ಟೀಚರ್: ಒಂದು ಪ್ರಶ್ನೆ ಕೇಳ್ತೀನಿ ಯಾರು ಸರಿಯಾಗಿ ಉತ್ತರ ಹೇಳ್ತೀರಿ?
ಗುಂಡ: ನಾನು ಉತ್ತರ ಹೇಳ್ತೀನಿ ಮೇಷ್ಟ್ರೆ.
ಟೀಚರ್: ಓಕೆ. ಅಪ್ಪ ನೀರು ಗೊಬ್ಬರ ಹಾಕಿ ಕಷ್ಟಪಟ್ಟು ಬೆಳೆದಿದ್ದ ಪಪ್ಪಾಯಿ ಹಣ್ಣಿನ ಮರವನ್ನು ಆತನ ಮಗ ಕೊಡಲಿಯಿಂದ ಒಂದೇ ಏಟಿಗೆ ಕಡಿದುಬಿಟ್ಟ ಮತ್ತು ತಾನೇ ಕಡಿದದ್ದನ್ನು ಒಪ್ಪಿಕೊಂಡ ಕೂಡ.
ಗುಂಡ: ಅದೆಲ್ಲ ಸರಿ ಸರ್. ಮೊದ್ಲು ಪ್ರಶ್ನೆ ಕೇಳಿ.
ಟೀಚರ್: ಮಗ ತನ್ನ ತಪ್ಪನ್ನು ಒಪ್ಪಿಕೊಂಡರೂ ತಂದೆ ಏಕೆ ಅವನನ್ನು ಶಿಕ್ಷಿಸಲಿಲ್ಲ?
ಗುಂಡ: ಯಾಕೆಂದರೆ, ಆತನ ಕೈಯಲ್ಲಿ ಕೊಡಲಿ ಇತ್ತು!
---
ಟೀಚರ್: ಬಾರಯ್ಯ ಇಲ್ಲಿ. ಈ ನಕಾಶೆಯಲ್ಲಿ ಉತ್ತರ ಅಮೆರಿಕ ಎಲ್ಲಿದೆಯೆಂದು ಹೇಳಯ್ಯ.
ಗುಂಡ ಬಂದು ಭೂಪಟದಲ್ಲಿದ್ದ ಉತ್ತರ ಅಮೆರಿಕಾವನ್ನು ಗುರುತಿಸುತ್ತಾನೆ.
ಟೀಚರ್: ಶಭಾಷ್. ಈಗ ಹೇಳು ಅಮೆರಿಕ ಕಂಡುಹಿಡಿದವರು ಯಾರು?
ಗುಂಡ: ನಾನೇ ಸಾರ್.