಸ್ ಸ್ಟ್ಯಾಂಡಿಗೆ ಬಿಟ್ ಬಾರಪ್ಪಾ, ನಂತರ ನಾವು ಹೋಗೋಣ". ಈ ಮಾತುಗಳಿಂದ ಕೋಪಗೊಂಡ ಮಗ, "ಬರ್ತಾರೆ ಬಿಡಿ. ಅವರಿಗೆಲ್ಲ ಅನುಭವವಿದೆ" ಅಂತ ಹೇಳಿ ಅತಿಥಿಗಳನ್ನು ಕರೆದುಕೊಂಡು ಕಾರಿನಲ್ಲಿ ಹೊರಟುಹೋದ.
ದಂಪತಿಗಳಿಬ್ಬರೂ ತಮ್ಮ ಉದಾರತನ- ಮೂರ್ಖತನದ ಜೊತೆ ಬರಿಗಾಲಲ್ಲಿ (ಲಕ್ಷ್ಮಮ್ಮನವರು ಮದುವೆಯ ಗದ್ದಲದಲ್ಲಿ ಚಪ್ಪಲಿಗಳನ್ನು ಕಳೆದುಕೊಂಡಿದ್ದರು) ಮಳೆಯಲ್ಲಿ ನೆನೆಯುತ್ತಾ ಬಸ್ ನಿಲ್ದಾಣಕ್ಕೆ ಬಂದ ತಮ್ಮ ಊರಿನ ಬಸ್ ಹತ್ತಿದರು.
ಈಗಲೂ ದಂಪತಿಗಳಿಬ್ಬರೂ ಎಲ್ಲಿಯಾದರೂ ಸಂಬಂಧಿಕರ ಸಭೆ- ಸಮಾರಂಭಗಳಿಗೆ ಹೊರಟು ನಿಂತರೆ ಮಕ್ಕಳೆಲ್ಲರೂ ತಮ್ಮತಮ್ಮಲ್ಲೇ ಮುಸಿ ಮುಸಿ ನಗುತ್ತಾ ಬೀಳ್ಕೊಡುತ್ತಾರೆ.

- ಸುಜಾತ ಆರ್. ತುಕ್ಕನವರ,
ಜಮಖಂಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್