ತಿಮ್ಮ: ಗುಂಡಾ, ಏನೋ ನಿನ್ ಕಥೆ. ಯಾಕೆ ನಿನ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ರು?
ಗುಂಡ: ಏನ್ ಹೇಳ್ತಿ ತಿಮ್ಮ, ಬಿಲ್ಡಿಂಗ್‌ಗೆ ಬೆಂಕಿ ತಗುಲಿತ್ತು. ನಾನು ಬಿಲ್ಡಿಂಗ್ ಒಳಗೆ ಹೋಗಿ ನಾಲ್ಕು ಜನರನ್ನು ಹೊರಗೆ ಎಳೆದು ತಂದಿದ್ದೆ.
ತಿಮ್ಮ: ನೀನು ಒಳ್ಳೆ ಕೆಲಸಾನೆ ಮಾಡಿದ್ದೀಯಾ. ಆದ್ರೆ ಪೊಲೀಸರು ನಿನ್ನನ್ನು ಯಾಕೆ ಬಂಧಿಸಿದರು?
ಗುಂಡ: ಆ ನಾಲ್ಕು ಜನರು ಅಗ್ನಿಶಾಮಕ ದಳದವರಾಗಿದ್ದರು!
---
ಗುಂಡ: ಡಾಕ್ಟರ್ ಈಗ ನನ್ನ ಮಗನ ಕಂಡೀಶನ್ ಹೇಗಿದೆ?
ಡಾಕ್ಟರ್: ಹೆದರಿಕೊಳ್ಳುವಂಥದ್ದು ಏನೂ ಇಲ್ಲ. ನರ್ಸ್ ಬಂದಾಗಲೆಲ್ಲ ಪಿಳಿ ಪಿಳಿ ಕಣ್ಣುಬಿಟ್ಟು ನಗ್ತಾ ಇರ್ತಾನೆ.
---
ಜಡ್ಜ್: ನಿನ್ನನ್ನು ಯಾಕೆ ಬಂಧಿಸಿದ್ದಾರೆ?
ಕೈದಿ: ಬಹಳ ಬೇಗ ಶಾಪಿಂಗ್ ಮಾಡಿದ್ದಕ್ಕೆ...
ಜಡ್ಜ್: ಬೇಗ ಶಾಪಿಂಗ್ ಮಾಡಿದ್ದು ತಪ್ಪಲ್ಲ. ಆದರೆ ಎಷ್ಟು ಬೇಗ್ ಶಾಪಿಂಗ್ ಮಾಡಿದ್ದೀಯಾ?
ಕೈದಿ: ಅಂಗಡಿ ತೆರೆಯುವ ಮೊದಲು!
---
ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಹೆಂಗಸರು ಸೀಟ್‌ಗಾಗಿ ಜಗಳವಾಡುತ್ತಿದ್ದರು. ಎಲ್ಲರೂ ತಮಾಷೆ ನೋಡುತ್ತಿದ್ದರೇ ಹೊರತು ಕಂಡಕ್ಟರ್ ಸೇರಿ ಯಾರೂ ಜಗಳ ಬಿಡಿಸೋಕೆ ಹೋಗಲಿಲ್ಲ. ಗುಂಡ ಅಖಾಡಕ್ಕೆ ಇಳಿದು ಹೇಳಿಬಿಟ್ಟ: 'ಯಾಕಮ್ಮ ಸೀಟ್‌ಗಾಗಿ ಜಗಳ ಆಡ್ತಾ ಇದ್ದೀರಾ? ಇಬ್ಬರಲ್ಲಿ ಯಾರಿಗೆ ವಯಸ್ಸು ಜಾಸ್ತಿ ಆಗಿದೆಯೋ ಅವರು ಸೀಟ್‌ನಲ್ಲಿ ಕೂತ್ಕೊಳ್ಳಿ...' ಆಗಇಬ್ಬರು ಹೆಂಗಸರೂ ಮುಖ ಮುಖ ನೋಡಿ ಜಗಳ ಆಡೋದು ನಿಲ್ಲಿಸಿಬಿಟ್ರು. ಸೀಟ್ ಖಾಲಿಯಾಗಿಯೇ ಇತ್ತು.
---
ಗುಂಡ: ನಾನು ಇವತ್ತು ಒಬ್ಬನ ಜೀವ ಉಳಿಸಿದೆ.
ತಿಮ್ಮ: ಹೌದಾ. ಎನ್ ಮಾಡ್ದೆ?
ಗುಂಡ: ಭಿಕ್ಷುಕನ ಬಳಿ ಹೋಗಿ ನಿನಗೆ ಸಾವಿರ ರೂಪಾಯಿ ಕೊಟ್ಟರೆ ಎನ್ ಮಾಡ್ತೀಯಾಂತ ಕೇಳ್ದೆ.
ತಿಮ್ಮ: ಅದಕ್ಕೆ ಅವನು ಏನ್ ಹೇಳ್ದ?
ಗುಂಡ: ನಿಶ್ಚಿಂತೆಯಿಂದ ಸಾಯುತ್ತೇನೆ ಅಂದ. ದುಡ್ಡು ಕೊಡದೆ ವಾಪಸ್ ಬಂದು ಅವನ ಪ್ರಾಣ ಉಳಿಸಿದೆ.